ಆ್ಯಪ್ನಗರ

ಅಡುಗೆ ಮನೆಯಲ್ಲಿರಲಿ ನಿಂಬೆ ಹಣ್ಣು

ವಿಟಮಿನ್‌ ಸಿ ಯ ಆಗರವಾಗಿರುವ ನಿಂಬೆ ಹಣ್ಣನ್ನು ವಿವಿಧ ರೀತಿಯ ಖಾದ್ಯಗಳಿಗೆ, ...

Vijaya Karnataka 23 Sep 2017, 12:30 pm

ಲವಲವಿಕೆ ಸುದ್ದಿಲೋಕ

ವಿಟಮಿನ್‌ ಸಿ ಯ ಆಗರವಾಗಿರುವ ನಿಂಬೆ ಹಣ್ಣನ್ನು ವಿವಿಧ ರೀತಿಯ ಖಾದ್ಯಗಳಿಗೆ, ಜ್ಯೂಸ್‌ಗಳಿಗೆ ಬಳಸಲಾಗುತ್ತದೆ. ನಿಂಬೆ ಹಣ್ಣನಿಂದ ಇನ್ನಿತರ ಕೆಲವು ಪ್ರಯೋಜನಗಳೂ ಇವೆ. ಇದರಿಂದ ಅಡುಗೆ ಮನೆಯ ಕೆಲವು ಕೆಲಸಗಳು ಸುಲಭವಾಗುತ್ತವೆ.

-ಮೈಕ್ರೊವೇವ್‌ಗಳನ್ನು ಸ್ವಚ್ಛಗೊಳಿಸಲು ನಿಂಬೆ ಹಣ್ಣು ಬೆಸ್ಟ್‌. ಒಂದೂವರೆ ಕಪ್‌ ನೀರಿಗೆ ಮೂರು ಟೇಬಲ್‌ ಸ್ಪೂನ್‌ ನಿಂಬೆ ರಸ ಹಾಕಿ. ಇದನ್ನು ಹತ್ತು ನಿಮಿಷಗಳ ಕಾಲ ಮೈಕ್ರೊವೇವ್‌ನಲ್ಲಿಟ್ಟು ಬಿಸಿ ಮಾಡಿ. ಇದರಿಂದ ಮೈಕ್ರೊವೇವ್‌ನ ಅಂಚುಗಳಿಗೆ ಅಂಟಿಕೊಂಡಿರುವ ಜಿಡ್ಡುಗಳೆಲ್ಲಾ ಕರಗುತ್ತದೆ. ಬಳಿಕ ಅದನ್ನು ನೀವು ಟವೆಲ್‌ನಿಂದ ಒರೆಸಿ ಸ್ವಚ್ಛಗೊಳಿಸಬಹುದು.

-ಅನ್ನ ಉದುರು ಆಗಬೇಕಾದರೆ ಅಕ್ಕಿ ಬೇಯುವಾಗ ಕೆಲವು ಹನಿ ನಿಂಬೆ ರಹ ಹಾಕಿ. ಇದರಿಂದ ಅನ್ನದ ಅಗುಳುಗಳು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಅಕ್ಕಿ ಬೇಯುವಾಗ ಒಂದು ಟೇಬಲ್‌ ಸ್ಪೂನ್‌ ನಿಂಬೆ ರಸ ಹಾಕಿದರೆ ಅನ್ನಕ್ಕೆ ತಾಜಾ ಪರಿಮಳವೂ ಸಿಗುತ್ತದೆ.

-ಹಣ್ಣು, ತರಕಾರಿಗಳನ್ನು ಕತ್ತರಿಸುವ ಕಟ್ಟಿಂಗ್‌ ಬೋರ್ಡ್‌ ಅನ್ನು ನಿಂಬೆ ರಸ ಹಾಕಿ ತೊಳೆದರೆ ಅದರಲ್ಲಿರುವ ಸೂಕ್ಷ್ಮಾಣು ಜೀವಿಗಳೆಲ್ಲಾ ಸಾಯುತ್ತವೆ. ಕಲೆಯಾಗಿರುವ ಬೋರ್ಡ್‌ಗೆ ನಿಂಬೆ ಹಣ್ಣನ್ನು ಹಿಂಡಿ ಚೆನ್ನಾಗಿ ಉಜ್ಜಿ ಹತ್ತು ನಿಮಿಷಗಳ ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದರಿಂದ ಬೋರ್ಡ್‌ನಲ್ಲಿರುವ ಕಲೆ ಮತ್ತು ಕೊಳೆಗಳೆಲ್ಲಾ ಹೋಗುತ್ತವೆ.

-ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹೆಚ್ಚಿದ ಮೇಲೆ ನಿಮ್ಮ ಕೈ ಕಮಟು ವಾಸನೆ ಬೀರುತ್ತದೆ. ಇದರ ನಿವಾರಣೆಗೆ ನಿಂಬೆ ರಸ ಬೆರೆಸಿದ ನೀರಿನಲ್ಲಿ ಕೈಗಳನ್ನು ಚೆನ್ನಾಗಿ ತೊಳೆದರೆ ವಾಸನೆ ಹೋಗುತ್ತದೆ.

-ಫ್ರಿಜ್‌ನ ದುರ್ಗಂಧ ನಿವಾರಣೆಗೂ ನಿಂಬೆ ರಸ ಬೆಸ್ಟ್‌. ನಿಂಬೆ ರಸದಲ್ಲಿ ಅದ್ದಿದ ಹತ್ತಿಯ ಉಂಡೆಗಳನ್ನು ಫ್ರಿಜ್‌ನೊಳಗೆ ಸ್ವಲ್ಪ ಗಂಟೆಗಳ ಕಾಲ ಇಡಿ. ಇವು ದುರ್ಗಂಧವನ್ನು ತೊಲಗಿಸಿ ತಾಜಾ ಕಂಪನ್ನು ಹೊರ ಸೂಸುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ