ಆ್ಯಪ್ನಗರ

ಸ್ಮೋಕಿಂಗ್‌ಗಿಂತಲೂ ಅಪೌಷ್ಟಿಕ ಆಹಾರ ಅಪಾಯಕಾರಿ

ಹೊಸ ಸಮೀಕ್ಷೆಯೊಂದು ಪ್ರತಿವರ್ಷ ಧೂಮಪಾನಕ್ಕಿಂತ ಅಪೌಷ್ಟಿಕ ಆಹಾರ ಸೇವನೆಯಿಂದ ಜನರು ಮರಣ ...

Vijaya Karnataka 13 Apr 2019, 5:00 am
ಹೊಸ ಸಮೀಕ್ಷೆಯೊಂದು ಪ್ರತಿವರ್ಷ ಧೂಮಪಾನಕ್ಕಿಂತ ಕೆಟ್ಟ ಆಹಾರ ಸೇವನೆಯಿಂದ ಜನರು ಮರಣ ಹೊಂದುತ್ತಿರುವ ಪ್ರಮಾಣ ಹೆಚ್ಚುತ್ತಿದೆ ಎಂದು ಹೇಳಿದೆ.
Vijaya Karnataka Web bad food dangerous than smoking
ಸ್ಮೋಕಿಂಗ್‌ಗಿಂತಲೂ ಅಪೌಷ್ಟಿಕ ಆಹಾರ ಅಪಾಯಕಾರಿ


ಲವಲವಿಕೆ ಸುದ್ದಿಲೋಕ

ಧೂಮಪಾನವೇ ಅಪಾಯಕಾರಿ. ಇದರಿಂದ ಮಾರಣಾಂತಿಕ ಕಾಯಿಲೆಗಳು ತಪ್ಪಿದ್ದಲ್ಲ ಎಂದು ಎಲ್ಲರೂ ಭಾವಿಸುತ್ತಿರುವಾಗಲೇ ಹೊಸ ಸಮೀಕ್ಷೆಯೊಂದು ಧೂಮಪಾನಕ್ಕಿಂತಲೂ ಕೆಟ್ಟ ಆಹಾರ ಸೇವನೆ ಇನ್ನೂ ಅಪಾಯಕಾರಿ ಎಂದು ಪ್ರತಿಪಾದಿಸಿದೆ. ಅಮೆರಿಕದ ಹೆಲ್ತ್‌ ಮೆಟ್ರಿಕ್ಸ್‌ ಆ್ಯಂಡ್‌ ಇವಾಲ್ಯೂಷನ್‌ ಸಂಸ್ಥೆ ನಡೆಸಿರುವ ಈ ಸಮೀಕ್ಷೆಯಲ್ಲಿ ಅನಾರೋಗ್ಯಕರ ಆಹಾರ ಸೇವನೆಯಿಂದ ಪ್ರತಿವರ್ಷ ಜಗತ್ತಿನಾದ್ಯಂತ 11 ದಶಲಕ್ಷ ಜನರು ಸಾವನ್ನಪ್ಪುತ್ತಿದ್ದು, ಈ ಪ್ರಮಾಣ ಪ್ರತಿವರ್ಷ ಧೂಮಪಾನದಿಂದ ಮೃತಪಡುವವರ ಸಂಖ್ಯೆಗಿಂತಲೂ ಹೆಚ್ಚಿದೆ ಎಂದು ಅದು ಹೇಳಿದೆ.

ಜಂಕ್‌ ಫುಡ್‌ ಸೇವನೆಯಿಂದ ಮಾತ್ರವಲ್ಲದೆ, ನಾವು ಬಹುತೇಕ ಮರೆತೇ ಹೋಗಿರುವ ಪೌಷ್ಟಿಕ ಆಹಾರಗಳನ್ನು ಸೇವಿಸದ ಕಾರಣದಿಂದಲೂ ಜನರು ಅನಾರೋಗ್ಯಕ್ಕೆ ಈಡಾಗಿ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಪ್ರತಿ ದೇಶಗಳು ತರಕಾರಿ, ಹಣ್ಣು, ಬೀಜ ಮತ್ತು ಧಾನ್ಯಗಳ ಸೇವನೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಪ್ರತಿದಿನದ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಜನರು ಹೃದಯಾಘಾತ ಮತ್ತು ಸ್ಟ್ರೋಕ್‌ಗೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಕ್ಯಾನ್ಸರ್‌ ಮತ್ತು ಟೈಪ್‌ 2 ಮಧುಮೇಹವೂ ಕಾಣಿಸಿಕೊಳ್ಳುತ್ತದೆ ಎಂದು ಈ ಸಮೀಕ್ಷೆಯ ವರದಿಯಲ್ಲಿದೆ. 195 ದೇಶಗಳಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಉತ್ತರ ಆಹಾರ ಸೇವನೆಯಿಂದ ಜಗತ್ತಿನಾದ್ಯಂತ ಐದು ಮರಣಗಳ ಪೈಕಿ ಒಂದನ್ನು ತಡೆಯಬಹುದು ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಪೌಷ್ಟಿಕ ಆಹಾರಗಳ ಕನಿಷ್ಠ ಅಗತ್ಯ ದೇಶದಿಂದ ದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ. ಆದರೂ ಎಲ್ಲಾ ದೇಶಗಳಲ್ಲಿರುವ ಕೆಲವು ಸಾಮ್ಯತೆಗಳೆಂದರೆ ಎಲ್ಲರೂ ಯಥೇಚ್ಛ ಹಣ್ಣು, ತರಕಾರಿ ಮತ್ತು ಉಪ್ಪಿನಲ್ಲಿರುವ ಸೋಡಿಯಂ ಸೇವಿಸುವ ಅಗತ್ಯ ಹೆಚ್ಚಿದೆ ಎಂದು ಹೇಳಿರುವ ಈ ಸಮೀಕ್ಷೆಯು, ಆಹಾರದಲ್ಲಿ ಕೇವಲ ಸಕ್ಕರೆ, ಉಪ್ಪು, ಕೊಬ್ಬಿನ ಪ್ರಮಾಣ ಕಡಿಮೆಗೊಳಿಸುವುದಕ್ಕಿಂತ ಪರ್ಯಾಯ ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸುವುದು ಉತ್ತಮ ಎಂದು ಹೇಳಿದೆ.

ಈ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, 2017ರಲ್ಲಿ ಅಪೌಷ್ಟಿಕ ಆಹಾರ ಸೇವನೆಯಿಂದ 10.9 ದಶಲಕ್ಷ ಜನರು ಸಾವನ್ನಪ್ಪಿದ್ದರೆ, ಧೂಮಪಾನದಿಂದ 8 ದಶಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ