ಆ್ಯಪ್ನಗರ

ಯುಪಿಎಸ್‌ಸಿ ಸಿಡಿಎಸ್-2 ಪರೀಕ್ಷೆ ಅಡ್ಮಿಟ್ ಕಾರ್ಡ್‌ ಬಿಡುಗಡೆ

ಕೇಂದ್ರ ಲೋಕಸೇವಾ ಆಯೋಗವು ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸ್ -2, 2020 ಪರೀಕ್ಷೆಗೆ ಅಡ್ಮಿಟ್‌ ಕಾರ್ಡ್ ಅನ್ನು....

Vijaya Karnataka Web 15 Oct 2020, 3:26 pm
ಕೇಂದ್ರ ಲೋಕಸೇವಾ ಆಯೋಗವು ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸ್ -2, 2020 ಪರೀಕ್ಷೆಗೆ ಅಡ್ಮಿಟ್‌ ಕಾರ್ಡ್ ಅನ್ನು ಇಂದು (ಅಕ್ಟೋಬರ್ 15, 2020) ಬಿಡುಗಡೆ ಮಾಡಿದೆ. 2020 ನೇ ಸಾಲಿನ ಸಿಡಿಎಸ್ ಪರೀಕ್ಷೆಗೆ ಹಾಜರಾಗಬೇಕಾದ ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.
Vijaya Karnataka Web ಯುಪಿಎಸ್‌ಸಿ ಸಿಡಿಎಸ್-2 ಪರೀಕ್ಷೆ ಅಡ್ಮಿಟ್ ಕಾರ್ಡ್‌ ಬಿಡುಗಡೆ
upsc cds 2 2020 admit card


ಯುಪಿಎಸ್‌ಸಿ ಸಿಡಿಎಸ್ 2, 2020 ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.

- ಅಭ್ಯರ್ಥಿಗಳು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿರಿ.

- ಹೋಮ್‌ಪೇಜ್‌ನಲ್ಲಿ ಲೇಟೆಸ್ಟ್‌ ನ್ಯೂಸ್‌ ಸೆಕ್ಷನ್‌ಗೆ ಹೋಗಿ.

- "e-admit card - CDS examination (II) 2020" ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

- ಹೊಸ ಪೇಜ್ ಓಪನ್ ಆಗುತ್ತದೆ. ಪ್ರಸ್ತುತ ಪೇಜ್‌ನಲ್ಲಿ ಡೌನ್‌ಲೋಡ್‌ ಗೆ ಸಂಬಂಧಿಸಿದ ಲಿಂಕ್‌ ಕ್ಲಿಕ್ ಮಾಡಿ.

- ರಿಜಿಸ್ಟ್ರೇಷನ್ / ರೋಲ್‌ ನಂಬರ್ ನೀಡುವ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಅಭ್ಯರ್ಥಿಗಳು ಪರೀಕ್ಷೆಗೆ ಪ್ರವೇಶ ಪತ್ರದ ಜತೆಗೆ, ಅಧಿಕೃತ ಗುರುತಿನ ಚೀಟಿಗಳಾದ ವೋಟರ್ ಐಡಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್‌, ಡ್ರೈವಿಂಗ್ ಲೈಸನ್ಸ್‌ ಯಾವುದಾದರೊಂದನ್ನು ತೆಗೆದುಕೊಂಡು ಹೋಗಬೇಕು.

ಒಟ್ಟು 344 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿ ಸಿಡಿಎಸ್‌ 2, 2020 ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಎಸ್‌ಎಸ್‌ಬಿ ಸಂದರ್ಶನ ಮತ್ತು ಮೆಡಿಕಲ್ ಎಕ್ಸಾಮ್‌ ಅನ್ನು ನಡೆಸಲಾಗುತ್ತದೆ.

ಕರ್ನಾಟಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇಮಕ: ಪರೀಕ್ಷಾ ವಿಧಾನ ಹೇಗಿರುತ್ತದೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ