ಆ್ಯಪ್ನಗರ

ಕಿಚನ್‌ ಕæೕರ್‌: ಹಣ್ಣುಗಳ ಆಯ್ಕೆ ಹೀಗಿರಲಿ

-ಕಡುಗೆಂಪು ಸಿಪ್ಪೆಯಿರುವ ದಾಳಿಂಬೆ ಹಣ್ಣುಗಳನ್ನು ಆರಿಸಿ ಸಿಪ್ಪೆ ಕೆಂಪಿದ್ದಷ್ಟು ಅದರ ಸಿಹಿ ಹೆಚ್ಚಿರುತ್ತದೆ...

Vijaya Karnataka 26 May 2018, 5:00 am
-ಕಡುಗೆಂಪು ಸಿಪ್ಪೆಯಿರುವ ದಾಳಿಂಬೆ ಹಣ್ಣುಗಳನ್ನು ಆರಿಸಿ. ಸಿಪ್ಪೆ ಕೆಂಪಿದ್ದಷ್ಟು ಅದರ ಸಿಹಿ ಹೆಚ್ಚಿರುತ್ತದೆ. ಅದೇ ರೀತಿ ದೊಡ್ಡ ಮತ್ತು ಭಾರವಾಗಿರುವ ದಾಳಿಂಬೆಯಲ್ಲಿ ರಸಭರಿತ ಬೀಜಗಳು ಜಾಸ್ತಿಯಿರುತ್ತವೆ.
Vijaya Karnataka Web fruit selection tips
ಕಿಚನ್‌ ಕæೕರ್‌: ಹಣ್ಣುಗಳ ಆಯ್ಕೆ ಹೀಗಿರಲಿ


-ಚೆನ್ನಾಗಿ ಪರಿಮಳ ಬೀರುವ, ತಾಜಾ ಹಸಿರು ಎಲೆಗಳಿರುವ ಮತ್ತು ಭಾರವಾಗಿರುವ ಪೈನಾಪಲ್‌ ಆರಿಸಿ. ಇದರ ಎಲೆಗಳು ಹಸಿರು ಮತ್ತು ಕ್ರಿಸ್ಪ್‌ ಆಗಿರಬೇಕು. ಮೆತ್ತಗಿರುವ ಅಥವಾ ಒಣಗಿದ ಕಂದು ಎಲೆಗಳಿರುವ ಪೈನಾಪಲ್‌ ಖರೀದಿಸಬೇಡಿ.

-ತರಚಿ ಹೋಗಿರುವ ಮತ್ತು ಮೆತ್ತಗಾಗಿರುವ ಪೀಚ್‌ ಹಣ್ಣುಗಳಿಗೆ ನೋ ಎನ್ನಿ. ಅದೇ ರೀತಿ ತೊಟ್ಟಿನ ಹತ್ತಿರ ಚೆನ್ನಾಗಿ ಪರಿಮಳ ಬೀರುವ ಮತ್ತು ಸ್ವಲ್ಪ ಮೆತ್ತಗಿರುವ ಮಾವಿನ ಹಣ್ಣುಗಳನ್ನು ಖರೀದಿಸಿ.

-ಗ್ರೇಪ್‌ಫ್ರೂಟ್‌, ಮೋಸಂಬಿ ಮತ್ತು ಕಿತ್ತಳೆ ಹಣ್ಣುಗಳನ್ನು ಖರೀದಿಸುವಾಗ ಸಿಪ್ಪೆ ಮೃದುವಾಗಿರುವುದನ್ನು, ಭಾರವಿರುವುದನ್ನು ಆಯ್ಕೆ ಮಾಡಿ. ತುಂಬಾ ಗಟ್ಟಿಯಾಗಿರುವ ಹಣ್ಣುಗಳು ಬೇಡ.

-ಹೊಳೆಯುವ ಮತ್ತು ಕಡುಗೆಂಪು ಸಿಪ್ಪೆಯಿರುವ ಚೆರ್ರಿ ಹಣ್ಣು ಖರೀದಿಸಿ. ಇವು ತುಂಬಾ ಫ್ರೆಶ್‌ ಆಗಿರುತ್ತವೆ. ತೊಟ್ಟುಗಳಿಲ್ಲದ ಮತ್ತು ತರಚಿ ಹೋಗಿರುವ ಹಣ್ಣು ಬೇಡ.

-ಸಿಹಿ ಪರಿಮಳ ಬೀರುವ ಮತ್ತು ಕೆನೆ ಅಥವಾ ಗೋಲ್ಡನ್‌ ಬಣ್ಣದ ಸಿಪ್ಪೆಯಿರುವ ಖರ್ಬೂಜ ಹಣ್ಣು ಆರಿಸಿ. ಬಾಳೆ ಹಣ್ಣು ಖರೀದಿಸುವಾಗ ಕಡು ಹಳದಿ ಬಣ್ಣದ ಸಿಪ್ಪೆಯಿರುವ ಗಟ್ಟಿ ಹಣ್ಣನ್ನು ಆರಿಸಿ. ಚುಕ್ಕಿಗಳಿರುವ ತರಚಿರುವ ಮತ್ತು ಬಿರುಕು ಬಿಟ್ಟಿರುವ ಸಿಪ್ಪೆಯ ಬಾಳೆಹಣ್ಣು ಬೇಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ