ಆ್ಯಪ್ನಗರ

ಹಲಸಿನ ಹಣ್ಣಿನ ಕೊಟ್ಟೆ ಕಡಬು ಟೇಸ್ಟ್ ಮಾಡಬೇಕೆನಿಸುತ್ತಿದೆಯೇ?

ಹಲಸಿನ ಹಣ್ಣನ್ನು ನೋಡುವಾಗ ಮನೆಯಲ್ಲಿ ಅಮ್ಮ ಮಾಡಿಕೊಡುತ್ತಿದ್ದ ಅಡೆ/ ಕೊಟ್ಟೆಕಡುಬು ನೆನೆಪಾಗಿರಬಹುದು ಅಲ್ವಾ? ಇದನ್ನು ಮಾಡಲಿಕ್ಕೆ ಬರಲ್ಲ ಅಂತ ಚಿಂತೆ ಬೇಡ. ಅಮ್ಮ ಮಾಡಿದಷ್ಟೇ ರುಚಿಕರವಾಗಿ ಮಾಡಬಹುದು.

Vijaya Karnataka Web 10 Jul 2017, 12:49 pm
ಹಲಸಿನ ಹಣ್ಣನ್ನು ನೋಡುವಾಗ ಮನೆಯಲ್ಲಿ ಅಮ್ಮ ಮಾಡಿಕೊಡುತ್ತಿದ್ದ ಅಡೆ/ ಕೊಟ್ಟೆಕಡುಬು ನೆನೆಪಾಗಿರಬಹುದು ಅಲ್ವಾ? ಇದನ್ನು ಮಾಡಲಿಕ್ಕೆ ಬರಲ್ಲ ಅಂತ ಚಿಂತೆ ಬೇಡ. ಅಮ್ಮ ಮಾಡಿದಷ್ಟೇ ರುಚಿಕರವಾಗಿ ಮಾಡಬಹುದು.
Vijaya Karnataka Web jackfruit wrap snacks
ಹಲಸಿನ ಹಣ್ಣಿನ ಕೊಟ್ಟೆ ಕಡಬು ಟೇಸ್ಟ್ ಮಾಡಬೇಕೆನಿಸುತ್ತಿದೆಯೇ?


ಇದನ್ನು ಮಾಡುವ ವಿಧಾನ ತುಂಬಾ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಬಾಳೆ ಎಲೆ, ಅರಿಶಿಣ ಎಲೆ(ಯಾವುದಾದರೂ ಆದೀತು)
1 ಕಪ್‌ ಬೆಲ್ಲದ ಪುಡಿ
3 ಏಲಕ್ಕಿ(ಪುಡಿ ಮಾಡಿದ್ದು)
2 ಕಪ್‌ ಹಲಸಿನ ಹಣ್ಣಿನ ರಸ
1ಕಪ್‌ ಅಕ್ಕಿ ಹಿಟ್ಟು (ರೋಸ್ಟ್‌ ಮಾಡಿ)
ಸ್ವಲ್ಪ ಉಪ್ಪು(ಅರ್ಧ ಚಮಚಕ್ಕಿಂತಲೂ ಕಮ್ಮಿ ಹಾಕಿ)
ತೆಂಗಿನ ತುರಿ ಅರ್ಧ ಕಪ್
ಅರ್ಧ ಚಮಚ ಜೀರಿಗೆ

ಮಾಡುವ ವಿಧಾನ

* ಕೂಳೆ ಅಥವಾ ಬಿಳುವ ಹಲಸಿನ ಹಣ್ಣಾದರೆ ಅದರ ರಸವನ್ನು ತೆಗೆಯಿರಿ. ಅದೇ ಬಕ್ಕೆ ಹಲಸಿನ ಹಣ್ಣಾದರೆ ಅದನ್ನು ನುಣ್ಣಗೆ ರುಬ್ಬಿ.

* ನಂತರ ಹಲಸಿನ ಹಣ್ಣಿನ ರಸ, ಅಕ್ಕಿ ಹಿಟ್ಟು, ಬೆಲ್ಲ, ಜೀರಿಗೆ, ಏಲಕ್ಕಿ ರುಚಿಗೆ ತಕ್ಕ ಉಪ್ಪು, ತೆಂಗಿನ ತುರಿ ಹಾಕಿ ಮಿಕ್ಸ್‌ ಮಾಡಿ(ಈ ಮಿಶ್ರಣ ರೊಟ್ಟಿಗೆ ತಟ್ಟುವಷ್ಟು ಗಟ್ಟಿಯಾಗಿರಲಿ).

* ಈಗ ಈ ಮಿಶ್ರಣವನ್ನು ಚಿಕ್ಕ-ಚಿಕ್ಕ ಎಲೆ ತುಂಡುಗಳಿಗೆ ಹಾಕಿ ಅದರಲ್ಲಿ ತಟ್ಟಿ, ಅದನ್ನು ಮಡಚಿ.

*ನಂತರ ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿದರೆ ಹಲಸಿನ ಹಣ್ಣಿನ ಕೊಟ್ಟೆ ಕಡಬು ರೆಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ