ಆ್ಯಪ್ನಗರ

ಸಿಲೆಬ್ರಿಟಿ ಟೇಸ್ಟ್‌: ತಂಬುಳಿ ಪ್ರಿಯ ರೇಣುಕ್‌

ಸಿನಿಮಾ, ಡಾನ್ಸ್‌ ಮತ್ತು ಸೀರಿಯಲ್‌ಗಳಲ್ಲಿ ಸಕ್ರಿಯವಾಗಿರುವ ಶಿರಸಿ ಮೂಲದ ನಟ ರೇಣುಕ್‌ ಕುಮಾರ್‌ ಅವರ ...

Vijaya Karnataka 9 Jun 2018, 5:00 am
ಸಿನಿಮಾ, ಡಾನ್ಸ್‌ ಮತ್ತು ಸೀರಿಯಲ್‌ಗಳಲ್ಲಿ ಸಕ್ರಿಯವಾಗಿರುವ ಶಿರಸಿ ಮೂಲದ ನಟ ರೇಣುಕ್‌ ಕುಮಾರ್‌ ಅವರ ಆಹಾರ ಅಭಿರುಚಿ ಹೀಗಿದೆ.
Vijaya Karnataka Web renuk kumar


ನಂದಿನಿ ಕೆ.ಎಲ್‌

ಸೌತ್‌ ಇಂಡಿಯನ್‌ ಫುಡ್‌ ಇಷ್ಟ

ನನಗೆ ವೆಜ್‌ ಹಾಗೂ ನಾನ್‌ವೆಜ್‌ ಆಹಾರಗಳೆರಡೂ ಇಷ್ಟವಾಗುತ್ತವೆ. ಅದರಲ್ಲೂ ಸೌತ್‌ ಇಂಡಿಯನ್‌ ಆಹಾರಗಳು ನನ್ನ ಆಲ್‌ಟೈಮ್‌ ಫೇವರೀಟ್‌. ತಂಬುಳಿ, ರವೆ ದೋಸೆ, ಚಿಕನ್‌ ಬಿರಿಯಾನಿಯನ್ನು ಯಾವಾಗ ಕೊಟ್ಟರೂ ತಿನ್ನುತ್ತೇನೆ. ಚಪಾತಿ, ರೊಟ್ಟಿ ಮುಂತಾದ ಮನೆಯೂಟವನ್ನೇ ಹೆಚ್ಚು ಇಷ್ಟಪಡುತ್ತೇನೆ.

ಮೆಚ್ಚಿನ ಅಡ್ಡಾ

ವಿ.ವಿ ಪುರಂನಲ್ಲಿರುವ ಚಾಟ್ಸ್‌ ಸೆಂಟರ್‌, ಬನಶಂಕರಿಯಲ್ಲಿರುವ ದೊನ್ನೆ ಬಿರಿಯಾನಿ ಅಂಗಡಿ ನನ್ನ ಫೇವರಿಟ್‌ ಫುಡ್‌ ಅಡ್ಡಾ. ಇಲ್ಲಿಗೆ ಆಗಾಗ ಗೆಳೆಯರ ಜೊತೆ ಹೋಗುತ್ತೇನೆ. ಬೆಳಗ್ಗಿನ ತಿಂಡಿಗೆ ಮಯ್ಯಾಸ್‌ಗೆ ಹೋಗಲು ಇಷ್ಟಪಡುತ್ತೇನೆ.

ಅಡುಗೆ ಎಕ್ಸ್‌ಪರ್ಟ್‌

ನನಗೆ ವೈವಿಧ್ಯಮಯವಾದ ವೆಜ್‌ ಹಾಗೂ ನಾನ್‌ವೆಜ್‌ ಖಾದ್ಯಗಳನ್ನು ಮಾಡಲು ಗೊತ್ತಿದೆ. ಚಿಕನ್‌ ಫ್ರೈ ಹಾಗೂ ಪುಲಾವ್‌ಗಳನ್ನು ಸಖತ್ತಾಗಿ ಮಾಡುತ್ತೇನೆ. ನನ್ನಮ್ಮನನ್ನು ನೋಡಿ ಅಡುಗೆ ಮಾಡಲು ಕಲಿತಿದ್ದೇನೆ. ಅವರು ಮಾಡುವ ತಂಬುಳಿ, ಸಾಂಬಾರು, ನನ್ನ ಚಿಕ್ಕಮ್ಮ ಮಾಡುವ ಪುಲಾವ್‌ ಅಂದ್ರೆ ನನಗೆ ಪಂಚಪ್ರಾಣ.

ವೆರೈಟಿ ಡಯಟ್‌ ಮೆನು

ಇತ್ತೀಚೆಗಷ್ಟೇ ಡಯಟಿಂಗ್‌ ಶುರು ಮಾಡಿದ್ದೇನೆ. ಪ್ರತಿದಿನ ಮೊಟ್ಟೆ ಮತ್ತು ಅರ್ಧ ಕೆ.ಜಿ ಚಿಕನ್‌ ತಿನ್ನುತ್ತೇನೆ. ಫ್ರೂಟ್‌ ಸಲಾಡ್‌, ರೋಟಿ, ಚಪಾತಿ, ಬಾದಾಮಿ ತಿನ್ನುತ್ತೇನೆ. ವರ್ಕೌಟ್‌ ಮಾಡುವಾಗ ದೇಹಕ್ಕೆ ಹೆಚ್ಚಿನ ಪೌಷ್ಟಿಕ ಆಹಾರಗಳ ಅಗತ್ಯವಿರುತ್ತದೆ. ಆದ್ದರಿಂದ ಹೆಲ್ದಿ ಆಹಾರ ಸೇವನೆಗೆ ಆದ್ಯತೆ ನೀಡುತ್ತೇನೆ. ಹೆಚ್ಚು ಬಿಸಿ ನೀರು ಕುಡಿದರೆ ಆರೋಗ್ಯ ಉತ್ತಮವಾಗಿರುತ್ತದೆ.

ಎಕ್ಸ್‌ಪರಿಮೆಂಟ್‌ ಶೂರ

ನಾನು ಏನೇ ಆಹಾರ ತಯಾರಿಸಿದರೂ ಅದನ್ನು ಮೊದಲು ನನ್ನ ಆಪ್ತ ಗೆಳೆಯ ಹರೀಶ್‌ ಮೇಲೆ ಎಕ್ಸ್‌ಪರಿಮೆಂಟ್‌ ಮಾಡುತ್ತೇನೆ. ಹಲವು ಬಾರಿ ಅಡುಗೆ ಕೆಟ್ಟು ಹೋದಾಗಲೂ ಅವನಿಗೇ ತಿನ್ನಿಸಿದ್ದೇನೆ. ಅರ್ಧ ಬೆಂದ ಅನ್ನ, ಖಾರ ಸಾಂಬಾರು, ಹೊಸ ರುಚಿ ಇತ್ಯಾದಿಗಳನ್ನು ಮಾಡಿದಾಗ ಗೆಳೆಯನೇ ಸೇವಿಸುತ್ತಾನೆ.

ಚಿಕನ್‌ ಫ್ರೈ ಆವಾಂತರ

ಒಮ್ಮೆ ಒಗ್ಗರಣೆ ಹಾಕಲು ಹೋಗಿ ಮುಖದ ತುಂಬಾ ಸಾಸಿವೆ ಸಿಡಿಸಿಕೊಂಡೆ. ಅದೇ ಗಡಿಬಿಡಿಯಲ್ಲಿ ಚಿಕನ್‌ ಕರ್ರಿ ತಯಾರಿಸಲು ಹೋಗಿ ಅದು ಸೀದು ಹೋಗಿತು. ಅಂದಿನಿಂದ ತುಂಬಾ ಎಚ್ಚರಿಕೆಯಿಂದ ಅಡುಗೆ ಮಾಡುತ್ತೇನೆ.

ನಮ್ಮ ಪೂರ್ವಜರು ರೂಢಿಸಿಕೊಂಡು ಬಂದಿರುವ ಆಹಾರ ಶೈಲಿ ನಮ್ಮ ದೇಹಕ್ಕೆ ಒಗ್ಗುತ್ತದೆ. ವೆಸ್ಟರ್ನ್‌ ಶೈಲಿ ಆಹಾರ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

- ರೇಣುಕ್‌ ಕುಮಾರ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ