ಆ್ಯಪ್ನಗರ

ಬೆಣ್ಣೆ ಹಣ್ಣಿನ ಚಹಾ ಕುಡಿದು ನೋಡಿ!

ತುಸು ಕಹಿ ರುಚಿ ಹೊಂದಿರುವ ಈ ಬೀಜ ಇತರ ರುಚಿಗಳೊಂದಿಗೆ ಚೆನ್ನಾಗಿ ಬೆರೆತುಕೊಳ್ಳುತ್ತದೆ.

Agencies 27 Apr 2019, 2:06 pm
ಪೌಷ್ಟಿಕಾಂಶಗಳ ಆಗರವಾಗಿರುವ ಅವಕಾಡೊ ಅಥವಾ ಬೆಣ್ಣೆ ಹಣ್ಣಿನ ಬೀಜದಿಂದ ಮಾಡಿದ ಚಹಾ ಇತ್ತೀಚೆಗೆ ಟ್ರೆಂಡ್‌ನಲ್ಲಿದೆ.
Vijaya Karnataka Web Avacado


ಸಾಮಾನ್ಯವಾಗಿ ಈ ಹಣ್ಣಿನ ಮೃದು ಭಾಗಗಳನ್ನು ತಿಂದು ಅದರ ಬೀಜವನ್ನು ಸ್ಮೂದಿ, ಸಾಸ್‌ಗಳ ಬಳಕೆಗೆ ಉಪಯೋಗಿಸಲಾಗುತ್ತಿತ್ತು. ಆದರೆ ಈ ಬೀಜದ ಆರೋಗ್ಯ ಪ್ರಯೋಜನಗಳನ್ನು ಮನಗಂಡು ಈಗ ಅದರಿಂದ ಚಹಾ ಮಾಡಿ ಸೇವಿಸಲಾಗುತ್ತದೆ. ತುಸು ಕಹಿ ರುಚಿ ಹೊಂದಿರುವ ಈ ಬೀಜ ಇತರ ರುಚಿಗಳೊಂದಿಗೆ ಚೆನ್ನಾಗಿ ಬೆರೆತುಕೊಳ್ಳುತ್ತದೆ.

ಮಾಡುವುದು ಹೇಗೆ?

ಅವಕಾಡೊ ಹಣ್ಣಿನ ಬೀಜವನ್ನು ಮೃದುವಾಗಿ ಬೇಯಿಸಿ ಹೆಚ್ಚಿ ಮಿಕ್ಸಿ ಜಾರ್‌ನಲ್ಲಿ ನುಣ್ಣಗೆ ಅರೆಯಬೇಕು. ಇದಕ್ಕೆ ಸ್ವಲ್ಪ ನೀರು ಸೇರಿಸಿ ಬಿಸಿ ಮಾಡಿ ಕಪ್‌ಗೆ ಸುರಿದು ಸ್ವಲ್ಪ
ಹನಿ ಜೇನುತುಪ್ಪ ಅಥವಾ ಬೆಲ್ಲ ಹಾಕಿ ಕುಡಿಯಬೇಕು.

ಆರೋಗ್ಯ ಲಾಭ

ತಲೆನೋವು, ಒತ್ತಡ, ಮಲಬದ್ಧತೆ ಅಸ್ತಮಾ ಲಕ್ಷಣಗಳನ್ನು ನಿವಾರಿಸುತ್ತದೆ. ರಕ್ತದೊತ್ತಡ ಸಮಸ್ಯೆ ಇದ್ದರೆ ಸಹಾಯಕಾರಿ.

ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ

ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್‌ ಹೊಂದಿದವರು ಅವಕಾಡೊ ಹಣ್ಣನ್ನು ತಿಂದರೆ ಒಳ್ಳೆಯದು. ಅವಕಾಡೊ ಅಥವಾ ಬೆಣ್ಣೆ ಹಣ್ಣಿನಲ್ಲಿ ಕೊಬ್ಬಿನಾಂಶ ಅಧಿಕವಾಗಿದ್ದರೂ ತೂಕ ಇಳಿಸುವಲ್ಲಿ ಅತ್ಯಂತ ಸಹಕಾರಿ.ಇದರಲ್ಲಿರುವ ಮೋನೊ ಸ್ಯಾಚುರೇಟೆಡ್‌ ಕೊಬ್ಬು ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸುತ್ತದೆ. ಅವಕಾಡೊ ಹಣ್ಣಿನ ಹೋಳನ್ನು ಸ್ಯಾಂಡ್‌ವಿಚ್‌ನಲ್ಲಿಟ್ಟು ಅಥವಾ ಸಲಾಡ್‌ಗಳಿಗೆ ಬೆರೆಸಿ ತಿನ್ನಿ. ಇದನ್ನು ನಿಂಬೆ ಶರಬತ್ತು ಅಥವಾ ಬೆಳ್ಳುಳ್ಳಿಯೊಂದಿಗೆ ಬೆರೆಸಿ ತಿಂದರೂ ಚೆನ್ನಾಗಿರುತ್ತದೆ.

ಇದರಲ್ಲಿರುವ ವಿಶೇಷವಾದ ಕೊಬ್ಬೊಂದು ಹೊಟ್ಟೆ ತುಂಬಿದಂಥ ಅನುಭವ ನೀಡುತ್ತದೆ. ಇದರಲ್ಲಿ ಕರಗುವ ಮತ್ತು ಕರಗದ ನಾರಿನಂಶವೂ ಇದ್ದು ಇದು ತೂಕ ಇಳಿಕೆಗೆ ನೆರವು ನೀಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ