ಆ್ಯಪ್ನಗರ

ಕ್ರಿಸ್ಮಸ್‌ಗೆ ಇರಲೇಬೇಕು ಎಗ್‌ನೋಗ್ ಟೇಸ್ಟ್

ಕೇಕ್‌ ಜತೆ ಕ್ರಿಸ್ಮಸ್‌ ಸಂಭ್ರಮ ಹೆಚ್ಚಿಸುವ ಮತ್ತೊಂದು ರೆಸಿಪಿಯೆಂದರೆ ಎಗ್‌ನೋಗ್‌. ಇದನ್ನು ವೈನ್‌ ಜತೆ ಸವಿಯಲಾಗುವುದು. ಈ ಎಗ್‌ನೋಗ್‌ ರೆಸಿಪಿ ನೋಡಿ ಇಲ್ಲಿದೆ.

Vijaya Karnataka Web 24 Dec 2017, 2:38 pm
ಕ್ರಿಸ್ಮಸ್‌ಗೆ ಮಾಡುವ ಪ್ರತಿಯೊಂದು ರೆಸಿಪಿಗಳು ತುಂಬಾ ವಿಶೇಷವಾಗಿರುತ್ತದೆ. ಕೇಕ್‌ ಜತೆ ಕ್ರಿಸ್ಮಸ್‌ ಸಂಭ್ರಮ ಹೆಚ್ಚಿಸುವ ಮತ್ತೊಂದು ರೆಸಿಪಿಯೆಂದರೆ ಎಗ್‌ನೋಗ್‌. ಇದನ್ನು ವೈನ್‌ ಜತೆ ಸವಿಯಲಾಗುವುದು. ಈ ಎಗ್‌ನೋಗ್‌ ರೆಸಿಪಿ ನೋಡಿ ಇಲ್ಲಿದೆ.
Vijaya Karnataka Web eggnog recipe with wine
ಕ್ರಿಸ್ಮಸ್‌ಗೆ ಇರಲೇಬೇಕು ಎಗ್‌ನೋಗ್ ಟೇಸ್ಟ್


ಬೇಕಾಗುವ ಸಾಮಾಗ್ರಿಗಳು
1 ಚಮಚ ವೆನಿಲ್ಲಾ ಎಸೆನ್ಸ್
ಅರ್ಧ ಚಮಚ ನಟ್‌ಮಗ್ಸ್ ಪುಡಿ
3 ಮೊಟ್ಟೆ
ಒಂದೂವರೆ ಚಮಚ ಫ್ರೆಶ್ ಕ್ರೀಮ್
2 ಚಮಚ ಬ್ರೌನ್‌ ಶುಗರ್
ಎರಡು ಚಿಟಿಕೆಯಷ್ಟು ಚಕ್ಕೆ ಪುಡಿ
5 ಕಪ್‌ ಹಾಲು
ಅರ್ಧ ಕಪ್‌ ಸಕ್ಕರೆ

ಮಾಡುವ ವಿಧಾನ:

ಸ್ಟೆಪ್‌ 1
ಒಂದು ಬೌಲ್‌ನಲ್ಲಿ ಮೊಟ್ಟೆಯನ್ನು ಒಡೆದು ಹಾಕಿ. ಅದಕ್ಕೆ ಸಕ್ಕರೆ ಮತ್ತು ಬ್ರೌನ್‌ ಶುಗರ್‌ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ, ಎಲೆಕ್ಟ್ರಿಕ್‌ ಬ್ಲೆಂಡರ್‌ ಬಳಸಿದರೆ ಮತ್ತಷ್ಟು ಒಳ್ಳೆಯದು.

ಸ್ಟೆಪ್‌ 2
ಈಗ ಹಾಲನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಪಾತ್ರೆಯಲ್ಲಿ ಹಾಕಿರುವ ಹಾಲಿನಿಂದ ಅರ್ಧ ಭಾಗ ಹಾಲನ್ನು ತೆಗೆದಿಡಿ. ಈಗ ಉರಿ ಕಡಿಮೆ ಮಾಡಿ ಮೊಟ್ಟೆಯ ಮಿಶ್ರಣವನ್ನು ಮೆಲ್ಲನೆ ಹಾಲಿಗೆ ಹಾಕಿ, ಒಂದು ಸೌಟ್‌ನಿಂದ ಚೆನ್ನಾಗಿ ತಿರುಗಿಸಿ. ಯಾವುದೇ ಕಾರಣಕ್ಕೂ ಮಿಶ್ರಣ ತಳ ಹಿಡಿಯಬಾರದು. ತಳ ಹಿಡಿದರೆ ಈ ರೆಸಿಪಿ ಹಾಳಾದಂತೆ.

ಸ್ಟೆಪ್‌ 3
ಈಗ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ. ನಂತರ ಅದನ್ನು ದೊಡ್ಡ ಪಾತ್ರೆಗೆ ಸುರಿಯಿರಿ. ನಂತರ ಬಿಸಿ ಮಾಡಿಟ್ಟ ಉಳಿದ ಹಾಲನ್ನು ಹಾಕಿ ಮಿಕ್ಸ್ ಮಾಡಿ. ಈಗ ವೆನಿಲ್ಲಾ ಎಸೆನ್ಸ್‌, ನಟ್‌ಮಗ್‌ ಹಾಗೂ ಚಕ್ಕೆ ಪುಡಿ ಹಾಕಿ ಮಿಕ್ಸ್‌ (ಇದನ್ನು ಮಾಡುವಾಗ ಚಕ್ಕೆ ಮತ್ತು ನಟ್‌ಮಗ್‌ ಅನ್ನು ಕುದಿಯುವಾಗ ಹಾಕಲೇಬಾರದು)

ಸ್ಟೆಪ್‌ 4
ಈಗ ಕ್ರೀಮ್ ಸೇರಿಸಿ, ಮತ್ತೊಮ್ಮೆ ಚೆನ್ನಾಗಿ ಬ್ಲೆಂಡ್ ಮಾಡಿ. ಈಗ ಪಾತ್ರೆಯ ಬಾಯಿ ಮುಚ್ಚಿ ಫ್ರಿಜ್‌ನಲ್ಲಿ 3-4 ಗಂಟೆಗಳ ಕಾಲ ಇಡಿ. ಈಗ ತಣ್ಣನೆಯ ಎಗ್‌ನೋಗ್‌ ಅನ್ನು ಗ್ಲಾಸ್‌ಗೆ ಸುರಿದು ಅದರ ಮೇಲೆ ನಟ್‌ಮಗ್‌ ಉದುರಿಸಿ ಸರ್ವ್‌ ಮಾಡಿ.

ಇದನ್ನು ಬಿಸಿ-ಬಿಸಿಯಾಗಿ ಸರ್ವ್‌ ಮಾಡುವುದಾದರೆ ಸ್ವಲ್ಪ ವೈನ್ ಅಥವಾ ಬ್ರಾಂಡಿ ಸೇರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ