ಆ್ಯಪ್ನಗರ

Dasara Buses: ಹಬ್ಬದ ನಿಮಿತ್ತ ಬೆಂಗಳೂರಿನಿಂದ ಬೆಳಗಾವಿ, ಮಂಗಳೂರಿಗೆ ವಿಶೇಷ ರೈಲು

ದಸರಾ ಹಬ್ಬದ ಸಂಬಂಧ ಬೆಂಗಳೂರು-ಬೆಳಗಾವಿ ಮತ್ತು ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಸೌಲಭ್ಯ ಪ್ರಕಟಿಸಿದೆ.

Vijaya Karnataka Web 27 Sep 2019, 10:49 am
ಬೆಂಗಳೂರು: ದಸರಾ ನಿಮಿತ್ತ ನೈಋತ್ಯ ರೈಲ್ವೆ ಇಲಾಖೆ (ಎಸ್‌ಡಬ್ಲ್ಯೂಆರ್) ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಸಂಚಾರ ಸೌಲಭ್ಯ ಘೋಷಿಸಿವೆ. ದಸರಾ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸುವಿಧಾ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್‌ಡಬ್ಲ್ಯೂಆರ್ ಪ್ರಕಟಿಸಿದೆ.
Vijaya Karnataka Web dasara


ಬೆಂಗಳೂರು-ಬೆಳಗಾವಿ

ಸುವಿಧಾ ಸ್ಪೇಷಲ್ ಹೆಸರಿನ ರೈಲು ಸಂಖ್ಯೆ 82567 ಮತ್ತು 82658 ರಾಜಧಾನಿ ಬೆಂಗಳೂರು-ಬೆಳಗಾವಿ ನಡುವೆ ಸಂಚಾರ ನಡೆಸಲಿದೆ. 82567 ಸಂಖ್ಯೆಯ ರೈಲು ಅಕ್ಟೋಬರ್ 4ರಂದು ರಾತ್ರಿ 11 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 11.15ಕ್ಕೆ ಬೆಳಗಾವಿ ತಲುಪಲಿದೆ. ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಸಂಚರಿಸಲಿರುವ ಈ ರೈಲು, ಒಂದು 2 ಟೈರ್ ಎಸಿ ಕೋಚ್, ಎರಡು 3 ಟೈರ್ ಎಸಿ ಕೋಚ್, 16 ದ್ವೀತಿಯ ದರ್ಜೆಯ ಸ್ಲೀಪರ್ ಕೋಚ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್‌ ವ್ಯವಸ್ಥೆ ಹೊಂದಿದೆ.

ಮೈಸೂರು ದಸರಾ 2019: ನಾಡಹಬ್ಬಕ್ಕೆ ಶಾಕ್ ಕೊಟ್ಟಿದೆ ರೈಲ್ವೆ ಇಲಾಖೆ!

82658 ಸಂಖ್ಯೆಯ ರೈಲು ಅಕ್ಟೋಬರ್ 8ರ ಸಂಜೆ 7ಕ್ಕೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 6.20ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.

ಬೆಂಗಳೂರು-ಮಂಗಳೂರು

ಸುವಿಧಾ ಸ್ಪೇಷಲ್ ಹೆಸರಿನ ರೈಲು ಸಂಖ್ಯೆ 82655 ಮತ್ತು 82656, ಬೆಂಗಳೂರು-ಮಂಗಳೂರು ನಡುವೆ ಸಂಚಾರಿಸಲಿದೆ. 82655 ಸಂಖ್ಯೆಯ ರೈಲು ಅಕ್ಟೋಬರ್ 4ರಂದು ರಾತ್ರಿ 10.20ಕ್ಕೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟು ಮರುದಿನ ಮುಂಜಾನೆ 8.30ಕ್ಕೆ ಮಂಗಳೂರು ನಿಲ್ದಾಣ ತಲುಪಲಿದೆ. ಶ್ರವಣಬೆಳಗೊಳ ಮತ್ತು ಹಾಸನ ಮಾರ್ಗವಾಗಿ ಸಂಚರಿಸಲಿರುವ ಈ ರೈಲು, ಒಂದು 3 ಟೈರ್ ಎಸಿ ಕೋಚ್, 12 ದ್ವೀತಿಯ ದರ್ಜೆಯ ಸ್ಲೀಪರ್ ಕೋಚ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್‌ ವ್ಯವಸ್ಥೆ ಹೊಂದಿದೆ.

ಪ್ರವಾಸಿ ವಾಹನಗಳಿಗೆ ದಸರೆ ತಿಂಗಳು ಮುಕ್ತ ಪ್ರವೇಶ

82656 ಸಂಖ್ಯೆಯ ರೈಲು ಅಕ್ಟೋಬರ್ 9ರ ರಾತ್ರಿ 10.15ಕ್ಕೆ ಮಂಗಳೂರು ನಿಲ್ದಾಣದಿಂದ ಹೊರಡಲಿದ್ದು, ಮರುದಿನ 8 ಗಂಟೆಗೆ ಯಲಹಂಕಾ ನಿಲ್ದಾಣ ತಲುಪಲಿದೆ.

ಕೆಎಸ್‌ಆರ್‌ಟಿಸಿಯಿಂದ ವಿಶೇಷ ಆಫರ್

ದಸರಾ ನಿಮಿತ್ತ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಪ್ಯಾಕೇಜ್‌ ಘೋಷಿಸಿದೆ. ಈ ಮೂಲಕ ನೀವು ಮೈಸೂರು ಮಾತ್ರವಲ್ಲದೆ, ಬೇರೆ ಜಿಲ್ಲೆ ಮತ್ತು ಹೊರ ರಾಜ್ಯಗಳನ್ನೂ ಸುತ್ತಾಡಬಹುದು.

ಬಸ್‌ಗಳ ಲಭ್ಯ

ರಾಜಹಂಸ, ಐರಾವತ, ಐರಾವತ ಕ್ಲಬ್‌ ಕ್ಲಾಸ್, ವೇಗದೂತ ಸೇವೆಗಳ ಜೊತೆಗೆ ವಿಶೇಷ ಪ್ರವಾಸ ಪ್ಯಾಕೇಜ್‌ನ್ನು ನೀಡಲಾಗುತ್ತಿದೆ. ಈ ವಿಶೇಷ ಪ್ರವಾಸಿ ಬಸ್‌ಗಳು ಬೆಳಗ್ಗೆ 6.30ಕ್ಕೆ ಮೈಸೂರಿನಿಂದ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು ಮೈಸೂರು ಸುತ್ತಮುತ್ತಲಿನ ನಾನಾ ಸ್ಥಳಗಳಿಗೆ ಸಂಚರಿಸಿ ಸಂಜೆ ಮತ್ತೆ ಮೈಸೂರಿಗೆ ಹಿಂತಿರುಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ