ಆ್ಯಪ್ನಗರ

UPSC ಕಂಬೈನ್ಡ್‌ ಜಿಯೋ ಸೈಂಟಿಸ್ಟ್ ಪರೀಕ್ಷೆಗೆ ಅರ್ಜಿ ಆಹ್ವಾನ: 192 ಹುದ್ದೆಗೆ ನೇಮಕ ಪ್ರಕ್ರಿಯೆ

upsc geoscientist 2021 application form: ಕೇಂದ್ರ ಲೋಕಸೇವಾ ಆಯೋಗವು ಕಂಬೈನ್ಡ್‌ ಜಿಯೋಸೈಂಟಿಸ್ಟ್‌ ಹುದ್ದೆಗಳ ನೇಮಕಾತಿಗೆ 2022 ರಲ್ಲಿ ಪರೀಕ್ಷೆ ನಡೆಸಲಿದ್ದು, ಪ್ರಸ್ತುತ ಪರೀಕ್ಷೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಪರೀಕ್ಷೆಗೆ ರಿಜಿಸ್ಟ್ರೇಷನ್‌ ಪಡೆಯಬಹುದು.

Vijaya Karnataka Web 23 Sep 2021, 11:04 am

ಹೈಲೈಟ್ಸ್‌:

  • ಜಿಯೋ ಸೈಂಟಿಸ್ಟ್‌ ಪರೀಕ್ಷೆಗೆ ಅರ್ಜಿ ಆಹ್ವಾನ.
  • ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕಾರ ಆರಂಭವಾಗಿದೆ.
  • 2022 ರ ಫೆಬ್ರವರಿಯಲ್ಲಿ ಪೂರ್ವಭಾವಿ ಪರೀಕ್ಷೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web UPSC ಕಂಬೈನ್ಡ್‌ ಜಿಯೋ ಸೈಂಟಿಸ್ಟ್ ಪರೀಕ್ಷೆಗೆ ಅರ್ಜಿ ಆಹ್ವಾನ: 192 ಹುದ್ದೆಗೆ ನೇಮಕ ಪ್ರಕ್ರಿಯೆ
upsc geologist exam 2021
ಯೂನಿಯನ್‌ ಪಬ್ಲಿಕ್‌ ಸರ್ವೀಸ್ ಕಮಿಷನ್‌ (ಯುಪಿಎಸ್‌ಸಿ) ಕಂಬೈನ್ಡ್‌ ಜಿಯೋ ಸೈಂಟಿಸ್ಟ್‌ 2022 ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಪದವೀಧರರು ಈ ಕೆಳಗಿನ ಪ್ರಮುಖ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.
ಅಪ್ಲಿಕೇಶನ್‌ ಶುಲ್ಕ ರೂ.200. ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಪ್ರಮುಖ ದಿನಾಂಕಗಳು
  • ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಆರಂಭ ದಿನಾಂಕ : 22-09-2021
  • ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 12-10-2021 ರ ಸಂಜೆ 6 ರವರೆಗೆ.
  • ಆನ್‌ಲೈನ್‌ ಅಪ್ಲಿಕೇಶನ್‌ ವಿತ್‌ಡ್ರಾ ಮಾಡಿಕೊಳ್ಳಲು ಕೊನೆ ದಿನಾಂಕ: 20-10-2021 ರಿಂದ 26-10-2021 ರ ಸಂಜೆ 6 ಗಂಟೆವರೆಗೆ.
  • ಪೂರ್ವಭಾವಿ ಪರೀಕ್ಷೆ ದಿನಾಂಕ : 20-02-2022
  • ಮುಖ್ಯ ಪರೀಕ್ಷೆ ದಿನಾಂಕ: 25, 26-06-2022
ಭಾರತೀಯ ನೌಕಾಪಡೆಯಲ್ಲಿ ಪದವೀಧರರಿಗೆ ಬೃಹತ್ ಉದ್ಯೋಗಾವಕಾಶ: ಅರ್ಜಿ ಆಹ್ವಾನ

ವಯೋಮಿತಿ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 32 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಹುದ್ದೆಗಳ ವಿವರ
ಜಿಯೋಲಾಜಿಸ್ಟ್‌, ಗ್ರೂಪ್‌ ಎ 100
ಜಿಯೋಫಿಸಿಸಿಸ್ಟ್‌, ಗ್ರೂಪ್‌ ಎ 50
ಕೆಮಿಸ್ಟ್‌, ಗ್ರೂಪ್‌ ಎ 20
ಸೈಂಟಿಸ್ಟ್‌ 'ಬಿ'(ಹೈಡ್ರೋಜಿಯೋಲಜಿ) ಗ್ರೂಪ್ ಎ20
ಸೈಂಟಿಸ್ಟ್‌ 'ಬಿ'(ಕೆಮಿಕಲ್) ಗ್ರೂಪ್ ಎ01
ಸೈಂಟಿಸ್ಟ್‌ 'ಬಿ'(ಜಿಯೋಫಿಸಿಕ್ಸ್‌) ಗ್ರೂಪ್ ಎ01
UPSC CSE 2021 ಪ್ರಿಲಿಮ್ಸ್ ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್‌ಗೆ ಲಿಂಕ್ ಇಲ್ಲಿದೆ..

ವಿದ್ಯಾರ್ಹತೆ: ಮೇಲಿನ ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ) ಪಾಸ್‌ ಮಾಡಿರಬೇಕು.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ನೋಟಿಫಿಕೇಶನ್‌ ಪಿಡಿಎಫ್‌ ಫೈಲ್ ಓಪನ್‌ ಮಾಡಿ ಓದಿರಿ.

Notification-UPSC-Combined-Geo-Scientist-Exam-2022
apply online

Website

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ