ಆ್ಯಪ್ನಗರ

ನೀಟ್‌ 2ನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿ ನಾಳೆ ಪ್ರಕಟ

ವೈದ್ಯಕೀಯ ಸೀಟಿನ ಆಂಕಾಕ್ಷಿಗಳಿಗೆ ತಮಗೆ ಯಾವ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದೆ ಎಂದು ಜುಲೈ 18ರಂದು ತಿಳಿಯಲಿದೆ. ಇದರ ಕುರಿತ ಹೆಚ್ಚಿನ ಮಾಹಿತಿಗೆ mcc.nic.inಗೆ ಭೇಟಿಕೊಡಿ.

Vijaya Karnataka Web 17 Jul 2019, 11:51 am
ಹೊಸದಿಲ್ಲಿ: ವೈದ್ಯಕೀಯ ಕೌನ್ಸೆಲಿಂಗ್‌ ಸಂಸ್ಥೆ (MCC) ನೀಟ್‌ ಕೌನ್ಸಿಲಿಂಗ್‌ ಎರಡನೇ ಸುತ್ತಿನ ಸೀಟ್‌ ಹಂಚಿಕೆಯನ್ನು ಜುಲೈ 18ರಂದು ಪ್ರಕಟಿಸಿಲಿದೆ. ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಯಾವ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಲಭಿಸಿದೆ ಎಂದು ತಿಳಿಯಲು mcc.nic.in ಸೈಟ್‌ಗೆ ಭೇಟಿ ಕೊಡಿ.
Vijaya Karnataka Web Neet


ವೈದ್ಯಕೀಯ ಕೌನ್ಸಿಲಿಂಗ್ ಸಂಸ್ಥೆಯ ಪ್ರಕಟಣೆಯ ಪ್ರಕಾರ ಎರಡನೇ ಸುತ್ತಿನ ಕೌನ್ಸೆಲಿಂಗ್‌ಗೆ ನೋಂದಣಿ ಹಾಗೂ ಶುಲ್ಕ ಪಾವತಿಗೆ ಜುಲೈ 11ರಿಂದ 13ರವರೆಗೆ ಅವಕಾಶವನ್ನು ನೀಡಲಾಗಿತ್ತು.

ಜು. 14 ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅರ್ಹ ಅಭ್ಯರ್ಥಿಗಳು ತಮ್ಮ ಆಯ್ಕೆಗಳನ್ನು ಬದಲಾಯಿಸಲು ಅವಕಾಶ ನೀಡಲಾಗಿತ್ತು. ಸೀಟು ಹಂಚಿಕೆಯ ಕಾರ್ಯವು ಜುಲೈ 15ರಿಂದ 17, 2019ರವರೆಗೆ ನಡೆಯಲಿದೆ.

ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಸಿಕ್ಕಿರುವ ವಿಧ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆಗೆ ಜುಲೈ 18ರಿಂದ ಜುಲೈ 25ರವರೆಗೆ ಕಾಲಾವಕಾಶ ನೀಡಲಾಗಿದೆ.

ಒಮ್ಮೆ ಪ್ರವೇಶ ಪಡೆದ ವಿದ್ಯಾರ್ಥಿಯು ನಂತರ ಆ ಸೀಟು ಖಾಲಿ ಬಿಡುವಂತಿಲ್ಲ ಎಂದು MCC ಸೂಚಿಸಲಾಗಿದೆ.

ಸೀಟು ಹಂಚಿಕೆಯನ್ನು ಚೆಕ್‌ ಮಾಡುವುದು ಹೇಗೆ?

* ಆಕಾಂಕ್ಷಿಗಳು MCC ವೆಬ್‌ಸೈಟ್‌ಗೆ ಭೇಟಿ ನೀಡಬೇಕು, ಅದರ ಹೋಮ್‌ಪೇಜ್‌ನಲ್ಲಿ ‘NEET 2nd Round Allotment List 2019“ ಅಂತ ಬರೆದಿರುತ್ತದೆ, ಅದನ್ನು ಕ್ಲಿಕ್ ಮಾಡಬೇಕು. ಆ ಲಿಂಕ್‌ ಕ್ಲಿಕ್ ಮಾಡಿದಾಗ PDF ಓಪನ್ ಆಗುತ್ತದೆ, ಅದರಲ್ಲಿ ನಿಮ್ಮ ರೋಲ್ ನಂಬರ್‌ ಹಾಗೂ ಇತರ ವಿವರಗಳನ್ನು ಹಾಕಿ ತಿಳಿದುಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ