ಆ್ಯಪ್ನಗರ

ಸಿಲೆಬ್ರಿಟಿ ಟೇಸ್ಟ್‌: ಹೋಳಿಗೆ ಪ್ರವೀಣೆ ಪ್ರತಿಭಾ

ಉತ್ತರ ಕರ್ನಾಟಕ ಮೂಲದ ಮಾಜಿ ಮಿಸೆಸ್‌ ಇಂಟರ್‌ನ್ಯಾಷನಲ್‌ ಪ್ರತಿಭಾ ಸಂಶೀಮಠ ಅವರ ಯುಗಾದಿ ಹಬ್ಬದ ತಯಾರಿ ...

Vijaya Karnataka 6 Apr 2019, 5:00 am
ಉತ್ತರ ಕರ್ನಾಟಕ ಮೂಲದ ಮಾಜಿ ಮಿಸೆಸ್‌ ಇಂಟರ್‌ನ್ಯಾಷನಲ್‌ ಪ್ರತಿಭಾ ಸಂಶೀಮಠ ಅವರ ಯುಗಾದಿ ಹಬ್ಬದ ತಯಾರಿ ಹೀಗಿದೆ.
Vijaya Karnataka Web Prathiba


ಬಬಿತಾ ಎಸ್‌.

ವೃತ್ತಿ ಜೀವನದಲ್ಲಿ ಅದೆಷ್ಟೇ ಬಿಝಿಯಾಗಿದ್ದರೂ ಯುಗಾದಿ ಹಬ್ಬದ ಆಚರಣೆಯನ್ನು ಎಂದೂ ತಪ್ಪಿಸದ ಪ್ರತಿಭಾ ಸಂಶಿಮಠ ಅವರು ಈ ಬಾರಿಯೂ ಹಬ್ಬವನ್ನು ಶಾಸ್ತ್ರೋಕ್ತವಾಗಿ ಆಚರಿಸಿ ಹೋಳಿಗೆಯೂಟ ತಯಾರಿಸಲು ರೆಡಿಯಾಗಿದ್ದಾರೆ. ಮೂಲತಃ ಕೂಡು ಕುಟುಂಬದಲ್ಲಿ ಬೆಳೆದ ಅವರ ಮನೆಯಲ್ಲಿ ಹಿಂದೆ ಯುಗಾದಿ ಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದರಂತೆ. ಆಗ ಸುಮಾರು 500 ರಿಂದ 600 ಹೋಳಿಗೆಗಳನ್ನು ತಯಾರಿಸಿ ಮನೆ ಮಂದಿ ಸೇರಿದಂತೆ ಅತಿಥಿಗಳಿಗೂ ಹೋಳಿಗೆಯೂಟ ಮಾಡಿಸುತ್ತಿದ್ದ ಅವರು ಹೋಳಿಗೆ ತಯಾರಿಸುವುದರಲ್ಲಿಯೂ ಎಕ್ಸ್‌ಪರ್ಟ್‌.

ಹೋಳಿಗೆ ಹಬ್ಬ

ಯುಗಾದಿ ಹಬಕ್ಕೆ ಈಗಲೂ ಹೋಳಿಗೆ ತಯಾರಿಸುತ್ತೇನೆ ಎಂದು ಹೇಳುವ ಪ್ರತಿಭಾ ನಮ್ಮೂರಿನಂತೆ ದೊಡ್ಡ ಪ್ರಮಾಣದಲ್ಲಿ ಹೋಳಿಗೆ ತಯಾರಿಸುವ ಸಂದರ್ಭ ಈಗಿಲ್ಲದಿದ್ದರೂ ಸಂಪ್ರದಾಯ ಪಾಲಿಸಲು ಏಳೆಂಟು ಹೋಳಿಗೆ ತಯಾರಿಸುತ್ತೇನೆ. ನನ್ನ ಪತಿ ಮತ್ತು ಮಗ ಹೋಳಿಗೆಯನ್ನು ಇಷ್ಟಪಟ್ಟು ತಿನ್ನುತ್ತಾರೆ ಎಂದಿದ್ದಾರೆ.

ಶ್ಯಾವಿಗೆ ಪಾಯಸ

ಈ ಹಬ್ಬದಂದು ಬೆಳಗ್ಗೆ ಲಕ್ಷ್ಮಿ ದೇವಿಗೆ ಸೀರೆ ಉಡಿಸಿ ಪೂಜೆ ಸಲ್ಲಿಸಿ ಆರತಿ ಮಾಡುವ ಸಂಪ್ರದಾಯವನ್ನು ಪಾಲಿಸುವ ಅವರು ಅಂದು ಪ್ರತಿವರ್ಷ ಬೆಳಗ್ಗಿನ ತಿಂಡಿಗೆ ಶ್ಯಾವಿಗೆ ಪಾಯಸ ಮಾಡುತ್ತಾರೆ. ಸಕ್ಕರೆ ಪುಡಿಗೆ ಏಲಕ್ಕಿ ಪುಡಿ, ಬೇವಿನ ಹೂವು ಹಾಕಿ ಬೇವು ಬೆಲ್ಲ ಮಿಶ್ರಣ ಮಾಡಿ ಹಂಚುತ್ತಾರೆ. ಇದು ತಮ್ಮ ಮನೆಯಲ್ಲಿ ಮೊದಲಿನಿಂದಲೂ ನಡೆದುಬಂದ ಪದ್ಧತಿ ಎಂದು ಪ್ರತಿಭಾ ಹೇಳಿದ್ದಾರೆ.

ಟೇಸ್ಟಿ ಕಟ್ಟಿನ ಸಾರು

ಬೆಳಗ್ಗೆ ಶ್ಯಾವಿಗೆ ಪಾಯಸ ಮತ್ತು ಬೇವು ಬೆಲ್ಲ ಸೇವಿಸಿದ ಮೇಲೆ ಮಧ್ಯಾಹ್ನದ ಅಡುಗೆಗೆ ಕಡ್ಲೆ ಬೇಳೆ ಹೋಳಿಗೆ, ಕಟ್ಟಿನ ಸಾರು, ಅನ್ನ, ಸಾರು, ತರಕಾರಿ ಭಜಿ ರುಚಿಕಟ್ಟಾಗಿ ತಯಾರಿಸಿ ಮನೆ ಮಂದಿಯೆಲ್ಲಾ ಸೇರಿ ಹಬ್ಬದೂಟ ಮಾಡುತ್ತೇವೆ ಎಂದು ಹೇಳುವ ಪ್ರತಿಭಾರಿಗೆ ಬಿಸಿ ಬಿಸಿ ಹೋಳಿಗೆಯನ್ನು ತುಪ್ಪ ಮತ್ತು ಹಾಲಿನ ಜತೆ ತಿನ್ನಲು ತುಂಬಾ ಇಷ್ಟವಂತೆ.

ಫೇವರಿಟ್‌ ಫುಡ್‌

ಪ್ರತಿಭಾರಿಗೆ ಹೆಸರುಬೇಳೆ ಪಾಯಸ ಫೇವರಿಟ್‌ ತಿನಿಸು. ಆರೋಗ್ಯಕ್ಕೂ ತುಂಬಾ ಹೆಲ್ದಿಯಾಗಿರುವ ಇದು ತಾನು ಆಗಾಗ ಮಾಡಿ ಸೇವಿಸುತ್ತೇನೆ ಎಂದು ಹೇಳುವ ಅವರು ಹಬ್ಬದ ಸಂದರ್ಭದಲ್ಲಿ ಡಯಟ್‌ಗೆ ಗುಡ್‌ಬೈ ಹೇಳುತ್ತಾರಂತೆ.

ಜೀವನದಲ್ಲಿ ಬೇವು ಇದ್ದೇ ಇರುತ್ತದೆ. ಅದರಲ್ಲಿ ಸಿಹಿ ತರುವ ಪ್ರಯತ್ನವನ್ನು ನಾವು ಮಾಡಬೇಕು.
ಪ್ರತಿಭಾ ಸಂಶಿಮಠ, ಮಾಜಿ ಮಿಸೆಸ್‌ ಇಂಟರ್‌ನ್ಯಾಷನಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ