ಆ್ಯಪ್ನಗರ

ದಾಳಿಂಬೆ ಬೆಳೆ ಉತ್ಪಾದಕತೆ ಹೆಚ್ಚಿಸುವುದು ಹೇಗೆ?

ವಿಕ ಸುದ್ದಿಲೋಕ 14 Dec 2022, 5:51 pm
ದಾಳಿಂಬೆ ಬೆಳೆ ಉತ್ಪಾದಕತೆ ಹೆಚ್ಚಿಸುವ ತಂತ್ರಜ್ಞಾನಗಳು
Vijaya Karnataka Web ​Pomegranate

ತೋಟಗಾರಿಕೆ ಬೆಳೆಗಳಲ್ಲಿ ದಾಳಿಂಬೆ ಪ್ರಮುಖವಾದದ್ದು. ತೋಟಗಾರಿಕೆ ಸಂಶೋಧನೆ, ತರಬೇತಿ, ವಿಸ್ತರಣೆ ಕ್ಷೇತ್ರಗಳಲ್ಲಿ ನಿರತವಾದ ನಾನಾ ಸಂಸ್ಥೆಗಳು, ವಿಜ್ಞಾನಿಗಳು ಹಾಗೂ ತಂತ್ರಜ್ಞರು ದಾಳಿಂಬೆ ಬೆಳೆ ಉತ್ಪಾದನೆ ಹೆಚ್ಚಿಸಲು ಪೂರಕವಾದ ತಾಂತ್ರಿಕತೆಗಳನ್ನು 'ದಾಳಿಂಬೆ ಬೆಳೆ ಉತ್ಪಾದಕತೆ ಹೆಚ್ಚಿಸುವ ತಂತ್ರಜ್ಞಾನಗಳು' ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ದಾಳಿಂಬೆ ಬೆಳೆ ಪರಿಚಯ, ಸುಧಾರಿತ ದಾಳಿಂಬೆ ಬೆಳೆ ಬೇಸಾಯ ಕ್ರಮಗಳು, ದಾಳಿಂಬೆಗೆ ಬರುವ ರೋಗ ಮತ್ತು ಕೀಟ ನಿರ್ವಹಣೆ, ದಾಳಿಂಬೆ ಕೊಯ್ಲೋತ್ತರ ತಂತ್ರಜ್ಞಾನ, ಸಮಗ್ರ ಪೋಷಕಾಂಶ ಮತ್ತು ರೋಗ- ಕೀಟ ನಿಯಂತ್ರಣ ವೇಳಾಪಟ್ಟಿ, ದಾಳಿಂಬೆ ಮಾರಾಟ ಮತ್ತು ರಫ್ತುದಾರರ ಮಾಹಿತಿ ಮತ್ತು ದಾಳಿಂಬೆ ಮಾರುಕಟ್ಟೆ ವಿಶ್ಲೇಷಣೆ ಈ ಪುಸ್ತಕದಲ್ಲಿದೆ. ದಾಳಿಂಬೆ ಬೆಳೆಯುವ ರೈತರಿಗೆ ಈ ಕಿರು ಹೊತ್ತಿಗೆ ಸೂಕ್ತ ಮಾಹಿತಿ ನೀಡುತ್ತದೆ. ಶ್ಯಾಮರಾವ್‌ ಕುಲಕರ್ಣಿ ಹಾಗೂ ಇತರರು ಬರೆದ ಈ ಪುಸ್ತಕ 102 ಪುಟಗಳನ್ನು ಹೊಂದಿದ್ದು, ಬೆಲೆ 100 ರೂಪಾಯಿ. ಪುಸ್ತಕ ದೊರೆಯುವ ಸ್ಥಳ: ಪ್ರಕಟಣೆ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ರಾಯಚೂರು, 584109. ದೂ. 08532 - 220029.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ