ಆ್ಯಪ್ನಗರ

ದಸರಾದಲ್ಲಿ ಬುಡಕಟ್ಟು 'ಹಾಡಿ ಮನೆ ಊಟ', ಬಿರಿಯಾನಿ ಸವಿಯುವುದೇ ಅದೃಷ್ಟ

ಮೈಸೂರು ದಸರಾ 2019ರ ಆಚರಣೆಗೆ ಎಲ್ಲಿಲ್ಲದ ತಯಾರಿ ನಡೆಯುತ್ತಿದ್ದು, ಆಹಾರ ಮೇಳದಲ್ಲಿ ಬುಡಕಟ್ಟು ಜನಾಂಗದ 'ಹಾಡಿ ಮನೆ ಊಟ' ಈ ಬಾರಿಯೂ ಇರಲಿದೆ. ಪ್ರವಾಸಿಗರು ಬಂಬೂ ಬಿರಿಯಾನಿ, ಬಿದರಕ್ಕಿ ಪಾಯದ ರುಚಿ ನೋಡಲು ಕಾತರರಾಗಿದ್ದಾರೆ.

Vijaya Karnataka Web 26 Sep 2019, 7:12 pm
ಮೈಸೂರು: ಕಳೆದ ದಸರಾದ ಆಹಾರ ಮೇಳಗಳಲ್ಲಿ ಬಂಬೂ ಬಿರಿಯಾನಿ, ಬಿದರಕ್ಕಿ ಪಾಯಸದ ರುಚಿ ಉಣ ಬಡಿಸಿರುವ ಬುಡಕಟ್ಟು ಸಮುದಾಯ, ಈ ಬಾರಿ ಕೂಡ ಬುಡಕಟ್ಟು ಆಹಾರವನ್ನು ಪರಿಚಯಿಸಲು 'ಹಾಡಿ ಮನೆ ಊಟ' ಮಳಿಗೆ ತೆರೆಯುತ್ತಿದೆ.
Vijaya Karnataka Web bamboo biryani


ದಸರೆಯಲ್ಲಿ ಕುಣಿದು ಕುಪ್ಪಳಿಸುವ, ತಿಂದು ತೇಗುವ ಕಾರ್ಯಕ್ರಮ ಬೇಕಿತ್ತೇ?

ಮೈಸೂರು ದಸರೆಯ ಆಹಾರ ಮೇಳದಲ್ಲಿ ಪ್ರವಾಸಿಗರು, ಸಾರ್ವಜನಿಕರಿಗೆ ಆದಿವಾಸಿ ಪಾರಂಪರಿಕ ಬುಡಕಟ್ಟು ಆಹಾರಗಳನ್ನು ಪರಿಚಯಿಸುತ್ತಾ ಬಂದಿದ್ದು, ಈ ಬಾರಿಯೂ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದ ಆಲದ ಮರದ ಕೆಳಗೆ ಹಾಡಿ ಮನೆ ಊಟ ಮಳಿಗೆ ತೆರೆಲಾಗುತ್ತಿದೆ. ಇದರ ಜತೆ ಮಳಿಗೆಯಲ್ಲಿ ಕಾಡು ಕೊತ್ತಂಬರಿ, ಕಾಡು ಕರಿಬೇವು, ಕಾಡು ಅರಿಶಿಣ, ಕಾಡು ಗೆಣಸು, ಬಿದಿರು ಬೊಂಬಿನಿಂದ ತಯಾರಿಸಲ್ಪಟ್ಟ ಬಿರಿಯಾನಿ, ಬಿದಿರು ಕಳ್ಳೆಪಲ್ಯ, ಬಿದಿರು ಅಕ್ಕಿಯ ಪಾಯಸ, ಕಾಡು ಬಾಳೆಹಣ್ಣು ಸೇರಿದಂತೆ ನಾನಾ ಆದಿವಾಸಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ.

ಮೈಸೂರು ದಸರಾ : ಅರಮನೆಯಲ್ಲಿ ರಾಜರು ಪಾಲಿಸುತ್ತಿದ್ದ ನಿಯಮಗಳು

ಈ ಕುರಿತು ಸುದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ಕೃಷ್ಣಯ್ಯ, ಬೊಂಬು ಬಿರಿಯಾನಿಗೆ 180 ರೂ., ಜೇನುತುಪ್ಪ ಮಿಶ್ರಿತ ಕಾಡು ಗೆಣಸಿಗೆ 50 ರೂ., ಮಾಕಳಿ ಬೇರಿನ ಟೀ ಗೆ 20 ರೂ., ಏಡಿ ಸಾರು ಮತ್ತು ರಾಗಿ ಮುದ್ದೆಗೆ 100 ರೂ. ನಿಗದಿಪಡಿಸಿರುವುದಾಗಿ ಮಾಹಿತಿ ನೀಡಿದರು.

ಅ.1ರಿಂದ ಮೂರು ದಿನಗಳ ರೈತ ದಸರಾ: ಅನಾವರಣಗೊಳ್ಳಲಿದೆ ಗ್ರಾಮೀಣ ಸೊಬಗು

ಇದರ ಜೊತೆಗೆ ಗಿಡಮೂಲಿಕೆ ತಜ್ಞೆ ನಾಗಮ್ಮ ಎಂಬುವವರು ಹಲವು ಕಾಯಿಲೆಗಳಿಗೆ ಗಿಡಮೂಲಿಕೆ ಔಷಧ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾವೇರ, ರಾಜ್ಯ ಜಂಟಿ ಕಾರ್ಯದರ್ಶಿ ಸಾವಿತ್ರಿ, ಕುಮಾರ್‌, ರಾಮು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಾಡ ಹಬ್ಬ ಮೈಸೂರು ದಸರಾ 2019ಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಜಂಬೂ ಸವಾರಿ ನೋಡಲು ಜನ ಕಾತುರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ