ಆ್ಯಪ್ನಗರ

ರಕ್ಷಣಾ ಮತ್ತು ನೇವಲ್‌ ಅಕಾಡೆಮಿ ಪರೀಕ್ಷೆಗಳಿಗೆ ಪ್ರವೇಶ ಪತ್ರ ಬಿಡುಗಡೆ

ಕೇಂದ್ರ ಲೋಕಸೇವಾ ಆಯೋಗವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಗಳ I ಮತ್ತು II ಎರಡು ಪರೀಕ್ಷೆಗಳಿಗೂ..

Vijaya Karnataka 11 Aug 2020, 4:02 pm
ಕೇಂದ್ರ ಲೋಕಸೇವಾ ಆಯೋಗವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಗಳ I ಮತ್ತು II ಎರಡು ಪರೀಕ್ಷೆಗಳಿಗೂ ಪ್ರವೇಶ ಪತ್ರ ಪ್ರಕಟಿಸಿದೆ. 2020ನೇ ಸಾಲಿನ ಎನ್‌ಡಿಎ ಮತ್ತು ಎನ್‌ಎಇ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
Vijaya Karnataka Web ರಕ್ಷಣಾ ಮತ್ತು ನೇವಲ್‌ ಅಕಾಡೆಮಿ ಪರೀಕ್ಷೆಗಳಿಗೆ ಪ್ರವೇಶ ಪತ್ರ ಬಿಡುಗಡೆ


ಪ್ರಮುಖ ದಿನಾಂಕಗಳು
ಪ್ರವೇಶ ಪತ್ರ ಬಿಡುಗಡೆ ದಿನಾಂಕ10-08-2020
ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಕೊನೆ ದಿನಾಂಕ06-09-2020

ಪ್ರವೇಶ ಪತ್ರ ಡೌನ್‌ಲೋಡ್‌ ಹೇಗೆ?
- ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿರಿ.
- ಓಪನ್ ಆದ ಹೋಮ್‌ಪೇಜ್‌ನಲ್ಲಿ 'National Defence Academy and Naval Academy Examination (i), (ii)' ಪ್ರವೇಶ ಪತ್ರಕ್ಕೆ ಸಂಬಂಧಿಸಿದಂತೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿರಿ.
- ಯುಪಿಎಸ್‌ಸಿಯ ಮತ್ತೊಂದು ಪೇಜ್‌ ಓಪನ್‌ ಆಗುತ್ತದೆ. ಈ ಪೇಜ್‌ನಲ್ಲಿ 'Click Here' ಎಂಬಲ್ಲಿ ಕ್ಲಿಕ್ ಮಾಡಿರಿ. ಓಪನ್‌ ಮುಂದಿನ ವೆಬ್‌ಪೇಜ್‌ನಲ್ಲಿಯೂ ಇದೇ ಪ್ರಕ್ರಿಯೆ ಮುಂದುವರೆಸಿ.
- ರಿಜಿಸ್ಟರ್ ಐಡಿ ಅಥವಾ ರೋಲ್‌ ನಂಬರ್‌, ಎರಡರಲ್ಲಿ ಯಾವುದಾದರೂ ಒಂದು ಮಾಹಿತಿ ಮತ್ತು ಜನ್ಮ ದಿನಾಂಕ ಮಾಹಿತಿ ಎಂಟರ್ ಮಾಡಿ.
- 'Submit' ಎಂಬಲ್ಲಿ ಕ್ಲಿಕ್ ಮಾಡುವ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಿ.
- ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್ ಅನ್ನು ಅಡ್ಮಿಟ್‌ ಕಾರ್ಡ್‌ ಪಡೆಯಲು ಉಪಯೋಗಿಸಿ.

Get Admit Card

ಯುಪಿಎಸ್‌ಸಿ ನಾಗರಿಕ ಸೇವೆ ಪರೀಕ್ಷೆಗೆ ಐಚ್ಛಿಕ ವಿಷಯದ ಆಯ್ಕೆ ಹೇಗೆ?

ಯುಪಿಎಸ್‌ಸಿಯು ರಕ್ಷಣಾ ಅಕಾಡೆಮಿ ಮತ್ತು ನೇವಲ್‌ ಅಕಾಡೆಮಿ ಪರೀಕ್ಷೆಯನ್ನು ಸೆಪ್ಟೆಂಬರ್ 6, 2020 ರಂದು ದೇಶದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಲಿದೆ.

ಅಭ್ಯರ್ಥಿಗಳು ಅಡ್ಮಿಟ್‌ ಕಾರ್ಡ್‌ನಲ್ಲಿ ನೀಡಲಾದ ಸೂಚನೆಗಳನ್ನು ತಪ್ಪದೇ ಓದಿಕೊಂಡು ಪರೀಕ್ಷೆಗೆ ಹಾಜರಾಗಲು ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ