ಆ್ಯಪ್ನಗರ

2019ನೇ ಸಾಲಿನ ಯುಪಿಎಸ್‌ಸಿ ನಾಗರಿಕ ಸೇವೆಗಳ ಫಲಿತಾಂಶ ಪ್ರಕಟ

ಯೂನಿಯನ್‌ ಪಬ್ಲಿಕ್ ಸರ್ವೀಸ್ ಕಮಿಷನ್ 2019ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಲ್ಗೊಂಡು ನೇಮಕಾತಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

Vijaya Karnataka 4 Aug 2020, 1:02 pm
ಕೇಂದ್ರ ಲೋಕಸೇವಾ ಆಯೋಗವು (UPSC) 2019ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಲ್ಗೊಂಡು ನೇಮಕಾತಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಐಎಎಸ್‌, ಐಎಫ್‌ಎಸ್‌, ಐಪಿಎಸ್‌, ಕೇಂದ್ರೀಯ ಗ್ರೂಪ್‌ ಎ ಮತ್ತಿ ಬಿ ಸೇವೆಗಳಿಗೆ ಅರ್ಹತೆ ಪಡೆದ ಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಬಹುದು.
Vijaya Karnataka Web 2019ನೇ ಸಾಲಿನ ಯುಪಿಎಸ್‌ಸಿ ನಾಗರಿಕ ಸೇವೆಗಳ ಫಲಿತಾಂಶ ಪ್ರಕಟ


ಯುಪಿಎಸ್‌ಸಿಯು ಕೇಂದ್ರ ನಾಗರಿಕ ಸೇವೆಗಳಿಗೆ ಪರೀಕ್ಷೆಯನ್ನು 2019 ರ ಸೆಪ್ಟೆಂಬರ್‌ನಲ್ಲಿ, ಪರ್ಸನಾಲಿಟಿ ಟೆಸ್ಟ್‌ ಅನ್ನು 2020 ರ ಫೆಬ್ರವರಿಯಿಂದ ಆಗಸ್ಟ್‌ವರೆಗೆ, 2019 ಸಿವಿಲ್‌ ಸರ್ವೀಸೆಸ್‌ ಎಕ್ಸಾಮ್‌ಗೆ ನಡೆಸಿತ್ತು. ಪ್ರಸ್ತುತ ಮೆರಿಟ್‌ ಆಧಾರದಲ್ಲಿ ಮೇಲೆ ತಿಳಿಸಿದ ವಿವಿಧ ಸೇವೆಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ಅಧಿಕೃತ ವೆಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ಪ್ರದೀಪ್ ಸಿಂಗ್, ಯುಪಿಎಸ್‌ಸಿ ಸಿವಿಲ್ ಸರ್ವೀಸೆಸ್ (ಮುಖ್ಯ) ಪರೀಕ್ಷೆ 2019 ರಲ್ಲಿ ಮೊದಲನೇ ಟಾಪರ್‌ ಆಗಿದ್ದಾರೆ. ನಂತರದಲ್ಲಿ ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ಕ್ರಮವಾಗಿ ಎರಡನೇ ಮತ್ತು ಮೂರನೇ ಟಾಪರ್‌ಗಳಾಗಿದ್ದಾರೆ.

ಯುಪಿಎಸ್‌ಸಿ ಮೆಡಿಕಲ್‌ ಸರ್ವೀಸೆಸ್‌ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ: ಅರ್ಜಿ ಆಹ್ವಾನ
ಒಟ್ಟಾರೆ 829 ಅಭ್ಯರ್ಥಿಗಳು ಪ್ರಸ್ತುತ ವಿವಿಧ ಸೇವೆಗಳಿಗೆ ವರ್ಗವಾರು ಈ ಕೆಳಗಿನ ಸಂಖ್ಯೆಯಂತೆ ಅರ್ಹತೆ ಪಡೆದಿದ್ದಾರೆ.

ಜೆನೆರಲ್ 304
ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 78
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು251
ಎಸ್‌ಸಿ ಅಭ್ಯರ್ಥಿಗಳು 129
ಎಸ್‌ಟಿ ಅಭ್ಯರ್ಥಿಗಳು67

Notification
ಭರ್ತಿ ಮಾಡಬೇಕಾದ ವಿವಿಧ ಸೇವೆಗಳ ವಿವರ ವರ್ಗವಾರು ಸರ್ಕಾರ ನೀಡಿದ ಮಾಹಿತಿಯಂತೆ ಈ ಕೆಳಗಿನಂತಿದೆ.


UPSC ಇಂಜಿನಿಯರಿಂಗ್ ಸರ್ವೀಸೆಸ್‌ ಪರೀಕ್ಷೆ ಹೇಗಿರುತ್ತದೆ? ಸಿದ್ಧತೆ ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ