ಆ್ಯಪ್ನಗರ

ಸಂಜೆ ಸ್ನ್ಯಾಕ್ಸ್: ಎಗ್‌ ಬೋಂಡಾ ರೆಸಿಪಿ

ಎಗ್‌ ಬೋಂಡಾ ಸರಳವಾಗಿ ಮಾಡಬಹುದಾದ ರೆಸಿಪಿಯಾಗಿದ್ದು, ಇದನ್ನು ಮಾಡುವ ರೆಸಿಪಿ ಇಲ್ಲಿದೆ.

Vijaya Karnataka Web 29 May 2018, 6:09 pm
ಎಗ್‌ ಬೋಂಡಾ ಸರಳವಾಗಿ ಮಾಡಬಹುದಾದ ರೆಸಿಪಿಯಾಗಿದ್ದು, ಇದನ್ನು ಮಾಡುವ ರೆಸಿಪಿ ಇಲ್ಲಿದೆ:
Vijaya Karnataka Web egg bonda


ಬೇಕಾಗುವ ಸಾಮಗ್ರಿ
3 ಬೇಯಿಸಿದ ಮೊಟ್ಟೆ
1 ಕಪ್‌ ಎಣ್ಣೆ
ಅರ್ಧ ಕಪ್‌ ಅಕ್ಕಿ ಹಿಟ್ಟು
ಅರ್ಧ ಚಮಚ ಖಾರದ ಪುಡಿ
1/4 ಚಮಚ ಕಾಳು ಮೆಣಸಿನ ಪುಡಿ
2 ಹಸಿ ಮೆಣಸು
1 ಕಪ್‌ ಕಡಲೆ ಹಿಟ್ಟು
ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ

1. ಮೊಟ್ಟೆಯನ್ನು ಸಮ ಅರ್ಧಭಾಗವಾಗಿ ಕತ್ತರಿಸಿ, ಅದರ ಮೇಲೆ ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ ಹಾಗೂ ಉಪ್ಪು ಉದುರಿಸಿ.

2. ಒಂದು ಬೌಲ್‌ಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಸ್ವಲ್ಪ ಖಾರದ ಪುಡಿ,ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿ. ಮಿಶ್ರಣ ತುಂಬಾ ನೀರಾಗಬಾರದು.

3. ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಕುದಿಯಲಾರಂಭಿಸಿದಾಗ ಮೊಟ್ಟೆಯನ್ನು ಕಡಲೆ ಹಿಟ್ಟಿನ ಮಿಶ್ರಣಕ್ಕೆ ಅದ್ದಿ ಎಣ್ಣೆಯಲ್ಲಿ ಬಿಟ್ಟು ಕಂದು ಬಣ್ಣ ಬರುವಾಗ ತೆಗೆಯಿರಿ.
ಇಷ್ಟು ಮಾಡಿದರೆ ಎಗ್ ಬೋಂಡಾ ರೆಡಿ. ಇದನ್ನು ಪುದೀನಾ ಚಟ್ನಿ ಜತೆ ಸವಿಯಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ