ಆ್ಯಪ್ನಗರ

ಮಟನ್ ಸುಕ್ಕ ಮಾಡುವ ಸರಳ ರೆಸಿಪಿ

ನೀವು ಮಟನ್‌ ಪ್ರಿಯರಾಗಿದ್ದರೆ ಇಲ್ಲಿದೆ ತುಂಬಾ ರುಚಿಕರವಾದ ಮಟನ್‌ ಸುಕ್ಕ ಮಾಡುವ ಸರಳ ರೆಸಿಪಿ.

Vijaya Karnataka Web 8 Jun 2018, 12:35 pm
ನೀವು ಮಟನ್‌ ಪ್ರಿಯರಾಗಿದ್ದರೆ ಇಲ್ಲಿದೆ ತುಂಬಾ ರುಚಿಕರವಾದ ಮಟನ್‌ ಸುಕ್ಕ ಮಾಡುವ ಸರಳ ರೆಸಿಪಿ.
Vijaya Karnataka Web mutton sukka


ಬೇಕಾಗುವ ಸಾಮಗ್ರಿ

ಅರ್ಧ ಕೆಜಿ ಮಟನ್
2 ಈರುಳ್ಳಿ
1 ಟೊಮೆಟೊ
1 ಇಂಚಿನಷ್ಟು ದೊಡ್ಡದಿರುವ ಚಕ್ಕೆ
5 ಏಲಕ್ಕಿ
ಸ್ವಲ್ಪ ಕರಿಬೇವು
ಅರ್ಧ ಚಮಚ ಕೊತ್ತಂಬರಿ ಪುಡಿ
1 ಚಮಚ ಗರಂ ಮಸಾಲ ಪುಡಿ
1/4 ಚಮಚ ಕಾಳು ಮೆಣಸಿನ ಪುಡಿ
3 ಕಪ್‌ ನೀರು
1 ಹಸಿ ಮೆಣಸು
ಅರ್ಧ ಚಮಚ ಉದ್ದು
4 ಲವಂಗ
1 ನಕ್ಷತ್ರ ಮೊಗ್ಗು
ಅರ್ಧ ಚಮಚ ಜೀರಿಗೆ ಪುಡಿ
ಅರ್ಧ ಚಮಚ ಅರಿಶಿಣ ಪುಡಿ
ಒಂದೂವರೆ ಚಮಚ ಸನ್‌ಫ್ಲವರ್‌ ಆಯಿಲ್‌/ಅಡುಗೆ ಎಣ್ಣೆ

ಮಸಾಲೆಗೆ
5 ಎಸಳು ಬೆಳ್ಳುಳ್ಳಿ
2 ಇಂಚಿನಷ್ಟು
1 ಚಮಚ ಜೀರಿಗೆ
100 ಗ್ರಾಂ ಚಿಕ್ಕ ಈರುಳ್ಳಿ
ಅರ್ಧ ಕಪ್‌ ನೀರು
ಇಷ್ಟು ಸಾಮಗ್ರಿ ಹಾಕಿ ಪೇಸ್ಟ್‌ ಮಾಡಿ ಇಡಿ.

ಮಾಡುವುದು ಹೇಗೆ?

ಸ್ಟೆಪ್ 1
ಮಟನ್‌ ಅನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ, ಚಿಟಿಕೆಯಷ್ಟು ಉಪ್ಪು ಹಾಗೂ ಅರಿಶಿಣ ಹಾಕಿ 10 ನಿಮಿಷ ಇಡಿ. ನಂತರ ಮಟನ್‌ ಅನ್ನು ಚೆನ್ನಾಗಿ ತೊಳೆದು ಈಗ ಗ್ರೈಂಡ್‌ ಮಾಡಿದ ಪೇಸ್ಟ್‌ ಹಾಕಿ ಮಿಕ್ಸ್‌ ಮಾಡಿ ಒಂದೂವರೆ ಗಂಟೆ ಇಡಿ.

ಸ್ಟೆಪ್‌ 2
ಈಗ ತಳ ದಪ್ಪವಿರುವ ಪ್ಯಾನ್‌ ಬಿಸಿ ಮಾಡಿ ನೀರು ಹಾಕಿ. ನೀರು ಕುದಿಯಲಾರಂಭಿಸಿದಾಗ ಮಸಾಲೆ ಮಿಕ್ಸ್‌ ಮಾಡಿಟ್ಟ ಮಟನ್ ಹಾಕಿ ಬೇಯಿಸಿ. ಮಟನ್‌ ಅರ್ಧ ಬೆಂದಾಗ ಖಾರದ ಪುಡಿ, ಕೊತ್ತಂಬರಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ.

ಸ್ಟೆಪ್‌ 3
ಮಟನ್‌ ಅನ್ನು ಚೆನ್ನಾಗಿ ಬೇಯಿಸಿ, ಅದರಲ್ಲಿರುವ ನೀರು ಬತ್ತಲಿ, ಈಗ ಅದನ್ನು ಉರಿಯಿಂದ ಇಳಿಸಿ ಇಡಿ. ಈಗ ಮತ್ತೊಂದು ಪ್ಯಾನ್‌ ಅನ್ನು ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಉದ್ದಿನ ಬೇಳೆ ಹಾಕಿ, ಉದ್ದಿನ ಕಂದು ಬಣ್ಣಕ್ಕೆ ತಿರುವಾಗ ಚಕ್ಕೆ, ಲವಂಗ, ಏಲಕ್ಕಿ, ನಕ್ಷತ್ರ ಮೊಗ್ಗು 2 ನಿಮಿಷ ಫ್ರೈ ಮಾಡಿ. ಈಗ ಈರುಳ್ಳಿ, ಹಸಿ ಮೆಣಸು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಈಗ ಟೊಮೆಟೊ ಹಾಕಿ, ಕರಿಬೇವು ಹಾಕಿ 2 ನಿಮಿಷ ಫ್ರೈ ಮಾಡಿ ಬೇಯಿಸಿದ ಮಟನ್‌ ಹಾಕಿ ಮಿಕ್ಸ್ ಮಾಡಿ.

ಸ್ಟೆಪ್‌ 4
ಈಗ ಕಾಳು ಮೆಣಸಿನ ಪುಡಿ ಉದುರಿಸಿ, ಉರಿಯನ್ನು ಹೆಚ್ಚು ಮಾಡಿ. ಮಿಶ್ರಣ ಡ್ರೈ ರೀತಿಯಾದಾಗ ಮಟನ್‌ ಸುಕ್ಕ ಸರ್ವ್‌ ಮಾಡಲು ರೆಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ