ಆ್ಯಪ್ನಗರ

ಬಾದುಷಾ ಮಾಡುವುದು ಹೇಗೆ?

ಮೈದಾ ನೂರೈವತ್ತು ಗ್ರಾಂ, ವನಸ್ಪತಿ ಎಪ್ಪತ್ತೈದು ಗ್ರಾಂ, ಅಡುಗೆ ಸೋಡಾ ಚಿಟಿಕೆ, ಸಕ್ಕರೆ ಮುಕ್ಕಾಲು ಕಪ್‌, ನೀರು ಅರ್ಧ ಕಪ್‌, ಬಾದಾಮಿ ಮತ್ತು ಪಿಸ್ತಾ ಚೂರು ಸ್ವಲ್ಪ.

Vijaya Karnataka Web 26 Nov 2017, 10:58 am
ಮೈದಾ ನೂರೈವತ್ತು ಗ್ರಾಂ, ವನಸ್ಪತಿ ಎಪ್ಪತ್ತೈದು ಗ್ರಾಂ, ಅಡುಗೆ ಸೋಡಾ ಚಿಟಿಕೆ, ಸಕ್ಕರೆ ಮುಕ್ಕಾಲು ಕಪ್‌, ನೀರು ಅರ್ಧ ಕಪ್‌, ಬಾದಾಮಿ ಮತ್ತು ಪಿಸ್ತಾ ಚೂರು ಸ್ವಲ್ಪ. ಎಣ್ಣೆ ಅಥವಾ ವನಸ್ಫತಿ ಕರಿಯಲು. ಒಂದು ಸಮತಳದ ತಟ್ಟೆಯಲ್ಲಿ ವನಸ್ಫತಿ ಮತ್ತು ಅಡುಗೆ ಸೋಡಾ ಹಾಕಿ ಅಂಗೈಯಲ್ಲಿ ಹತ್ತರಿಂದ ಹನ್ನೆರಡು ನಿಮಿಷಗಳ ಕಾಲ ನೊರೆ ಬರುವರೆಗೆ ಉಜ್ಜಿ.
Vijaya Karnataka Web badusha sweet recipe in kannada
ಬಾದುಷಾ ಮಾಡುವುದು ಹೇಗೆ?


ಇದು ಪದರದಂತೆ ಬಂದಾಗ ಮೈದಾವನ್ನು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ನೀರನ್ನು ಹಾಕಿ ಮೃದುವಾದ ಹಿಟ್ಟಿನಂತೆ ಮಾಡಿ ಕೊಳ್ಳಿ. ಅದನ್ನು ನಾದಿಕೊಳ್ಳ ಬಾರದು. ನಂತರ ಒದ್ದೆ ಬಟ್ಟೆಯಿಂದ ಐದು ನಿಮಿಷಗಳ ಕಾಲ ಮುಚ್ಚಿಡಿ. ನಂತರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಎಲ್ಲಾ ಉಂಡೆಗಳನ್ನು ಚಪ್ಪಟೆಯಾಗಿ ತಟ್ಟಿಕೊಳ್ಳಿ. ಅದರ ನಡುವೆ ಒಂದು ತೂತು ಮಾಡಿ. ಎಲ್ಲಾ ಉಂಡೆಗಳನ್ನು ಹಾಗೆ ಮಾಡಿದ ನಂತರ ಮುಚ್ಚಿಡಿ.

ಬಾಣಲೆಯಲ್ಲಿ ವನಸ್ಪತಿಯನ್ನು ಬಿಸಿ ಮಾಡಿ. ಸಣ್ಣ ಉರಿಯಲ್ಲಿ ಬಾದುಷಾಗಳನ್ನು ಕೆಂಬಣ್ಣ ಬರುವರೆಗೆ ಕರಿಯಿರಿ. ಎರಡು ಕಡೆ ಕೆಂಬಣ್ಣ ಬಂದಾಗ ಎಣ್ಣೆಯಿಂದ ತೆಗೆದು ತಟ್ಟೆಯಲ್ಲಿ ಜೊಡಿಸಿ. ಇನ್ನೊಂದು ಬಾಣಲೆಯಲ್ಲಿ ಸಕ್ಕರೆಯನ್ನು ಹಾಕಿ, ನೀರನ್ನು ಹಾಕಿ ಒಂದೆಳೆ ಪಾಕ ತಯಾರಿಸಿ. ಒಲೆಯಿಂದ ಇಳಿಸಿ. ಪಾಕ ತಣ್ಣಗಾದ ನಂತರ ಬಾದುಷಾವನ್ನು ಅದರಲ್ಲಿ ಮುಳುಗಿಸಿ. ಪಾಕ ಎರಡು ಕಡೆ ಚೆನ್ನಾಗಿ ಹೀರಿಕೊಂಡ ನಂತರ ಒಂದು ತಟ್ಟೆಯಲ್ಲಿ ಜೋಡಿಸಿ ಪಿಸ್ತಾ ಮತ್ತು ಬಾದಾಮಿ ಚೂರುಗಳನ್ನು ಹಾಕಿ ಅಲಂಕರಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ