ಆ್ಯಪ್ನಗರ

ಬೆಂಗಳೂರಿನಲ್ಲಿ ಬೆಂಗಾಲಿ ಆಹಾರಗಳ ಘಮ

ಪಶ್ಚಿಮ ಬಂಗಾಳದ ಆಹಾರಗಳು ಒಂದಕ್ಕಿಂತ ಒಂದು ರುಚಿಯಾಗಿರುತ್ತವೆ. ಬೆಂಗಳೂರಿಗರಿಗೂ ಬಂಗಾಳಿ ಖಾದ್ಯವೆಂದರೆ ಅಚ್ಚುಮೆಚ್ಚು. ಬೆಂಗಾಲಿ ಆಹಾರ ಪ್ರಿಯ ಬೆಂಗಳೂರಿಗರ ನಾಲಿಗೆ ರುಚಿ ತಣಿಸಲು ನಗರದ ಎಂ.ಜಿ ರೋಡ್‌ನಲ್ಲಿರುವ ಹ್ಯಾಟ್ ಬೆಂಗಳೂರು ಹೋಟೆಲ್ ಸಜ್ಜುಗೊಂಡಿದೆ.

Vijaya Karnataka Web 14 May 2016, 4:00 am
ಪಶ್ಚಿಮ ಬಂಗಾಳದ ಆಹಾರಗಳು ಒಂದಕ್ಕಿಂತ ಒಂದು ರುಚಿಯಾಗಿರುತ್ತವೆ. ಬೆಂಗಳೂರಿಗರಿಗೂ ಬಂಗಾಳಿ ಖಾದ್ಯವೆಂದರೆ ಅಚ್ಚುಮೆಚ್ಚು. ಬೆಂಗಾಲಿ ಆಹಾರ ಪ್ರಿಯ ಬೆಂಗಳೂರಿಗರ ನಾಲಿಗೆ ರುಚಿ ತಣಿಸಲು ನಗರದ ಎಂ.ಜಿ ರೋಡ್‌ನಲ್ಲಿರುವ ಹ್ಯಾಟ್ ಬೆಂಗಳೂರು ಹೋಟೆಲ್ ಸಜ್ಜುಗೊಂಡಿದೆ. ಇಲ್ಲಿನ ಪಿಂಕ್ ಪೊಪ್ಪಡಮ್ ರೆಸ್ಟೋರೆಂಟ್‌ನಲ್ಲಿ ಈಗಾಗಲೇ ರನ್ನಾಘೊರ್ ಎಂಬ ಹೆಸರಿನ ಬೆಂಗಾಲಿ ಆಹಾರೋತ್ಸವ ಆರಂಭಗೊಂಡಿದ್ದು ಮೇ. 15 ರಂದು ಕೊನೆಗೊಳ್ಳಲಿದೆ. ಇಲ್ಲಿ ನೀವು ಮನೆ ರುಚಿಯ ಸಾಂಪ್ರದಾಯಿಕ ಬೆಂಗಾಲಿ ಖಾದ್ಯಗಳನ್ನು ಸವಿಯಬಹುದು. ಬೆಂಗಾಲಿಯನ್ನರ ಸ್ಪೆಷಲ್ ಸ್ವೀಟ್ಸ್, ಮೀನಿನ ಖಾದ್ಯ ಇತ್ಯಾದಿಗಳು ಇಲ್ಲಿ ತುಂಬಾ ಚೆನ್ನಾಗಿರುತ್ತವೆ. ಸಂಜೆ 7 ರಿಂದ ರಾತ್ರಿ 11.15 ರವರೆಗೆ ನಡೆಯಲಿರುವ ಡಿನ್ನರ್ ಬಫೆಟ್‌ನಲ್ಲಿ ನೀವು ವೈವಿಧ್ಯಮಯ ಬೆಂಗಾಲಿ ಖಾದ್ಯಗಳ ರುಚಿ ನೋಡಬಹುದು.
Vijaya Karnataka Web bengali food in bangalore
ಬೆಂಗಳೂರಿನಲ್ಲಿ ಬೆಂಗಾಲಿ ಆಹಾರಗಳ ಘಮ


ಡಿನ್ನರ್‌ನ ಆರಂಭದಲ್ಲಿ ಆಮ್ ಪೊರ ಶರ್ಬೊತ್, ಘೋಲ್, ಸುಗಂಧಿ ಲೆಬುರ್ ಶರ್ಬೊತ್, ಕೊಚಿ ಡಬೆರ್ ಜಲ್ ಮುಂತಾದ ಪಾನೀಯಗಳು, ಸ್ಟಾರ್ಟರ್‌ನಲ್ಲಿ ಆಲೂ ಝುರಿ ಭಾಜ, ಮೊಚಾರ್ ಚಾಪ್, ಭಾಪ ಆಲೂ, ಚಿಂಗ್ರಿ ಕಬಿರಜಿ, ಫಿಶ್ ಕಬಿರಜಿ, ಡೈಮರ್ ಡೆವಿಲ್ ಚಾಪ್, ಚಿಕನ್ ಕಟ್ಲೆಟ್, ಮೊಧುರ್ ಮುರ್ಗಿ ಇತ್ಯಾದಿಗಳನ್ನು ಟ್ರೈ ಮಾಡಬಹುದು. ಇದೇ ರೀತಿ ಮೇನ್‌ಕೋರ್ಸ್‌ನಲ್ಲಿ ಪೊಟೊಲೆರ್ ಡೊಲ್ಮಾ, ಛನ್ನರ್ ಕಲಿಯಾ, ಡೊಯಿ ಬೇಗನ್, ಆಲೂರ್ ಡೊಮ್ ಎಂಬ ಸಸ್ಯಾಹಾರಿ ಖಾದ್ಯ ಮತ್ತು ಭೆಟ್ಕಿ ಝಲ್, ಡೊಯಿ ಕಟ್ಲ ಮಾಚ್, ರುಯಿ ಮಚ್ಛೆರ್ ಕಲಿಯ, ಐಲಿಶ್ ಭಾಪೆ, ಮುರ್ಗಿರ್ ಆಮ್ ಕಶುಂಡಿ ಎಂಬ ಮಾಂಸಾಹಾರಗಳನ್ನು ಸೇವಿಸಬಹುದು. ಇದೇ ರೀತಿ ಲುಚಿ, ಪರೋಠಾ, ರೂಮಾಲಿ ರೋಟಿ, ಕೊರೈಶುಟಿರ್ ಕಚೋರಿಗಳ ರುಚಿ ನೋಡಬಹುದು.

ಬೆಂಗಾಲಿಯನ್ನರು ಆಹಾರ ಪ್ರಿಯರೂ ಹೌದು. ಆದ್ದರಿಂದ ಈ ಆಹಾರೋತ್ಸವದಲ್ಲಿ ನೀವು ಅಲ್ಲಿನ ಸಾಂಪ್ರದಾಯಿಕ ಸಿಹಿ ತಿಂಡಿಗಳಾದ ಚನಾರ್ ಪಾಯೆಶ್, ನೊಲೆನ್ ಗುರೆರ್ ಐಸ್‌ಕ್ರೀಮ್, ಮಿಶ್ಟಿ ಡೊಯ್, ರೊಸಗುಲ್ಲ, ರಸ್‌ಮಲಾಯಿ, ರಾಜ್‌ಭೋಗ್, ಪಥಿ ಶಪ್ತ, ಆಲೂಟಾ, ಖೀರ್ ಕದಮ್‌ಗಳನ್ನು ಮೆಲ್ಲಬಹುದು. ಈ ಆಹಾರೋತ್ಸವದಲ್ಲಿ ಬೆಂಗಾಲಿ ಥಾಲಿಯೂ ಲಭ್ಯವಿವೆ.




* ನಿರ್ವಹಣೆ: ಬಬಿತಾ ಎಸ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ