ಆ್ಯಪ್ನಗರ

ದೇಹ ತೂಕ ಇಳಿಸುವ ಡಿಟಾಕ್ಸ್‌ ಪಾನೀಯ

ಈಗ ಡಿಟಾಕ್ಸಿಂಗ್‌ ಪಾನೀಯಗಳು ಜನಪ್ರಿಯವಾಗಿವೆ...

Vijaya Karnataka 2 Jun 2018, 5:00 am
ಈಗ ಡಿಟಾಕ್ಸಿಂಗ್‌ ಪಾನೀಯಗಳು ಜನಪ್ರಿಯವಾಗಿವೆ. ಇದರ ಸೇವನೆಯಿಂದ ದೇಹ ತೂಕ ಗಣನೀಯವಾಗಿ ಕಡಿಮೆಯಾಗುತ್ತದೆ.
Vijaya Karnataka Web detox drinks-1


ಲವಲವಿಕೆ ಸುದ್ದಿಲೋಕ

ಶರೀರದ ತೂಕ ಕಡಿಮೆ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಪಡುತ್ತಿರುವವರಿಗೆ ಡಿಟಾಕ್ಸ್‌ ಡ್ರಿಂಕ್ಸ್‌ ವರದಾನವಾಗಿ ಪರಿಣಮಿಸಿದೆ. ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕುವ ಈ ಪಾನೀಯಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದು ಗ್ಲಾಸ್‌ ಡಿಟಾಕ್ಸ್‌ ಪಾನೀಯದಲ್ಲಿ 48 ಕ್ಯಾಲೊರಿ, 0.5 ಗ್ರಾಂ ಪ್ರೋಟೀನ್‌, 0.4 ಗ್ರಾಂ ಕೊಬ್ಬು, 11 ಗ್ರಾಂ ಕಾರ್ಬೊಹೈಡ್ರೇಟ್ಸ್‌, 1.2 ಗ್ರಾಂ ನಾರು ಮತ್ತು 6 ಗ್ರಾಂ ಸಕ್ಕರೆ ಇವೆ.

ಆರೋಗ್ಯಕ್ಕೆ ಪೂರಕ

ಡಿಟಾಕ್ಸ್‌ ಪಾನೀಯದಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ದೇಹದ ಉರಿಯನ್ನು ಕಡಿಮೆ ಮಾಡುತ್ತದೆ ಮತ್ತು ಇಡೀ ದಿನ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಪಾನೀಯ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ದೇಹದ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಇದು ಲಿವರ್‌ ಅನ್ನು ಸ್ವಚ್ಛ ಮಾಡಿ ಅದರಲ್ಲಿರುವ ವಿಷ ವಸ್ತುಗಳನ್ನು ಹೊರ ಹಾಕುತ್ತದೆ.

ಮಾಡುವುದು ಹೇಗೆ?

ಒಂದು ಗ್ಲಾಸ್‌ ಬಿಸಿ ನೀರಿಗೆ ಎರಡು ಟೇಬಲ್‌ ಸ್ಪೂನ್‌ ಆ್ಯಪಲ್‌ ಸೈಡರ್‌ ವಿನಿಗರ್‌, ಒಂದು ಟೀ ಸ್ಪೂನ್‌ ಶುಂಠಿ ತುರಿ, ಕಾಲು ಟೀ ಸ್ಪೂನ್‌ ಚಕ್ಕೆ ಪುಡಿ ಮತ್ತು ಒಂದು ಚಿಟಿಕೆ ಕೆಂಪು ಮೆಣಸಿನ ಪುಡಿ ಹಾಕಿ ತಿರುವಿ. ನಂತರ ಇದಕ್ಕೆ ಎರಡು ಟೇಬಲ್‌ ಸ್ಪೂನ್‌ ನಿಂಬೆ ರಸ ಮತ್ತು ಒಂದು ಟೀ ಸ್ಪೂನ್‌ ಜೇನುತುಪ್ಪ ಹಾಕಿ ಮಿಕ್ಸ್‌ ಮಾಡಿ 30 ನಿಮಿಷ ಬಿಡಿ. ಆಮೇಲೆ ಈ ಹೆಲ್ದಿ ಡಿಟಾಕ್ಸ್‌ ಪಾನೀಯ ಸೇವಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ