ಆ್ಯಪ್ನಗರ

UPSC EPFO Jobs: 421 ಹುದ್ದೆಗಳ ನೇಮಕ.. ಆನ್‌ಲೈನ್‌ ಅರ್ಜಿಗೆ ಜ.31 ಕೊನೆ

ಯೂನಿಯನ್‌ ಪಬ್ಲಿಕ್ ಸರ್ವೀಸ್ ಕಮಿಷನ್, ಇಪಿಎಫ್‌ಓ ದಲ್ಲಿನ ಎನ್ಫೋರ್ಸ್‌ಮೆಂಟ್‌ ಆಫೀಸರ್ ಮತ್ತು ಅಕೌಂಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Vijaya Karnataka Web 30 Jan 2020, 11:22 am

ಯುಪಿಎಸ್‌ಸಿ'ಯು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿನ ಜಾರಿ ಅಧಿಕಾರಿ ಮತ್ತು ಅಕೌಂಟ್‌ ಆಫೀಸರ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 31, 2020 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Vijaya Karnataka Web upsc epfo recruitment 2020
upsc epfo recruitment 2020 notification


ಒಟ್ಟು 421 ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್‌ ಪ್ರಕಟಿಸಿದ್ದು, ಜನವರಿ 31, 2020 ರೊಳಗೆ ಅರ್ಜಿ ಸಲ್ಲಿಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪದವಿ ವಿದ್ಯಾರ್ಹತೆ ನಿಗದಿಪಡಿಸಿದ್ದು, 2020 ರ ಅಕ್ಟೋಬರ್ ತಿಂಗಳಲ್ಲಿ ಸಂದರ್ಶನ ನಡೆಸಲಾಗುತ್ತದೆ

ಹುದ್ದೆಗಳ ವಿವರ
ಹುದ್ದೆಯ ಹೆಸರುಜಾರಿ ಅಧಿಕಾರಿ / ಅಕೌಂಟ್ ಆಫೀಸರ್
ಒಟ್ಟು ಹುದ್ದೆಗಳ ಸಂಖ್ಯೆ421
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ31-01-2020
ಪೂರ್ಣವಾಗಿ ಸಲ್ಲಿಸಿದ ಆನ್‌ಲೈನ್‌ ಅರ್ಜಿ ಡೌನ್‌ಲೋಡ್‌ ಮಾಡಲು ಕೊನೆ ದಿನಾಂಕ01-02-2020
ಸಂದರ್ಶನ ದಿನಾಂಕ04-10-2020
ವಿದ್ಯಾರ್ಹತೆ
ಯಾವುದೇ ಪದವಿ ಜೊತೆಗೆ, ನಿಗದಿಪಡಿಸಿದ ಇತರೆ ಅರ್ಹತೆಗಳನ್ನು ಹೊಂದಿರಬೇಕು. ಈ ಬಗ್ಗೆ ಕಂಪ್ಲೀಟ್‌ ಡೀಟೇಲ್ಸ್‌ಗಾಗಿ ಸಂಪೂರ್ಣ ಅಧಿಸೂಚನೆ ಓದಿಕೊಳ್ಳಿ.

ವಯೋಮಿತಿ
ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಆಯಾ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

UPSC ಸಿಡಿಎಸ್-1 ಪರೀಕ್ಷೆ ಪ್ರವೇಶ ಪತ್ರ ಪ್ರಕಟ

ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ ವಿಳಾಸ : www.upsconline.nic.in

ಅರ್ಜಿ ಶುಲ್ಕ ಎಷ್ಟು?
- ಸಾಮಾನ್ಯ ಅಭ್ಯರ್ಥಿಗಳಿಗೆ ರೂ.25.
- ಎಸ್‌ಸಿ, ಎಸ್‌ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
- ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು.

ಯುಪಿಎಸ್‌ಸಿ ನೇಮಕಾತಿ: 153 ವಿವಿಧ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

ಆಯ್ಕೆ ವಿಧಾನ ಹೇಗಿರುತ್ತದೆ?

- 2 ಗಂಟೆಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ. ಆಬ್ಜೆಕ್ಟಿವ್ ಟೈಪ್‌ ಪ್ರಶ್ನೆಗಳನ್ನು ಕೇಳಲಿದ್ದು, ಬಹು ಆಯ್ಕೆ ಉತ್ತರಗಳನ್ನು ನೀಡಲಾಗಿರುತ್ತದೆ. ಹಿಂದಿ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು. ಪ್ರತಿ ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕಗಳನ್ನು ನೀಡಲಾಗುತ್ತದೆ.

- ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್‌ ಆಧಾರದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.

UPSC 2020 ರಕ್ಷಣಾ ಅಕಾಡೆಮಿ, ನಾವಲ್ ಅಕಾಡೆಮಿ ಪರೀಕ್ಷೆ ನೋಟಿಫಿಕೇಶನ್ ಪ್ರಕಟ

ಪಠ್ಯಕ್ರಮ ಏನು?

ಜೆನೆರಲ್ ಇಂಗ್ಲಿಷ್

ಭಾರತ ಸ್ವಾತಂತ್ರ್ಯ ಸಂಗ್ರಾಮ

ಪ್ರಚಲಿತ ವಿದ್ಯಮಾನಗಳು ಮತ್ತು ಅಭಿವೃದ್ಧಿ ಘಟನೆಗಳು

ಭಾರತ ರಾಜಕೀಯ ಮತ್ತು ಆರ್ಥಿಕತೆ

ಜೆನೆರಲ್ ಅಕೌಂಟಿಂಗ್ ಪ್ರಿನ್ಸಿಪಲ್ಸ್‌

ಇಂಡಸ್ಟ್ರಿಯಲ್ ರಿಲೇಷನ್ಸ್‌ ಮತ್ತು ಕಾರ್ಮಿಕ ಕಾನೂನುಗಳು

ಜೆನೆರಲ್ ಸೈನ್ಸ್‌ ಮತ್ತು ಕಂಪ್ಯೂಟರ್ ಅಪ್ಲಿಕೇಷನ್ಸ್‌

ಜೆನೆರಲ್ ಮೆಂಟಲ್ ಎಬಿಲಿಟಿ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್

ಭಾರತದಲ್ಲಿ ಸಮಾಜಿಕ ಸುರಕ್ಷತೆ

ಆನ್‌ಲೈನ್‌ ಅರ್ಜಿಗೆ ಡೈರೆಕ್ಟ್‌ ಲಿಂಕ್‌ಗಾಗಿ ಕ್ಲಿಕ್ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ