ಆ್ಯಪ್ನಗರ

ಸಿಲೆಬ್ರಿಟಿ ಟೇಸ್ಟ್‌: ಫಿಶ್‌ ಫ್ರೈ ಪ್ರಿಯೆ ಸಮೀಕ್ಷಾ

ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯ ಶನಾಯ ಪಾತ್ರಧಾರಿ ಸಮೀಕ್ಷಾ ಶಿವಮೊಗ್ಗ ಮೂಲದ ನಟಿ...

Vijaya Karnataka 14 Jul 2018, 5:00 am
ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯ ಶನಾಯ ಪಾತ್ರಧಾರಿ ಸಮೀಕ್ಷಾ ಶಿವಮೊಗ್ಗ ಮೂಲದ ನಟಿ. ಅವರ ಆಹಾರಾಭಿರುಚಿ ಹೀಗಿದೆ.
Vijaya Karnataka Web SAMIKSHA 1


ನಂದಿನಿ ಕೆ.ಎಲ್‌

ನಾನ್‌ವೆಜ್‌ ಇಷ್ಟ

ನಾನು ಬೆಸಿಕಲಿ ಮಲೆನಾಡು ಪ್ರದೇಶದವಳಾದ ಕಾರಣ ನನಗೆ ನಾನ್‌ವೆಜ್‌ ಅಚ್ಚುಮೆಚ್ಚು. ಅದರಲ್ಲೂ ಸೀ ಫುಡ್‌, ರವಾ ಫಿಶ್‌ ಫ್ರೈ, ಫಿಶ್‌ ಕರ್ರಿ, ಫಿಶ್‌ ಕಬಾಬ್‌ ಇತ್ಯಾದಿಗಳು ನನ್ನ ಆಲ್‌ಟೈಮ್‌ ಫೇವರಿಟ್‌. ವೆಜ್‌ನಲ್ಲಿ ಅನ್ನ ಸಾಂಬಾರು, ಚಿತ್ರಾನ್ನ, ಪುಳಿಯೋಗರೆ ಇಷ್ಟ.

ಮನೆಯೂಟಕ್ಕೆ ಆದ್ಯತೆ

ನಾನು ಎಷ್ಟೇ ಬಿಝಿ ಇದ್ದರೂ ಮನೆಯಲ್ಲಿಯೇ ಅಡುಗೆ ಮಾಡಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ನನ್ನಪ್ಪ ಅಡುಗೆ ಮಾಡುವುದರಲ್ಲಿ ಎಕ್ಸ್‌ಪರ್ಟ್‌. ನನ್ನ ಟೇಸ್ಟಿಗೆ ತಕ್ಕಂತೆ ಅಡುಗೆ ಮಾಡಿ ಕೊಡುತ್ತಾರೆ. ಶೂಟಿಂಗ್‌ಗೆ ಹೋದರೂ ಸುಬ್ಬಲಕ್ಷ್ಮಿ ಮನೆಯವರಿಂದಲೇ ನನಗೆ ಊಟ ಬರುತ್ತದೆ. ಪ್ರತಿದಿನ ನಾನು ಅನ್ನ ಸಾಂಬಾರ್‌ ಪ್ರಿಫರ್‌ ಮಾಡುತ್ತೇನೆ.

ಅಡುಗೆಯಲ್ಲಿ ಎಲ್‌ ಬೋರ್ಡ್‌

ನಾನು ಅಡುಗೆ ಮಾಡುವುದರಲ್ಲಿ ಎಕ್ಸ್‌ಪರ್ಟ್‌ ಅಲ್ಲ. ಈಗ ಕೆಲಸದ ನಿಮಿತ್ತ ಮನೆಯಿಂದ ದೂರವಿರುವುದರಿಂ¨ ನನಗೆ ಎಷ್ಟು ಬೇಕೋ ಅಷ್ಟು ಮಾತ್ರ ಕಲಿತಿದ್ದೇನೆ. ಅನ್ನ, ತಿಳಿ ಸಾಂಬಾರು, ಟೊಮೋಟೊ ಚಟ್ನಿ, ರಸಂ, ತರಕಾರಿ ಪಲ್ಯ ಮಾಡಲು ಕಲಿಯುತ್ತಿದ್ದೇನೆ. ಅಪ್ಪನ ಜತೆ ಆಗಾಗ ಬಿರಿಯಾನಿ, ಫಿಶ್‌ ಫ್ರೈ ಮಾಡಲು ಸಾಥ್‌ ನೀಡುತ್ತೇನೆ.

ನೋ ಡಯಟ್‌

ನಾನು ಊಟ ಬಿಟ್ಟು ಯಾವತ್ತೂ ಡಯಟ್‌ ಎಂದು ತಲೆಕೆಡಿಸಿಕೊಂಡಿಲ್ಲ. ಹದಿನೈದು ದಿನಕ್ಕೊಮ್ಮೆ ಮಿತವಾಗಿ ಜಂಕ್‌ ಫುಡ್‌ ಸೇವಿಸುತ್ತೇನೆ. ಹಸಿರು ತರಕಾರಿ, ಹಣ್ಣು ಮುಂತಾದ ಹೆಲ್ದಿ ಫುಡ್‌ಗಳನ್ನು ಹೆಚ್ಚು ತಿನ್ನುತ್ತೇನೆ. ರಸಗುಲ್ಲಾ ನನ್ನ ಫೇವರಿಟ್‌ ಸ್ವೀಟ್‌.

ಆಹಾರವೇ ಆರೋಗ್ಯ

ನಮ್ಮ ದೇಹಕ್ಕೆ ಬೇಕಾದ ಶಕ್ತಿ, ಆರೋಗ್ಯ, ಲವಲವಿಕೆ ಆಹಾರದಿಂದಲೇ ಸಿಗುತ್ತವೆ. ಆದ್ದರಿಂದ ನಾವು ಯಾವಾಗಲೂ ಮನೆ ಊಟಕ್ಕೆ ಮೊದಲ ಆದ್ಯತೆ ನೀಡಬೇಕು. ಶುಚಿ ರುಚಿಯಾಗಿರುವ ಅದು ದೇಹಕ್ಕೆ ತುಂಬಾ ಉತ್ತಮ. ನಾವು ದೇಸಿ ಶೈಲಿಯ ಆಹಾರಾಭ್ಯಾಸ ಮೈಗೂಡಿಸಿಕೊಳ್ಳಬೇಕು.
ಒಮ್ಮೆ ನಾನು ಖಾಸಗಿ ವಾಹಿನಿಯ ಅಡುಗೆ ಕಾರ್ಯಕ್ರಮದಲ್ಲಿ ಫಿಶ್‌ ಫ್ರೈ ರೆಸಿಪಿ ಹೇಳಿಕೊಡುತ್ತಿದ್ದೆ. ಅದಕ್ಕೆ ಆಕಸ್ಮಿಕವಾಗಿ ಮೂರು ಬಾರಿ ಉಪ್ಪು ಹಾಕಿದ್ದೆ. ಅದನ್ನು ಟೇಸ್ಟ್‌ ಮಾಡಿದಾಗಲೇ ನಾನು ಮಾಡಿದ ಅವಾಂತರ ಗೊತ್ತಾಗಿದ್ದು. ಆದರೂ ಅದನ್ನು ಚೆನ್ನಾಗಿದೆ ಎಂದು ಹೊಗಳಿದ್ದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ