ಆ್ಯಪ್ನಗರ

ರಕ್ತಪರಿಚಲನೆ ಹೆಚ್ಚಿಸುವ ಆರೋಗ್ಯಕರ ಆಹಾರ

ದೇಹದ ರಕ್ತಪರಿಚಲನೆ ಹೆಚ್ಚಿಸುವ ನಿಟ್ಟಿನಲ್ಲಿ ಆಹಾರಗಳ ಪಾತ್ರ ಅತ್ಯಂತ ಮಹತ್ವದ್ದು...

Vijaya Karnataka 16 Jun 2018, 5:00 am
ದೇಹದ ರಕ್ತಪರಿಚಲನೆ ಹೆಚ್ಚಿಸುವ ನಿಟ್ಟಿನಲ್ಲಿ ಆಹಾರಗಳ ಪಾತ್ರ ಅತ್ಯಂತ ಮಹತ್ವದ್ದು. ಕೆಲವು ಆಹಾರಗಳ ಸೇವನೆಯಿಂದ ರಕ್ತಪರಿಚಲನೆ ಕ್ರಿಯೆ ಚುರುಕುಗೊಳ್ಳುತ್ತದೆ.
Vijaya Karnataka Web eating new-14


ಲವಲವಿಕೆ ಸುದ್ದಿಲೋಕ

ಜೀವಕೋಶಗಳ ಆರೋಗ್ಯಕರ ಬೆಳವಣಿಗೆ ಮತ್ತು ವಿವಿಧ ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ದೇಹದಲ್ಲಿ ಸರಾಗವಾದ ರಕ್ತಪರಿಚಲನೆ ಅತಿ ಅಗತ್ಯ. ಆ್ಯಂಟಿಆಕ್ಸಿಡೆಂಟ್ಸ್‌, ಒಮೆಗಾ 3 ಫ್ಯಾಟಿ ಆ್ಯಸಿಡ್ಸ್‌, ನಾರು, ವಿಟಮಿನ್‌ಗಳು ಮತ್ತು ಖನಿಜಾಂಶಗಳಿಂದ ತುಂಬಿದ ಆಹಾರಗಳನ್ನು ತಿನ್ನುವುದರಿಂದ ರಕ್ತಪರಿಚಲನೆ ಸುಗಮವಾಗಿ ದೇಹದಲ್ಲಿರುವ ತ್ಯಾಜ್ಯಗಳೆಲ್ಲಾ ಹೊರ ಹೋಗುತ್ತವೆ. ರಕ್ತಪರಿಚಲನೆಯಲ್ಲಿ ವ್ಯತ್ಯಯವಾದರೆ ಅನೇಕ ಅನಾರೋಗ್ಯಗಳು ಕಾಡುತ್ತವೆ. ದೇಹದಲ್ಲಿ ರಕ್ತಪರಿಚಲನೆ ಹೆಚ್ಚಿಸುವ ಕೆಲವು ಆಹಾರಗಳು ಹೀಗಿವೆ.

ಮೀನು: ಕೆಲವು ಮೀನುಗಳಲ್ಲಿ ಹೃದಯದ ಆರೋಗ್ಯ ಹೆಚ್ಚಿಸುವ ಒಮೆಗಾ 3 ಫ್ಯಾಟಿ ಆ್ಯಸಿಡ್ಸ್‌ನ ಪ್ರಮಾಣ ಅತ್ಯಧಿಕವಾಗಿರುತ್ತದೆ. ಇದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.

ಕಿತ್ತಳೆ: ವಿಟಮಿನ್‌ ಸಿ ಯ ಆಗರವಾಗಿರುವ ಕಿತ್ತಳೆ ಹಣ್ಣು ನೈಸರ್ಗಿಕ ರೀತಿಯಲ್ಲಿ ರಕ್ತವನ್ನು ತೆಳುಗೊಳಿಸುತ್ತದೆ ಮತ್ತು ರಕ್ತನಾಳಗಳನ್ನು ಬಲಪಡಿಸುತ್ತದೆ. ರಕ್ತಪರಿಚಲನೆಗೆ ಮತ್ತು ರಕ್ತ ಹೆಪ್ಪುಗಟ್ಟಲು ಅಡ್ಡಿಯುಂಟು ಮಾಡುವ ಅಂಶಗಳನ್ನು ನಿವಾರಿಸುತ್ತದೆ.

ಹಸಿ ಬೀಜ: ಆಗಸೆ ಬೀಜ, ಕುಂಬಳಕಾಯಿ ಬೀಜ, ಕಾಮಕಸ್ತೂರಿ ಬೀಜ ಇತ್ಯಾದಿಗಳು ಒಮೆಗಾ 3 ಫ್ಯಾಟಿ ಆ್ಯಸಿಡ್ಸ್‌. ನಾರು ಮತ್ತು ಆ್ಯಂಟಿಆಕ್ಸಿಡೆಂಟ್ಸ್‌ನ ಪ್ರಮುಖ ಮೂಲವಾಗಿವೆ. ಉರಿಯೂತ ನಿರೋಧಕ ಮತ್ತು ಪ್ರೋಟೀನ್‌ನ ಆಗರವೂ ಆಗಿರುವ ಈ ಬೀಜಗಳು ಕೊಲೆಸ್ಟ್ರಾಲ್‌ ನಿವಾರಿಸಿ ರಕ್ತದ ಗುಣಮಟ್ಟ ಹೆಚ್ಚಿಸುತ್ತದೆ.

ಗೊಜಿ ಹಣ್ಣು: ನೋಡಲು ಒಣ ದ್ರಾಕ್ಷಿಯಂತಿರುವ ಈ ಹಣ್ಣು ಕೆಂಪು ಬಣ್ಣದಿಂದ ಕೂಡಿದ್ದು, ನಾರಿನ ಆಗರವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.

ಶುಂಠಿ: ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವ ಶುಂಠಿ ರಕ್ತಪರಿಚಲನೆ ಹೆಚ್ಚಿಸಲೂ ಸಹಕಾರಿಯಾಗಿದೆ. ಪ್ರತಿದಿನ ಒಂದು ತುಂಡು ಹಸಿ ಶುಂಠಿ ಅಥವಾ ಒಂದು ಕಪ್‌ ಶುಂಠಿ ಚಹಾ ಸೇವಿಸಿದರೆ ರಕ್ತಪರಿಚಲನೆ ಹೆಚ್ಚುತ್ತದೆ.

ಬೆಳ್ಳುಳ್ಳಿ: ನೈಸರ್ಗಿಕವಾಗಿ ರಕ್ತವನ್ನು ತೆಳುವಾಗಿಸುವ ಬೆಳ್ಳುಳ್ಳಿ ರಕ್ತಪರಿಚಲನೆಯನ್ನೂ ಸರಾಗಗೊಳಿಸುತ್ತದೆ. ಪ್ರತಿದಿನ ಬೆಳ್ಳುಳ್ಳಿಯ ಮೂರು ಎಸಳುಗಳನ್ನು ತಿಂದರೆ ಮುಚ್ಚಿಕೊಂಡಿರುವ ಅಪಧಮನಿಗಳು ತೆರೆದುಕೊಳ್ಳುತ್ತವೆ.

ಡಾರ್ಕ್‌ ಚಾಕ್ಲೇಟ್‌: ಇದರಲ್ಲಿರುವ ಕೋಕೊದಲ್ಲಿ ಫ್ಲೇವನಾಯ್ಡ್‌ಗಳಿದ್ದು, ಇದು ರಕ್ತಪರಿಚಲನೆಗೆ ಸಹಕಾರಿಯಾಗಿದೆ. ಆದ್ದರಿಂದ ಪ್ರತಿದಿನ ಒಂದು ಸಣ್ಣ ತುಂಡು ಡಾರ್ಕ್‌ ಚಾಕ್ಲೇಟ್‌ ತಿನ್ನುವುದು ಉತ್ತಮ.

ಕಲ್ಲಂಗಡಿ ಹಣ್ಣು: ನೈಸರ್ಗಿಕ ಆ್ಯಂಟಿಆಕ್ಸಿಡೆಂಟ್‌ ಲೈಕೊಪಿನ್‌ನ ಆಗರವಾಗಿರುವ ಈ ಹಣ್ಣು ದೇಹದಲ್ಲಿ ರಕ್ತಪರಿಚಲನೆ ಹೆಚ್ಚಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ