ಆ್ಯಪ್ನಗರ

ಟೆಕ್‌ ಕಂಪನಿಗಳಿಂದ ಸ್ಕಿಲ್‌ ಟ್ರೇನಿಂಗ್‌

ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ದೇಶದ ಐಟಿ ಮತ್ತು ಐಟಿ ಸರ್ವೀಸ್‌ ಕಂಪನಿಗಳು ಉದ್ಯೋಗಿಗಳಿಗೆ ಯುದ್ಧೋಪಾದಿಯಲ್ಲಿ ಸ್ಕಿಲ್‌ ಟ್ರೇನಿಂಗ್‌ ನೀಡುತ್ತಿವೆ. ​

Vijaya Karnataka 27 Jul 2019, 11:13 am
ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಉದ್ಯೋಗಿಗಳಿಗೆ ಕೌಶಲ ತರಬೇತಿ
Vijaya Karnataka Web Skill Training


ಯಾವ್ಯಾವ ಕಂಪನಿಗಳು:
ಆಕ್ಸೆಂಚರ್‌, ಇನ್ಫೋಸಿಸ್‌, ಕಾಗ್ನಿಜೆಂಟ್‌, ಟೆಕ್‌ ಮಹೀಂದ್ರಾ, ಎಂಫಾಸಿಸ್‌ ಸೇರಿದಂತೆ ಹಲವಾರು ಟೆಕ್‌ ಕಂಪನಗಿಳು ಉದ್ಯೋಗಿಗಳನ್ನು ಭವಿಷ್ಯದ ತಂತಜ್ಞಾನಕ್ಕೆ ತಕ್ಕಂತೆ ಸಜ್ಜುಗೊಳಿಸುತ್ತಿವೆ. ಗ್ಲೋಬಲ್‌ ಟೆಕ್ನಾಲಜಿ ಕಂಪನಿ ಆಕ್ಸೆಂಚರ್‌ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿನ ತನ್ನ ಶಾಖೆಯಲ್ಲಿ ಶೇ. 85ರಷ್ಟು ಉದ್ಯೋಗಿಗಳ ಕೌಶಲವನ್ನು ಮೇಲ್ದರ್ಜೆಗೇರಿಸಿದೆ. ಆಕ್ಸೆಂಚರ್‌ ಉದ್ಯೋಗಿಗಳು ಡಿಜಿಟಲ್‌, ಕ್ಲೌಡ್‌, ಸೆಕ್ಯೂರಿಟ್‌, ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ನಂತಹ ಹೊಸ ಐಟಿ ಸ್ಕಿಲ್‌ಗಳನ್ನು ಕಲಿಯುತ್ತಿದ್ದಾರೆ. ಆಟೋಮೇಷನ್‌ ಮತ್ತು ಕೃತಕ ಬುದಿಟಛಿಮತ್ತೆಯಿಂದ ಉಂಟಾಗುವ ಉಳಿತಾಯವನ್ನು ಸ್ಕಿಲ್‌ ಕಲಿಕೆ ಮೇಲೆ ಹೂಡುವುದನ್ನು ಐಟಿ ಕಂಪನಿಗಳು ಅನುಸರಿಸುತ್ತಿವೆ.

ರೀಸ್ಕಿಲ್‌ಗೆ ಬಂಡವಾಳ ಹೂಡಿಕೆ: ಆಕ್ಸೆಂಚರ್‌ ಕಂಪನಿಯು ಆಟೋಮೇಷನ್‌ನಿಂದ ಉಳಿತಾಯವಾಗುವ ಶೇ. 60ರಷ್ಟು ಹಣವನ್ನು ಉದ್ಯೋಗಿಗಳ ರೀಸ್ಕಿಲ್‌ಗೆ ಬಳಸುತ್ತಿವೆ. ಈ ಮೂಲಕ ಹೊಸ ತಂತ್ರಜ್ಞಾನಗಳು ಮತ್ತು ವೃತ್ತಿಪರ ಕೌಶಲಗಳನ್ನು ಕಲಿಸಲು ಜಾಗತಿಕವಾಗಿ 1 ಶತಕೋಟಿ ಡಾಲರ್‌ ಹಣವನ್ನು ಖರ್ಚು ಮಾಡುತ್ತಿದೆ. ಆಕ್ಸೆಂಚರ್‌ ಭಾರತದಲ್ಲಿ 170,000 ಉದ್ಯೋಗಿಗಳನ್ನು ಹೊಂದಿದೆ. ಭಾರತದ ಒಟ್ಟು ಐಟಿ ಉದ್ಯೋಗಿಗಳಲ್ಲಿ ಶೇ. 40 ರಷ್ಟು ಮಂದಿ ಮುಂದಿನ ಐದು ವರ್ಷಗಳ್ಲಲಿ ಉದಯೋನ್ಮುಖ ಟ್ರೆಂಡ್‌ ಗಳಾದ ಎಐ, ಐಒಟಿ, ಮೆಷಿನ್‌ ಲರ್ನಿಂಗ್‌ ಮತ್ತು ಬ್ಲಾಕ್‌ಚೇನ್‌ ಕೌಶಲಗಳನ್ನು ಕಲಿಯಲಿದ್ದಾರೆ ಎಂದು ಭಾರತೀಯ ಸಾಫ್ಟ್‌ವೇರ್‌ ಸೇವಾ ಸಂಸ್ಥೆಗಳ ಒಕ್ಕೂಟ ನಾಸ್ಕಾಂ ತಿಳಿಸಿದೆ.

ಈ ಕೌಶಲಗಳಿಗೆ ಬೇಡಿಕೆ: ಬಿಗ್‌ ಡೇಟಾ ಅನಾಲಿಟಿಕ್ಸ್‌, ಎಐ/ಎಂಎಲ್‌, ಸೈಬರ್‌ ಸೆಕ್ಯೂರಿಟಿ, ಐಒಟಿ, ರೊಬಾಟಿಕ್ಸ್‌ನಂತ ಉದಯೋನ್ಮುಖ ತಂತ್ರಜ್ಞಾನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಐಟಿ ಉದ್ಯೋಗ ಮಾರುಕಟ್ಟೆಯಲ್ಲಿ ರೀಸ್ಕಿಲ್ಲಿಂಗ್‌ ಪ್ರಥಮ ಆದ್ಯತೆಯಾಗಿದೆ. ಹೊಸ ತಂತ್ರಜ್ಞಾನಗಳ ಅಳವಡಿಕೆಯು ಈಗಿರುವ ಉದ್ಯೋಗಗಳ ಸ್ವರೂಪವನ್ನು ಬದಲಾಯಿಸುತ್ತಿವೆ ಎಂದು ನಾಸ್ಕಾಂನ ಅಮಿತ್‌ ಅಗರ್‌ವಾಲ್‌ ತಿಳಿಸಿದ್ದಾರೆ. ನಾಸ್ಕಾಂನ ಫ್ಯೂಚರ್‌ ಸ್ಕಿಲ್ಸ್‌ ಪ್ಲಾಟ್‌ಫಾರ್ಮ್‌ 20 ಲಕ್ಷ ಉದ್ಯೋಗಿಗಳ ಕೌಶಲವನ್ನು ಮೇಲ್ದರ್ಜೆಗೇರಿಸುವ ಉದ್ದೇಶವನ್ನು ಹೊಂದಿದೆ.

ಐಟಿ ವಲಯದ ದೈತ್ಯ ಕಂಪನಿ ಇನ್ಫೋಸಿಸ್‌ ತನ್ನ ಉದ್ಯೋಗಿಗಳಿಗೆ 75 ಹೊಸ ಕೋರ್ಸ್‌ಗಳನ್ನು ರೂಪಿಸಿದೆ. ಅದೇ ರೀತಿ ಎಂಫಾಸಿಸ್‌ ಕಂಪನಿ ಕೂಡ ತನ್ನ ಉದ್ಯೋಗಿಗಳಿಗೆ ಕೌಶಲದ ತರಬೇತಿ ನೀಡುತ್ತಿದೆ. ಕಾಗ್ನಿಜೆಂಟ್‌ ಕಂಪನಿ ಕಳೆದ 18 ತಿಂಗಳಿನಲ್ಲಿ 110,000 ಮಂದಿ ಉದ್ಯೋಗಿಗಳಿಗೆ ಕಾಗ್ನಿಜೆಂಟ್‌ ಅಕಾಡೆಮಿ ಮೂಲಕ ಸ್ಕಿಲ್‌ ಟ್ರೇನಿಂಗ್‌ ನೀಡಿದೆ.

ಯಾವ್ಯಾವ ಸ್ಕಿಲ್‌ಗಳಿಗೆ ಟ್ರೇನಿಂಗ್‌: ಡೇಟಾ ಸೈನ್ಸ್‌, ಡಿಸೈನ್‌ ಥಿಂಕಿಂಗ್‌, ಸೈಬರ್‌ ಸೆಕ್ಯೂರಿಟಿ, ಇಂಟರ್‌ ಆ್ಯಕ್ಚಿವಿಟಿ ಮತ್ತು ಗ್ಯಾಮಿಷಿಕೇಷನ್‌, ಇಂಟರ್‌ನೆಂಟ್‌ ಆಫ್‌ ಥಿಂಗ್ಸ್‌, ಅನಾಲಿಟಿಕ್ಸ್‌, ಕ್ಲೌಡ್‌ ಟೆಕ್ನಾಲಜೀಸ್‌, ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌, ಮೆಷಿನ್‌ ಲರ್ನಿಂಗ್‌, ಎಂಟರ್‌ಪ್ರೈಸ್‌ ಟೆಕ್ನಾಲಜೀಸ್‌ ಮುಂತಾದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ