ಆ್ಯಪ್ನಗರ

ಮೈಸೂರು ದಸರಾ ರಂಗೋಲಿ ಸ್ಪರ್ಧೆ: ಚುಕ್ಕಿ ಇಟ್ಟು ಚಿತ್ತಾರ ಬಿಡಿಸಿ ಖುಷಿ ಪಟ್ಟ ಮಹಿಳೆಯರು

ಅಂದಾಜು 80 ಮಹಿಳೆಯರು, ಪುಟಾಣಿ ಮಕ್ಕಳು ಸಹ ಚುಕ್ಕಿ ಇಟ್ಟು ರಂಗವಲ್ಲಿ ಬಿಡಿಸಿ ಗಮನ ಸೆಳೆದರು.

Vijaya Karnataka Web 30 Sep 2019, 1:18 pm
ಮೈಸೂರು: ದಸರಾ ಸಮಯದಲ್ಲಿ ನಗರದಲ್ಲಿರುವ ಅರಮನೆ ವಿವಿಧ ಬಣ್ಣಗಳ ಬೆಳಕಿನಿಂದ ಕಂಗೊಳಿಸುತ್ತದೆ. ಸೋಮವಾರ ಬೆಳಗ್ಗೆ ಅರಮನೆ ಅಂಗಣವೆಲ್ಲ ವರ್ಣಮಯವಾಗಿತ್ತು.
Vijaya Karnataka Web ರಂಗೋಲಿ


ಅರಮನೆ ಮುಂಭಾಗದಲ್ಲಿ ಸೋಮವಾರ ಮುಂಜಾನೆ ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಮೂಡಿದವು.

ಮೈಸೂರು ದಸರಾ 2019: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಡಹಬ್ಬಕ್ಕೆ ಸಾಹಿತಿ ಎಸ್.ಎಲ್. ಭೈರಪ್ಪ ಚಾಲನೆ

ಮಹಿಳಾ ದಸರಾ ಉಪ ಸಮಿತಿ ಆಯೋಜಿಸಿದ್ದ ಈ ಸ್ಪರ್ಧೆಗೆ ಶಾಸಕ ಎಸ್. ಎ. ರಾಮದಾಸ್ ಚಾಲನೆ ನೀಡಿದರು. ಮಕ್ಕಳು ಸೇರಿದಂತೆ ಎಂಬತ್ತಕ್ಕೂ ಹೆಚ್ಚು ಮಂದಿ ಮಹಿಳೆಯರು ಭಾಗವಹಿಸಿದ್ದರು. ದಸರಾ ಮಹೋತ್ಸವವನ್ನು ಉದ್ದೇಶವಾಗಿರಿಸಿಕೊಂಡು ಮಹಿಳೆಯರು ಮತ್ತು ಮಕ್ಕಳು ಜಂಬೂಸವಾರಿ ಮೆರವಣಿಗೆ ಚಾಮುಂಡೇಶ್ವರಿ ದೇವಿಯ ಮೂರ್ತಿ ಚಂದ್ರಯಾನ ಸೇರಿದಂತೆ ರಂಗೋಲಿಗಳನ್ನು ಬಿಡಿಸುವ ಮೂಲಕ ಅರಮನೆ ಅಂಗಳದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದರು ಅಲ್ಲದೆ ಕೆ ಆರ್ ನಗರದ ಮಹಿಳೆಯೊಬ್ಬರು ನವಧಾನ್ಯಗಳಲ್ಲಿ ರಚಿಸಿದ ರಂಗೋಲಿ ವಿಶೇಷವಾಗಿತ್ತು.

ಮೈಸೂರು ದಸರಾಕ್ಕೆ ಹೋಗುವವರು ಇದನ್ನೆಲ್ಲಾ ನೆನಪಿಟ್ಟುಕೊಳ್ಳಿ !

ಗ್ರಾಮೀಣ ಭಾಗದಲ್ಲಿ ಎಲ್ಲರ ಮನೆ ಅಂಗಳದಲ್ಲಿ ಶೋಭಿಸುವ ರಂಗೋಲಿ ಕಲೆ ನಗರ ಪ್ರದೇಶದಲ್ಲಿ ಕಣ್ಮರೆಯಾಗುತ್ತಿದೆ. ಇದ್ದರೂ, ಸಂಖ್ಯೆ ಬಹಳ ಕಡಿಮೆ. ನಮ್ಮ ಸಂಸ್ಕೃತಿಯ ಪ್ರಮುಖ ಭಾಗಗಳಲ್ಲೊಂದಾಗಿರುವ, ರಂಗೋಲಿ ಕಲೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಪ್ರತಿ ವರ್ಷ ದಸರಾ ಸಮಯದಲ್ಲಿ ಅರಮನೆ ಅಂಗಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.


ಈ ನಿಗದಿತ ಅವಧಿಯಲ್ಲಿ ಬಿಡಿಸಿದ ರಂಗೋಲಿಗಳಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಯಿತು. ಸಚಿವರಾದ ವಿ ಸೋಮಣ್ಣ ಮತ್ತು ಶಶಿಕಲಾ ಜೊಲ್ಲೆ ಅವರು ವಿಜೇತರಿಗೆ ಬಹುಮಾನವನ್ನು ವಿತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ