ಆ್ಯಪ್ನಗರ

ಯುಪಿಎಸ್‌ಸಿ ನೇಮಕಾತಿ: 153 ವಿವಿಧ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

UPSC Assistant Professor, Examiner Recruitment 2019: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ವಿವಿಧ ಇಲಾಖೆಗಳಿಗೆ ಅಸಿಸ್ಟಂಟ್ ಪ್ರೊಫೆಸರ್ ಮತ್ತು ಇತರೆ ಹುದ್ದೆಗಳನ್ನು ನೇಮಕ ಮಾಡಲು ಅಧಿಸೂಚನೆ ಹೊರಡಿಸಿದೆ.

Vijaya Karnataka Web 11 Nov 2019, 2:01 pm

ಕೇಂದ್ರ ಲೋಕಸೇವಾ ಆಯೋಗವು ವಿವಿಧ ವಿಷಯಗಳಿಗೆ ಸ್ಪೆಷಲಿಸ್ಟ್ ಗ್ರೇಡ್-III ಸಹಾಯಕ ಪ್ರಾಧ್ಯಾಪಕ, ಪರೀಕ್ಷಕ, ಹಿರಿಯ ಪ್ರಾಧ್ಯಾಪಕ ಮತ್ತು ಇತರೆ ಹಲವು ಹುದ್ದೆಗಳು ಸೇರಿದಂತೆ, ಒಟ್ಟು 153 ಪೋಸ್ಟ್‌ಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ನೇಮಕ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಈ ಬಗ್ಗೆ ಇತರೆ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ತಿಳಿಯಿರಿ.
Vijaya Karnataka Web UPSC Assistant Professor, Examiner Recruitment 2019
upsc recruitment 2019 for 153 various posts


ಖಾಲಿ ಹುದ್ದೆಗಳ ಸಂಖ್ಯೆ ಮತ್ತು ಹೆಸರು

1. ಪರೀಕ್ಷಕ : 65

2. ಅಸಿಸ್ಟಂಟ್ ಪ್ರೊಫೆಸರ್ (ಬಯೋ-ಕೆಮಿಸ್ಟ್ರಿ) : 12

3. ಅಸಿಸ್ಟಂಟ್ ಪ್ರೊಫೆಸರ್ (ಕಾರ್ಡಿಯಾಲಜಿ) : 13

4. ಅಸಿಸ್ಟಂಟ್ ಪ್ರೊಫೆಸರ್ (Endocrinology) : 11

5. ಅಸಿಸ್ಟಂಟ್ ಪ್ರೊಫೆಸರ್ (ನ್ಯೂಕ್ಲಿಯರ್ ಮೆಡಿಷನ್) : 05

6. ಅಸಿಸ್ಟಂಟ್ ಪ್ರೊಫೆಸರ್ (ಆರ್ಥೋಪೆಡಿಕ್ಸ್) : 18

7. ಅಸಿಸ್ಟಂಟ್ ಪ್ರೊಫೆಸರ್ (ಶ್ವಾಸಕೋಶ ಮೆಡಿಷನ್) : 09

8. ಅಸಿಸ್ಟಂಟ್ ಪ್ರೊಫೆಸರ್ (ಕ್ರೀಡಾ ಮೆಡಿಷನ್) : 01

9. ಅಸಿಸ್ಟಂಟ್ ಪ್ರೊಫೆಸರ್(ಕ್ಷಯ ಮತ್ತು ಉಸಿರಾಟ ಮೆಡಿಷನ್) : 02

10. ಅಸಿಸ್ಟಂಟ್ ಪ್ರೊಫೆಸರ್ (ಪ್ಯಾಥೋಲಜಿ) : 02

11. ಅಸಿಸ್ಟಂಟ್ ಪ್ರೊಫೆಸರ್ (ರೇಡಿಯೋ ಡಯಾಗ್ನೋಸಿಸ್) : 14

12. ಹಿರಿಯ ಪ್ರಾಧ್ಯಾಪಕ : 01

ಒಟ್ಟು ಹುದ್ದೆಗಳ ಸಂಖ್ಯೆ: 153

UPSC: 2020 ಸಿಡಿಎಸ್ ಪರೀಕ್ಷೆ ನೋಟಿಫಿಕೇಶನ್ ಪ್ರಕಟ.. ಖಾಲಿ ಹುದ್ದೆಗಳ ಮಾಹಿತಿ ಇಲ್ಲಿದೆ

ವಿದ್ಯಾರ್ಹತೆ

ಹುದ್ದೆಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆಗಳಾದ ಎಂಬಿಬಿಎಸ್‌, ಪಿಜಿ ಡಿಗ್ರಿ, ಡಿಪ್ಲೊಮ, ಎಂಡಿ, ಪಿಹೆಚ್‌ಡಿ, ಡಿ.ಎಸ್ಸಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಅಂಗೀಕೃತ ವಿವಿಯಿಂದ ಪಡೆದಿರಬೇಕು. ಜೊತೆಗೆ ನಿಗದಿಪಡಿಸಿದ ಕಾರ್ಯಾನುಭವ ಹೊಂದಿರಬೇಕು.

ಅರ್ಜಿ ಶುಲ್ಕ

- ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ ರೂ.25.

- SC / ST / PH / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

- ಅಪ್ಲಿಕೇಶನ್ ಶುಲ್ಕವನ್ನು ಎಸ್‌ಬಿಐ ಬ್ರ್ಯಾಂಚ್‌ನಲ್ಲಿ ಅಥವಾ ನೆಟ್‌ ಬ್ಯಾಂಕಿಂಗ್, ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಬಳಸಿ ಪಾವತಿಸಬಹುದು.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-11-2019

ಆನ್‌ಲೈನ್‌ ಅರ್ಜಿ ಪ್ರಿಂಟ್‌ ತೆಗೆದುಕೊಳ್ಳಲು ಕೊನೆಯ ದಿನಾಂಕ: 29-11-2019

ಕೇಂದ್ರ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ

ಹುದ್ದೆ ಸಂಖ್ಯೆ 1 : 30 ವರ್ಷ

ಹುದ್ದೆ ಸಂಖ್ಯೆ 2-9 : 40 ವರ್ಷ

ಹುದ್ದೆ ಸಂಖ್ಯೆ 10 : 50 ವರ್ಷ

ಹುದ್ದೆ ಸಂಖ್ಯೆ 11 : 45 ವರ್ಷ

ಹುದ್ದೆ ಸಂಖ್ಯೆ 12 : 53 ವರ್ಷ

ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾತಿ, ಪ.ಪಂಗಡ ಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷ, ಸರ್ಕಾರಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

UPSC Jobs: 88 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮೇಲಿನ ಅರ್ಹತೆಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೆಳಗಿನ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ.

ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನದ ನಡೆಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅಧಿಸೂಚನೆಗಾಗಿ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ