ಆ್ಯಪ್ನಗರ

ಸಿಲೆಬ್ರಿಟಿ ಟೇಸ್ಟ್‌: ಹಬ್ಬಕ್ಕೆ ಬಂಗಾಳಿ ಸಿಹಿ ಮಾಡುವ ಪ್ರಿಯಾಂಕ

ನಟಿ ಪ್ರಿಯಾಂಕಾ ಉಪೇಂದ್ರ ದಸರಾ ಹಬ್ಬದ ಅಡುಗೆ ತಯಾರಿ ಬಗ್ಗೆ ಲವಲವಿಕೆಯೊಂದಿಗೆ ...

Vijaya Karnataka 13 Oct 2018, 5:00 am
ನಟಿ ಪ್ರಿಯಾಂಕಾ ಉಪೇಂದ್ರ ದಸರಾ ಹಬ್ಬದ ಅಡುಗೆ ತಯಾರಿ ಬಗ್ಗೆ ಲವಲವಿಕೆಯೊಂದಿಗೆ ಮಾತನಾಡಿದ್ದಾರೆ.
Vijaya Karnataka Web priyanka upendra


ನಂದಿನಿ ಕೆ.ಎಲ್‌

ಭರ್ಜರಿ ಹಬ್ಬದಡುಗೆ

ನವರಾತ್ರಿಯ ಒಂಬತ್ತು ದಿನವೂ ನಾವು ಉಪವಾಸ ಮಾಡುವುದರಿಂದ ಕೊನೆಯ ದಿನ ನಾನು ನಮ್ಮ ಊರ ಶೈಲಿಯ ಅಡುಗೆ ಮಾಡುತ್ತೇನೆ. ದೇವಿಗೆ ನೈವೇದ್ಯ ಮಾಡಿ ಕಿಚುಡಿ, ಸಿಹಿ ಪೊಂಗಲ್‌, ಖಾರ ಪೊಂಗಲ್‌, ತೊಂಡೆಕಾಯಿ, ಆಲೂಗೆಡ್ಡೆ ಫ್ರೈ, ಗುಲಾಬ್‌ ಜಾಮೂನು, ಚಂಪಾಕಲಿ ತಯಾರಿಸುತ್ತೇನೆ. ಜೊತೆಗೆ ಅನ್ನ, ರಸಂ, ಚಪಾತಿ ಮಾಡಿ ಆ ದಿನ ಮನೆಗೆ ಸ್ನೇಹಿತರನ್ನು ಕರೆದು ಊಟ ಬಡಿಸುತ್ತೇನೆ.

ಉಪ್ಪಿಗಾಗಿ ಅಡುಗೆ ಕಲಿತೆ

ನಾನು ನನ್ನ ಪತಿ ಉಪೇಂದ್ರರಿಗಾಗಿ ಅಡುಗೆ ಮಾಡುವುದನ್ನು ಕಲಿತೆ. ಅವರಿಗೆ ಸೌತ್‌ ಇಂಡಿಯನ್‌ ಆಹಾರಗಳಾದ ರೈಸ್‌, ಚಿತ್ರಾನ್ನ, ಕ್ಯಾಪ್ಸಿಕಮ್‌ ಪುಲಾವ್‌, ವೆಜಿಟೇಬಲ್‌ ಪುಲಾವ್‌, ಟೊಮೋಟೊ ಪುಲಾವ್‌, ಚಿತ್ರಾನ್ನ, ಪುಳಿಯೋಗರೆ ಇತ್ಯಾದಿಗಳು ತುಂಬಾ ಇಷ್ಟ. ನಮ್ಮ ಮನೆಯಲ್ಲಿ ಅವರಿಗಿಷ್ಟವಾಗುವ ಆಹಾರ ಪ್ರತಿದಿನವೂ ಇರುತ್ತದೆ. ಅದನ್ನೇ ಎಲ್ಲರೂ ಸೇವಿಸುತ್ತೇವೆ.

ಲೋಕಲ್‌ ಫುಡ್‌ ಇಷ್ಟ

ನಾನು ಎಲ್ಲೇ ಹೋದರೂ ಅಲ್ಲಿಯ ಸ್ಥಳೀಯ ಆಹಾರವನ್ನು ತಪ್ಪದೇ ಟೇಸ್ಟ್‌ ಮಾಡುತ್ತೇನೆ. ಸೌತ್‌ ಇಂಡಿಯನ್‌, ಮೆಕ್ಸಿಕನ್‌, ಥಾಯ್‌ ಆಹಾರಗಳು ನನಗೆ ಅಚ್ಚುಮೆಚ್ಚು. ಶುಚಿ, ರುಚಿ ಮತ್ತು ಹೆಲ್ದಿ ಆಹಾರಗಳಿಗೆ ಆದ್ಯತೆ ನೀಡುತ್ತೇವೆ.

ನೋ ಡಯಟ್‌

ನಾನು ಯಾವತ್ತೂ ಡಯಟ್‌ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮನೆ ಊಟಕ್ಕೆ ಮೊದಲ ಆದ್ಯತೆ ಕೊಡುತ್ತೇನೆ. ಫ್ರೂಟ್ಸ್‌, ಹಸಿರು ತರಕಾರಿ, ಹಣ್ಣಿನ ಜ್ಯೂಸ್‌, ಮೊಳಕೆ ಕಾಳುಗಳನ್ನು ಪ್ರತಿದಿನ ಸೇವಿಸುತ್ತೇನೆ. ಸಿಂಪಲ್‌ ಊಟ ನನಗಿಷ್ಟ. ಖಾರ ರುಚಿ ಅಷ್ಟೊಂದು ಇಷ್ಟವಾಗುವುದಿಲ್ಲ.

ಅಡುಗೆ ಅವಾಂತರ

ನನಗೆ ಬೇಕಿಂಗ್‌ ಫುಡ್‌ ಮಾಡುವುದೆಂದರೆ ತುಂಬಾ ಇಷ್ಟ. ಒಮ್ಮೆ ಮೊದಲ ಬಾರಿಗೆ ಕೇಕ್‌ ಮಾಡಲು ಹೋದಾಗ ಅದು ಶೇಪ್‌ಲೆಸ್‌ ಆಗಿ ಓವನ್‌ನಿಂದ ಹಾಗೆಯೇ ಹೊರಗೆ ಬಂದಿತ್ತು. ಈಗ ನಾನು ಕೇಕ್‌ ತಯಾರಿಸುವುದರಲ್ಲಿ ಎಕ್ಸ್‌ಪರ್ಟ್‌ ಆಗಿದ್ದೇನೆ.

ಜೀವನದ ಭಾಗ ಆಹಾರ

ಆಹಾರ ನಮ್ಮ ಜೀವನದ ಒಂದು ಭಾಗ. ನಾವು ಪ್ರತಿದಿನ ಏನನ್ನು ಸೇವಿಸುತ್ತೇವೋ ಅದೇ ರೀತಿ ನಮ್ಮ ಮನಸ್ಸು ಇರುತ್ತದೆ. ಹೆಲ್ದಿ ಹಾಗೂ ಟೇಸ್ಟಿ ಫುಡ್‌ ಸೇವಿಸಿದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ನವರಾತ್ರಿ ಹಬ್ಬದಲ್ಲಿ ಉಪವಾಸಕ್ಕೂ ಆದ್ಯತೆ ಇದೆ. ಎಲ್ಲರೂ ಸಂಕೋಚವಿಲ್ಲದೆ ವ್ರತ ಮಾಡಿ ಹಬ್ಬದೂಟ ಸವಿಯಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ