ಆ್ಯಪ್ನಗರ

ಸಿಲೆಬ್ರಿಟಿ ಟೇಸ್ಟ್‌: ಸಿಹಿ ಪ್ರಿಯೆ ತೇಜಸ್ವಿನಿ

ಗುಡ್ಡದ ಭೂತ ಕನ್ನಡ ಸಿನಿಮಾದ ನಾಯಕಿ ಕೊಡಗಿನ ಕುವರಿ ತೇಜಸ್ವಿನಿ ಶರ್ಮ ಅವರ ಆಹಾರ ಅಭಿರುಚಿ ಹೀಗಿದೆ...

Vijaya Karnataka 16 Feb 2019, 5:00 am
ಗುಡ್ಡದ ಭೂತ ಕನ್ನಡ ಸಿನಿಮಾದ ನಾಯಕಿ ಕೊಡಗಿನ ಕುವರಿ ತೇಜಸ್ವಿನಿ ಶರ್ಮ ಅವರ ಆಹಾರ ಅಭಿರುಚಿ ಹೀಗಿದೆ.
Vijaya Karnataka Web tajaswini sharma


ನಂದಿನಿ ಕೆ.ಎಲ್‌

ಸ್ವೀಟ್‌ ಅಂದ್ರೆ ಪಂಚಪ್ರಾಣ

ಪ್ರತಿದಿನ ಊಟ ಮಾಡುವಾಗ ನನಗೆ ಏನಾದರೊಂದು ಸಿಹಿ ತಿನಿಸು ಇರಲೇಬೇಕು. ಚಂಪಾಕಲಿ, ಗುಲಾಬ್‌ ಜಾಮೂನ್‌, ಪಾಯಸ, ಜಿಲೇಬಿ ಮುಂತಾದ ಸ್ವೀಟ್‌ಗಳು ನನಗೆ ತುಂಬಾ ಇಷ್ಟ. ಸಿಹಿ ತಿನಿಸು ಮಾತ್ರವಲ್ಲದೆ, ಚಿಕನ್‌ ಬಿರಿಯಾನಿ, ಚಿತ್ರಾನ್ನ, ಕಬಾಬ್‌, ಕಡುಬು, ಅಕ್ಕಿ ರೊಟ್ಟಿ ಮುಂತಾದ ಖಾದ್ಯಗಳೂ ನನ್ನ ಫೇವರಿಟ್‌.

ಅಡುಗೆ ಗೊತ್ತಿದೆ

ನಾನು ಕುಕ್ಕಿಂಗ್‌ ಎಕ್ಸ್‌ಪರ್ಟ್‌ ಅಲ್ಲದಿದ್ದರೂ ಬಿಡುವಿದ್ದಾಗ ಉಪ್ಪಿಟ್ಟು, ರಸಂ, ಆಮ್ಲೆಟ್‌, ಪುಲಾವ್‌, ಚಿಕನ್‌ ಬಿರಿಯಾನಿ ಮಾಡುತ್ತೇನೆ. ನನ್ನಮ್ಮ ಅಡುಗೆ ಮಾಡುವುದನ್ನು ನೋಡಿ ಮತ್ತು ಕೆಲವೊಂದನ್ನು ಯೂಟ್ಯೂಬ್‌ನಲ್ಲಿ ನೋಡಿ ಕಲಿಯುತ್ತಾ ಇದ್ದೇನೆ.

ಕೊಡಗಿನ ರುಚಿ

ಮೂಲತಃ ನಾನು ಮಡಿಕೇರಿಯವಳಾಗಿದ್ದರಿಂದ ಕೂರ್ಗ್‌ ಶೈಲಿಯ ಅಡುಗೆ ಇಷ್ಟವಾಗುತ್ತದೆ. ನಮ್ಮ ಮನೆಗೆ ಹೋದಾಗಲೆಲ್ಲಾ ಕಡುಬು, ಚಿಕನ್‌ ಫ್ರೈ, ಅಕ್ಕಿ ರೊಟ್ಟಿ ಮತ್ತು ನಮ್ಮೂರಿನ ವಿಶೇಷ ಸಿಹಿ ತಿನಿಸುಗಳನ್ನು ಮಾಡಿಸಿಕೊಂಡು ತಿಂದು ಬರುತ್ತೇನೆ. ನನಗೆ ಕೂರ್ಗ್‌ ಶೈಲಿಯ ಅಕ್ಕಿ ರೊಟ್ಟಿ, ಮಟನ್‌ ಸಾರು, ಕರ್ರಿ, ಬಿರಿಯಾನಿ, ಕೈಮಾಗಳನ್ನು ಯಾವಾಗಲೂ ತಿನ್ನಬೇಕನಿಸುತ್ತದೆ.

ಲೋಕಲ್‌ ಫ್ಲೇವರ್‌

ಆಯಾ ಪ್ರದೇಶಗಳ ಸ್ಥಳೀಯ ರುಚಿ ನನಗೆ ಇಷ್ಟವಾಗುತ್ತದೆ. ನಾನೆಲ್ಲಿ ಹೋದರೂ ಆ ಸ್ಥಳದಲ್ಲಿ ಸಿಗುವ ವಿಶೇಷ ಖಾದ್ಯಗಳ ರುಚಿ ನೋಡದೆ ಬರುವುದಿಲ್ಲ. ನನಗೆ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಸಿಗುವ ಆಹಾರಕ್ಕಿಂತ ಸ್ಥಳೀಯ ಮತ್ತು ನಾಟಿ ಶೈಲಿಯ ಆಹಾರ ಬಹಳ ಇಷ್ಟವಾಗುತ್ತದೆ.

ಮನೆಯೂಟಕ್ಕೆ ಆದ್ಯತೆ

ಹೊರಗಡೆ ತಿನ್ನುವುದಕ್ಕಿಂತ ನಾನು ಮನೆಯೂಟಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಆಗಾಗ ವಿ. ವಿ ಪುರಂನಲ್ಲಿರುವ ಫುಡ್‌ ಸ್ಟ್ರೀಟ್‌ಗೆ ಹೋಗಿ ಪುಲಾವ್‌ ತಿಂದು ಬರುತ್ತೇನೆ. ಮಡಿಕೇರಿಯಲ್ಲಿ ನಮ್ಮೂರ ಶೈಲಿಯಲ್ಲಿ ಮಾಡುವ ಕಾಫಿ ಸೆಂಟರ್‌, ಸ್ವೀಟ್ಸ್‌ ಸೆಂಟರ್‌ಗೆ ಕುಟುಂಬದವರೊಂದಿಗೆ ಹೋಗುತ್ತೇನೆ.

ಸೀಮಿತ ಡಯಟ್‌

ಚಿಕ್ಕಂದಿನಿಂದಲೂ ನನಗೆ ಜಂಕ್‌ಫುಡ್‌ ತಿಂದು ಅಭ್ಯಾಸವಿಲ್ಲ. ಇತ್ತೀಚೆಗೆ ಸೀಮಿತ ಡಯಟ್‌ ಆರಂಭಿಸಿದ್ದೇನೆ. ಫ್ರೂಟ್ಸ್‌, ಹಸಿರು ತರಕಾರಿ, ಮೊಳಕೆ ಕಾಳುಗಳನ್ನು ತಿನ್ನುತ್ತೇನೆ.


ವೈವಿಧ್ಯಮಯ ಆಹಾರ ಸೇವಿಸಿದಾಗ ಮನಸ್ಸಿಗೆ ಖುಷಿ ಸಿಗುತ್ತದೆ. ನಾವು ಭೇಟಿ ನೀಡುವ ಪ್ರದೇಶಗಳ ಸ್ಥಳೀಯ ಆಹಾರ ಸೇವಿಸಿದಾಗ ನಮ್ಮ ಆಹಾರ ಸಂಸ್ಕೃತಿಯ ಪರಿಚಯವೂ ಆಗುತ್ತದೆ.
ತೇಜಸ್ವಿನಿ ಶರ್ಮ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ