ಆ್ಯಪ್ನಗರ

ಸಿಕ್ಸ್‌ ಸಿಗ್ಮಾ ಗ್ರೀನ್‌ ಬೆಲ್ಟ್‌ ಗೊತ್ತೇ? ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌

ನಿಮ್ಮ ಉದ್ಯೋಗದಾವಕಾಶವನ್ನು ಹೆಚ್ಚಿಸುವ 'ಸಿಕ್ಸ್‌ ಸಿಗ್ಮಾ' ಎಂಬ ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಬಗ್ಗೆ ಮಾಹಿತಿ ಇಲ್ಲಿದೆ.

Vijaya Karnataka 26 Jul 2019, 5:59 pm
ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂಬುದನ್ನು ನಾವು ಪ್ರತಿದಿನ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಇದರ ಜತೆಯಲ್ಲಿಯೇ ಇರುವ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಇಂದಿನ ಯುವಜನತೆ ಸರಿಯಾದ ಸಿದ್ಧತೆ ಮಾಡಿಕೊಳ್ಳುತ್ತಿಲ್ಲ. ಅಗತ್ಯ ಕೌಶಲಗಳನ್ನು ಕಲಿತುಕೊಳ್ಳುತ್ತಿಲ್ಲ ಎಂಬ ಮಾತೂ ಇದೆ. ಹೊಸ ಹೊಸ ಕೋರ್ಸ್‌ಗಳನ್ನು ಮಾಡಿ ನಾವು ನಮಗಿರುವ ಉದ್ಯೋಗಾಕವಾಶವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಆ ರೀತಿಯ ಕೋರ್ಸ್‌ಗಳಲ್ಲಿ 'ಸಿಕ್ಸ್‌ ಸಿಗ್ಮಾ' ಕೋರ್ಸ್‌ ಒಂದು.
Vijaya Karnataka Web IASSC


ಕೆಲವು ವರ್ಷಗಳ ಹಿಂದೆ 'ಸಿಕ್ಸ್‌ ಸಿಗ್ಮಾ' ಎಂಬ ಹೆಸರನ್ನು ಬಹುತೇಕರು ಕೇಳಿರಲಿಕ್ಕಿಲ್ಲ. ಈಗ ಇದು ಬಹುಬೇಡಿಕೆಯ ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌. ಸಿಕ್ಸ್‌ ಸಿಗ್ಮಾ ಎಂದರೆ ವ್ಯವಹಾರದ ಪ್ರಕ್ರಿಯೆಯನ್ನು ಅಭಿವೃದ್ಧಿಗೊಳಿಸುವ ಟೆಕ್ನಿಕ್‌ ಮತ್ತು ಟೂಲ್‌ಗಳ ಗೊಂಚಲು. 1986ರಲ್ಲಿ ಬಿಲ್‌ ಸ್ಮಿತ್‌ ಎಂಬ ಎಂಜಿನಿಯರ್‌ ಮೊಟೊರೊಲಾದಲ್ಲಿ ಕೆಲಸ ಮಾಡುತ್ತಿರುವಾಗ ಈ ತಂತ್ರವನ್ನು ಪರಿಚಯಿಸಿದರು. 1995ರಲ್ಲಿ ಜಾಕ್‌ ಸ್ಮಿತ್‌ ಎಂಬವರು ಜನರಲ್‌ ಎಲೆಕ್ಟ್ರಿಕ್‌ ಕಂಪನಿಯಲ್ಲಿ ಈ ತಂತ್ರವನ್ನು ಹೆಚ್ಚು ಪ್ರಚಲಿತಗೊಳಿಸಿದರು. ಕಳೆದ ಕೆಲವು ವರ್ಷಗಳಿಂದ ಈ ಸರ್ಟಿಫಿಕೇಷನ್‌ ಕೋರ್ಸ್‌ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.

ಯಾವೆಲ್ಲ ಬೆಲ್ಟ್‌ಗಳಿವೆ?
ಸಿಕ್ಸ್‌ ಸಿಗ್ಮಾದಲ್ಲಿ ಹಲವು ಬೆಲ್ಟ್‌ಗಳಿವೆ. ಗ್ರೀನ್‌ ಬೆಲ್ಟ್‌, ಬ್ಲ್ಯಾಕ್‌ ಬೆಲ್ಟ್‌ ಮತ್ತು ಮಾಸ್ಟರ್‌ ಬ್ಲ್ಯಾಕ್‌ ಬೆಲ್ಟ್‌ಗಳೂ ಪ್ರಮುಖವಾದದ್ದು. ಎಲ್ಲೊ ಮತ್ತು ವೈಟ್‌ ಬೆಲ್ಟ್‌ನ ಸಿಕ್ಸ್‌ ಸಿಗ್ಮಾ ಕೋರ್ಸ್‌ಗಳೂ ಇವೆ. 2016ರ ಸರ್ಟಿಫಿಕೇಷನ್‌ ಕೋರ್ಸ್‌ಗಳಲ್ಲಿ ಗ್ರೀನ್‌ ಬೆಲ್ಟ್‌ಗೆ ಪ್ರಮುಖ ಸ್ಥಾನ ಇರುವುದರಿಂದ ಈಅಂಕಣದಲ್ಲಿ ಗ್ರೀನ್‌ ಬೆಲ್ಟ್‌ ಕುರಿತು ಮಾಹಿತಿ ನೀಡಲಾಗಿದೆ.

ಗ್ರೀನ್‌ ಬೆಲ್ಟ್‌ ಸರ್ಟಿಫಿಕೇಷನ್‌
ಆನ್‌ಲೈನ್‌ ಮತ್ತು ಕ್ಲಾಸ್‌ರೂಂ ಕೋರ್ಸ್‌ಗಳ ಮೂಲಕ ಸಿಕ್ಸ್‌ ಸಿಗ್ಮಾ ಗ್ರೀನ್‌ಬೆಲ್ಟ್‌ ಕುರಿತು ಕಲಿತುಸರ್ಟಿಫಿಕೇಷನ್‌ ಪಡೆದುಕೊಳ್ಳಬಹುದಾಗಿದೆ. ಸಿಂಪ್ಲಿಲರ್ನ್‌, ಮಣಿಪಾಲ್‌ಪ್ರೊಲರ್ನ್‌ ಇತ್ಯಾದಿ ಆನ್‌ಲೈನ್‌ ಕಲಿಕಾ ತಾಣಗಳಲ್ಲಿ ಸೇರಿದಂತೆರಾಜ್ಯದ ಹಲವು ಶೈಕ್ಷಣಿಕ ಸಂಸ್ಥೆಗಳು ಈವಿಷಯದಲ್ಲಿ ಸರ್ಟಿಫಿಕೇಷನ್‌ ನೀಡುತ್ತವೆ. ಸರ್ಟಿಫೈಡ್‌ ಸಿಕ್ಸ್‌ ಸಿಗ್ಮಾ ಗ್ರೀನ್‌ ಬೆಲ್ಟ್‌ಗೆಸರಳವಾಗಿ ಸಿಎಸ್‌ಎಸ್‌ಜಿಬಿ ಎನ್ನಲಾಗುತ್ತದೆ. ಗುಣಮಟ್ಟದ ವಲಯದಲ್ಲಿ ಕರಿಯರ್‌ ರೂಪಿಸಲು ಬಯಸುವವರಿಗೆ ಇದು ಸೂಕ್ತವಾದಕೋರ್ಸ್‌. ಈ ಸರ್ಟಿಫಿಕೇಷನ್‌ ಪಡೆದವರಿಗೆಇಂಪ್ರೂವ್‌ಮೆಂಟ್‌ ಪ್ರಾಜೆಕ್ಟ್ ಅಥವಾ ಗ್ರೀನ್‌ ಬೆಲ್ಟ್‌ ಪ್ರಾಜೆಕ್ಟ್ನ ನಾಯಕತ್ವ ವಹಿಸಿಕೊಂಡುಕಾರ್ಯನಿರ್ವಹಿಸು ಅವಕಾಶ ದೊರಕುತ್ತದೆ.

ಏನೆಲ್ಲ ಕಲಿಯಬಹುದು?
ಸಿಕ್ಸ್‌ ಸಿಗ್ಮಾ ಸರ್ಟಿಫಿಕೇಷನ್‌ನಲ್ಲಿಅಭ್ಯರ್ಥಿಗಳು ಸಿಕ್ಸ್‌ ಸಿಗ್ಮಾದ ಬೇಸಿಕ್ಸ್‌ ಕುರಿತುತಿಳಿದುಕೊಳ್ಳಬಹುದು. ಡಿಫೈನ್‌ ಫೇಸ್‌, ಮೆಷರ್‌ ಫೇಸ್‌, ಅನಾಲೈಝ್‌ ಫೇಸ್‌, ಇಂಪ್ರೂವ್‌ ಫೇಸ್‌, ಕಂಟ್ರೋಲ್‌ ಫೇಸ್‌ ಇತ್ಯಾದಿ ಸಿಕ್ಸ್‌ಸಿಗ್ಮಾದ ವಿವಿಧ ಪ್ರಕ್ರಿಯಾ ಹಂತಗಳ ಕುರಿತುಪರಿಣತಿ ಪಡೆದುಕೊಳ್ಳಬಹುದು. ಸಿಕ್ಸ್‌ ಸಿಗ್ಮಾದವಿವಿಧ ಕೋರ್ಸ್‌ಗಳ ಕುರಿತು ಗೂಗಲ್‌ ಸರ್ಚ್‌ನಲ್ಲಿ ಹುಡುಕಿ ಸಂಪೂರ್ಣ ಮಾಹಿತಿ ಪಡೆಯಬಹುದು. ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಸಿಕ್ಸ್‌ ಸಿಗ್ಮಾ ಸರ್ಟಿಫಿಕೇಷನ್‌ ಸಂಸ್ಥೆಯ ವೆಬ್‌ಸೈಟ್‌ ವಿಳಾಸ: https://www.iassc.org/

ಉದ್ಯೋಗಾವಕಾಶ ಹೇಗಿದೆ?ವ್ಯವಹಾರ ಸಮಸ್ಯೆಗಳನ್ನು ಅರ್ಥಮಾಡಿ ಕೊಂಡು ಸಂಸ್ಥೆಯ ಆದಾಯ ಹೆಚ್ಚಿಸಿಕೊಳ್ಳಲು ನೆರವಾಗುವ ಸಿಕ್ಸ್‌ ಸಿಗ್ಮಾ ಗ್ರೀನ್‌ ಬೆಲ್ಟ್‌ಗೆಉತ್ತಮ ಬೇಡಿಕೆಯಿದೆ. ನೀವು ಗೂಗಲ್‌ ಸರ್ಚ್‌ಗೆ ಹೋಗಿ ಸಿಕ್ಸ್‌ ಸಿಗ್ಮಾ ಗ್ರೀನ್‌ ಬೆಲ್ಟ್‌ಜಾಬ್ಸ್‌ ಎಂದು ಹುಡುಕಿದರೆ ವಿವಿಧ ಉದ್ಯೋಗಪೋರ್ಟಲ್‌ಗಳಲ್ಲಿ ಈ ಕ್ಷೇತ್ರದಲ್ಲಿರುವ ಅಗಾಧ ಉದ್ಯೋಗಾವಕಾಶಗಳ ಮಾಹಿತಿ ತೆರೆದುಕೊಳ್ಳುತ್ತದೆ. ಉದಾಹರಣೆಗೆ ನೌಕ್ರಿಡಾಟ್‌ ಕಂನಲ್ಲಿ ಸಿಕ್ಸ್‌ ಸಿಗ್ಮಾ ಪರಿಣತರಿಗೆ 1ರಿಂದ 5 ವರ್ಷಅನುಭವ ಇರುವವರಿಗೆ ಕಂಪನಿಯೊಂದು ವರ್ಷಕ್ಕೆ 5-10 ಲಕ್ಷ ರೂ. ವೇತನದ ಆಫರ್‌ ನೀಡಿದೆ. ಕ್ವಾಲಿಟಿ ಮ್ಯಾನೇಜರ್‌ ಆಗಿ 10-20ವರ್ಷ ಅನುಭವ ಇರುವ ಸಿಕ್ಸ್‌ ಸಿಗ್ಮಾ ಗ್ರೀನ್‌ ಬೆಲ್ಟ್‌ ಕೌಶಲ ಇರುವ ಅಭ್ಯರ್ಥಿಗಳಿಗೆ 15ರಿಂದ25 ಲಕ್ಷ ರೂ.ವರೆಗೆ ವಾರ್ಷಿಕ ವೇತನದ ಆಫರ್‌ ಅನ್ನು ಬೇರೊಂದು ಕಂಪನಿ ನೀಡಿದೆ. ಈ ಸರ್ಟಿಫಿಕೇಷನ್‌ ಪಡೆದವರಿಗೆ ಕ್ವಾಲಿಟಿಮ್ಯಾನೇಜರ್‌, ಕ್ವಾಲಿಟಿ ಅನಾಲಿಸ್ಟ್‌, ಫೈನಾನ್ಸ್‌ಮ್ಯಾನೇಜರ್‌, ಸೂಪರ್‌ವೈಸರ್‌, ಕ್ವಾಲಿಟಿಕಂಟ್ರೋಲ್‌ ಇತ್ಯಾದಿ ಪ್ರಮುಖ ಹುದ್ದೆಗಳು ದೊರಕುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ