ಆ್ಯಪ್ನಗರ

ಎಂಬಿಎಯಲ್ಲಿ ಸ್ಪೆಶಲೈಸೇಶನ್‌ ಆಯ್ಕೆ

ಎಂಬಿಎ ಕಲಿಕೆಗೆ ಮುಂದಾಗುವ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಅರಿತುಕೊಂಡು ಅದರಲ್ಲಿ ಸ್ಪೆಶಲೈಸೇಶನ್‌ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದು ಯಾವಾಗಲೂ ಉತ್ತಮ.

Vijaya Karnataka 26 Feb 2019, 3:07 pm
ನಾನಾ ವಿಧದ ಮ್ಯಾನೇಜ್ಮೆಂಟ್‌ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಒದಗಿಸಲು ಸುಭದ್ರ ಬುನಾದಿಯನ್ನು ಎಂಬಿಎ ಹಾಕಿಕೊಡುತ್ತದೆ. ಅದರಲ್ಲಿ ಹಲವಾರು ಸ್ಪೆಶಲೈಸೇಶನ್‌ ಆಯ್ಕೆಗಳಿವೆ.
Vijaya Karnataka Web mba


ಎಂಬಿಎ ಕಲಿಕೆಗೆ ಮುಂದಾಗುವ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಅರಿತುಕೊಂಡು ಅದರಲ್ಲಿ ಸ್ಪೆಶಲೈಸೇಶನ್‌ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದು ಯಾವಾಗಲೂ ಉತ್ತಮ. ಇದರ ಜತೆಗೆ ಉದ್ಯೋಗ ಮಾರುಕಟ್ಟೆಯ ಅವಶ್ಯಕತೆ, ತಮ್ಮ ಆಯ್ಕೆಯ ಉದ್ಯೋಗ ಸ್ವರೂಪ, ವೇತನ ಹೀಗೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಹಲವು ವಿಭಾಗ: ಎಂಬಿಎಯಲ್ಲಿ ಹಲವಾರು ವಿಭಾಗಗಳಿವೆ. ಇದರಲ್ಲಿ ಹೆಚ್ಚು ಜನಪ್ರಿಯವಾಗಿರುವ ಸ್ಪೆಶಲೈಸೇಶನ್‌ ವಿಭಾಗಗಳೆಂದರೆ ಮಾರ್ಕೆಟಿಂಗ್‌, ಹ್ಯೂಮನ್‌ ರಿಸೋರ್ಸ್‌, ಫೈನಾನ್ಸ್‌, ಇನ್‌ಫಾರ್ಮೇಶನ್‌ ಸಿಸ್ಟಂ, ಕನ್ಸಲ್ಟಿಂಗ್‌, ಎಂಟರ್‌ಪ್ರಿನರ್‌ಶಿಪ್‌, ಅಪರೇಶನ್ಸ್‌ ಮ್ಯಾನೇಜ್‌ಮೆಂಟ್‌.

ಅಗತ್ಯ ಕೌಶಲ್ಯ: ಮಾರ್ಕೆಟಿಂಗ್‌ ಎಂಬಿಎ ಮಾಡುವ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆಗೆ ತಮ್ಮನ್ನು ಒಡ್ಡಿಕೊಳ್ಳುವ ಸಾಮರ್ಥ್ಯ, ನಾನಾ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕುರಿತು ಸಂವಹನ ಸೇರಿದಂತೆ ನಾನಾ ಕೌಶಲ್ಯಗಳು ಅಗತ್ಯವಿರುತ್ತವೆ. ಇದಲ್ಲದೆ ಹೊಸ ವ್ಯಾಪಾರ, ಆದಾಯದ ಏರಿಕೆ, ಮಾರುಕಟ್ಟೆ ಪಾಲುದಾರಿಕೆಯಲ್ಲಿ ಹೆಚ್ಚಳದಂತಹ ಮಹತ್ವದ ಜವಾಬ್ದಾರಿಗಳು ಉದ್ಯೋಗದ ಬಳಿಕ ಅವರ ಹೆಗಲೇರುತ್ತವೆ ಎಂಬುದು ನೆನಪಿರಬೇಕು.

ಮಾನವ ಸಂಪನ್ಮೂಲ ವಿಭಾಗದಲ್ಲಿ ಎಂಬಿಎ ಮಾಡುವವರು ನಾಯಕತ್ವ ಗುಣವನ್ನು ಹೊಂದಿರಲೇಬೇಕು. ಉದ್ಯೋಗಿಗಳನ್ನು ನಿರ್ವಹಿಸುವ ಸಾಮರ್ಥ್ಯ, ಉದ್ಯೋಗ ನೀಡಿಕೆ, ಅದಕ್ಕೆ ಸೂಕ್ತ ವ್ಯಕ್ತಿಗಳ ಆಯ್ಕೆ, ತರಬೇತಿ, ಮೋಟಿವೇಶನ್‌ ಮೊದಲಾದ ಹೊಣೆಗಾರಿಕೆ ಇವರ ಹೆಗಲೇರುತ್ತವೆ.

ಅತಿ ಹೆಚ್ಚು ಬೇಡಿಕೆ: ಫೈನಾನ್ಸ್‌ ಎಂಬಿಎ ಸದ್ಯದ ಮಟ್ಟಿಗೆ ಅತಿ ಹೆಚ್ಚು ಜನಪ್ರಿಯವಾಗಿರುವ ಎಂಬಿಎ ಕೋರ್ಸ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಂಬಿಎ ಮಾಡುವ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 22ರಷ್ಟು ವಿದ್ಯಾರ್ಥಿಗಳು ಇದನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಯಶಸ್ವಿಯಾಗಿ ಕೋರ್ಸ್‌ ಮುಗಿಸಿದ ಅಭ್ಯರ್ಥಿಗಳಿಗೆ ಉನ್ನತ ವೇತನವೂ ಸಿಗುವುದು ಇದನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವಾಗಿದೆ.

ಇನ್‌ಫಾರ್ಮೆಶನ್‌ ಸಿಸ್ಟಂ ಎಂಬಿಎ ತಂತ್ರಜ್ಞಾನದ ಜತೆಗೆ ಸಂಬಂಧ ಹೊಂದಿದೆ. ಇ-ಕಾಮರ್ಸ್‌ನ್ನು ಪರಿಣಾಮಕಾರಿಯಾಗಿ ಮಾಡಲು ಶಕ್ತರಾಗಿರುವ ಅಂದರೆ ತಂತ್ರಜ್ಞಾನದಲ್ಲಿ ಆದ ಬೆಳವಣಿಗೆಗಳ ಮೇಲೆ ನಿರಂತರವಾಗಿ ನಿಗಾ ಇಟ್ಟು ಅಪ್‌ಡೇಟ್‌ ಆಗುತ್ತಿರುವ ವಿದ್ಯಾರ್ಥಿಗಳನ್ನು ಇದನ್ನು ಮಾಡಬಹುದು.

ಇನ್ನೂ ಹಲವು: ಉಳಿದಂತೆ ಕನ್ಸಲ್ಟಿಂಗ್‌ ಎಂಬಿಎ ಕೂಡ ಹೆಚ್ಚು ಜನಪ್ರಿಯವಾಗಿದೆ. ಸಂಸ್ಥೆಯೊಂದು ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಈ ವಿಭಾಗದಲ್ಲಿ ಎಂಬಿಎ ಮಾಡಿದವರ ಕೆಲಸವಾಗಿರುತ್ತದೆ. ಉದ್ಯಮಶೀಲತೆ (ಎಂಟರ್‌ಪ್ರಿನರ್‌ಶಿಪ್‌) ಎಂಬಿಎಯಲ್ಲಿ ಸ್ವಯಂ ಉದ್ಯಮ ಸ್ಥಾಪನೆಯ ನಿಟ್ಟಿನಲ್ಲಿ ಸಾಕಷ್ಟು ಕಲಿಕೆ ಮಾಡಬಹುದಾಗಿದೆ. ಈಗಂತ ಸ್ಟಾರ್ಟ್‌ಅಪ್‌ ಯುಗವಾದ್ದರಿಂದ ಈ ವಿಭಾಗಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ. ಅಪರೇಶನ್ಸ್‌ ಮ್ಯಾನೇಜ್‌ಮೆಂಟ್‌ ಎಂಬಿಎಯಲ್ಲಿ ಉದ್ಯಮವೊಂದರ ಉತ್ಪಾದನೆಗೆ ಸಂಬಂಧಪಟ್ಟ ಇಲ್ಲವೇ ಸೇವೆಗೆ ಸಂಬಂಧಪಟ್ಟ ವಿಷಯಗಳ ನಿರ್ವಹಣೆಯನ್ನು ಕಲಿಸಲಾಗುತ್ತದೆ. ಗುಣಮಟ್ಟ ನಿಯಂತ್ರಣ, ಹೊರಗುತ್ತಿಗೆ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಕೋ-ಆರ್ಡಿನೇಶನ್‌, ಸಪ್ಲೈಚೈನ್‌ ನಿರ್ವಹಣೆ ಸೇರಿದಂತೆ ನಾನಾ ಅಂಶಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ತುಂಬಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ