ಆ್ಯಪ್ನಗರ

ಸಿಲೆಬ್ರಿಟಿ ಟೇಸ್ಟ್‌: ದಿಲ್‌ಪಸಂದ್‌ ಪ್ರಿಯ ಪ್ರಸಾದ್‌ ವಸಿಷ್ಠ

ಮುಗುಳ್ನಗೆ, ಬುಗುರಿ ಸಿನಿಮಾಗಳ ಮೂಲಕ ಎಲ್ಲರನ್ನೂ ರಂಜಿಸಿರುವ ನಟ ಪ್ರಸಾದ್‌ ವಸಿಷ್ಠ ...

Vijaya Karnataka 23 Jun 2018, 5:00 am
ಮುಗುಳ್ನಗೆ, ಬುಗುರಿ ಸಿನಿಮಾಗಳ ಮೂಲಕ ಎಲ್ಲರನ್ನೂ ರಂಜಿಸಿರುವ ನಟ ಪ್ರಸಾದ್‌ ವಸಿಷ್ಠ ಅವರ ಆಹಾರಾಭಿರುಚಿ ಹೀಗಿದೆ.
Vijaya Karnataka Web prasad vasishta


ನಂದಿನಿ ಕೆ.ಎಲ್‌

ಇಷ್ಟದ ತಿನಿಸು

ನನ್ನ ಫೇವರಿಟ್‌ ತಿನಿಸುಗಳ ಲಿಸ್ಟ್‌ನಲ್ಲಿ ದಿಲ್‌ಪಸಂದ್‌, ಕ್ರೀಮ್‌ ಬನ್‌ ಮುಂತಾದ ಬೇಕರಿ ತಿನಿಸುಗಳಿಗೆ ಪ್ರಮುಖ ಸ್ಥಾನವಿದೆ. ಬೇಕರಿಗೆ ಹೋದಾಗ ಇವುಗಳನ್ನು ತಿನ್ನಲು ಮರೆಯುವುದಿಲ್ಲ. ಇದಲ್ಲದೆ ನನ್ನ ಅಮ್ಮ ಮಾಡುವ ಎಲ್ಲಾ ರೀತಿಯ ಅಡುಗೆ ನನಗೆ ಇಷ್ಟವಾಗುತ್ತದೆ. ನಾನು ಪಕ್ಕಾ ಸಸ್ಯಹಾರಿ. ಚಪಾತಿ, ಹುರುಳಿಕಾಯಿ ಪಲ್ಯ ನನ್ನ ಆಲ್‌ಟೈಮ್‌ ಫೇವರಿಟ್‌. ವೈವಿಧ್ಯಮಯ ತರಕಾರಿ ಪಲ್ಯಗಳು, ದೋಸೆ, ಚಿತ್ರಾನ್ನಗಳನ್ನು ತುಂಬಾ ಇಷ್ಟಪಡುತ್ತೇನೆ. ನನಗೆ ಖಾರ ತಿನಿಸಿಗಿಂತ ಸ್ವೀಟ್ಸ್‌ ಇಷ್ಟ.

ಫೇವರಿಟ್‌ ಅಡ್ಡಾ

ವಿ.ವಿ ಪುರಂನಲ್ಲಿರುವ ಫುಡ್‌ ಸ್ಟ್ರೀಟ್‌ ನನ್ನ ಮೆಚ್ಚಿನ ಫುಡ್‌ ಅಡ್ಡಾ. ಅಲ್ಲಿಗೆ ಆಗಾಗ ಗೆಳೆಯರ ಜೊತೆ ಹೋಗಿ ವಿವಿಧ ತಿನಿಸುಗಳನ್ನು ತಿಂದು ಬರುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯೂಟಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಮನೆ ಊಟ ಎಲ್ಲಾ ಕಾಯಿಲೆಗಳಿಗೂ ಉತ್ತಮ ಔಷಧಿಧ.

ಅಡುಗೆ ಕೆಲಸ ಗೊತ್ತಿದೆ

ನನಗೆ ಅಡುಗೆ ಮನೆಯ ಎಲ್ಲಾ ಕೆಲಸಗಳು ಗೊತ್ತಿವೆ. ತರಕಾರಿ ಹೆಚ್ಚುವುದು, ಅದನ್ನು ಶುಚಿಗೊಳಿಸುವುದು, ಒಗ್ಗರಣೆ ಹಾಕುವುದು, ಇಡ್ಲಿ ಮತ್ತು ದೋಸೆ ಮಾಡುವುದು, ಒಬ್ಬಟ್ಟು ತಟ್ಟುವುದು, ಅನ್ನ, ಚಿತ್ರಾನ್ನ, ಚಪಾತಿ ಮಾಡುವುದು...ಹೀಗೆ ಎಲ್ಲವೂ ನನಗೆ ತಿಳಿದಿದೆ.

ಅಮ್ಮನ ಕೈರುಚಿ

ನನ್ನ ಅಮ್ಮ, ಅತ್ತಿಗೆ, ಪತ್ನಿ ತುಂಬಾ ಚೆನ್ನಾಗಿ ನನ್ನ ಟೇಸ್ಟ್‌ಗೆ ತಕ್ಕಂತೆ ಅಡುಗೆ ಮಾಡುತ್ತಾರೆ. ನಾವೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತೇವೆ. ಹೊರಗಡೆ ಹೋಗುವುದಕ್ಕಿಂತ ಮನೆಯಲ್ಲಿಯೇ ನಮಗೆ ಬೇಕಾದ ಶೈಲಿಯಲ್ಲಿ ಆಹಾರ ಮಾಡಿಕೊಂಡು ತಿನ್ನುತ್ತೇವೆ.

ಪೂರ್ವಜರ ರುಚಿಗೆ ಆದ್ಯತೆ

ವೆಬ್‌ಸೈಟ್‌, ಯುಟ್ಯೂಬ್‌ ಅಥವಾ ರೆಸಿಪಿ ಪುಸ್ತಕ ನೋಡಿ ಅಡುಗೆ ಮಾಡಿದರೆ ರುಚಿಯಾಗಿರುವುದಿಲ್ಲ. ಅಡುಗೆಯಲ್ಲಿ ಎಕ್ಸ್‌ಪರ್ಟ್‌ ಆಗಿರುವ ಅಜ್ಜಿ, ಅಮ್ಮನನ್ನು ನೋಡಿ ಅಡುಗೆ ಕಲಿತರೆ ಮಾತ್ರ ನಾವು ಅದರಲ್ಲಿ ಪರ್ಫೆಕ್ಟ್ ಆಗುತ್ತೇವೆ. ಯಾವಾಗಲೂ ನಮ್ಮ ಸಾಂಪ್ರದಾಯಿಕ ರುಚಿಗೆ ಆದ್ಯತೆ ಕೊಡಬೇಕು.

ನಾನು ಅಡುಗೆ ಮನೆಯಲ್ಲಿ ಯಾವಾಗಲೂ ಏನಾದರೂ ಚೇಷ್ಟೆ ಮಾಡುತ್ತಿರುತ್ತೇನೆ. ಒಗ್ಗರಣೆಗೆ ನೀರು ಸುರಿಯುವುದು ಮುಂತಾದ ತರಲೆ ಮಾಡುತ್ತಿರುತ್ತೇನೆ. ಒಮ್ಮೆ ಹೊಸ ರುಚಿಯ ಅಡುಗೆ ಮಾಡಲು ಹೋಗಿ ಎರಡು ಪಾತ್ರೆಗಳನ್ನು ಹಾಳು ಮಾಡಿದ್ದೆ. ಈಗ ಅದನ್ನು ನೆನಪಿಸಿಕೊಂಡರೆ ನಗು ಬರುತ್ತದೆ.

- ಪ್ರಸಾದ್‌ ವಸಿಷ್ಠ, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ