ಆ್ಯಪ್ನಗರ

ಮಲೆನಾಡಿನ ಕೈ ಚಕ್ಕುಲಿ ಬಲು ರುಚಿ

ಮಲೆನಾಡಿನ ಸಾಂಪ್ರದಾಯಿಕ ತಿನಿಸು ಕೈ ಚಕ್ಕುಲಿಯ ಪರಿಮಳ ಮತ್ತು ರುಚಿಗೆ ಮನ ಸೋಲದವರಿಲ್ಲ. ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ,

Vijaya Karnataka 17 Aug 2019, 5:00 am
ಕೃಷ್ಣಮೂರ್ತಿ ಟಿ.ಕೆರೆಗದ್ದೆ
Vijaya Karnataka Web kai chakkuli


ಮಲೆನಾಡಿನ ಸಾಂಪ್ರದಾಯಿಕ ತಿನಿಸು ಕೈ ಚಕ್ಕುಲಿಯ ಪರಿಮಳ ಮತ್ತು ರುಚಿಗೆ ಮನ ಸೋಲದವರಿಲ್ಲ. ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಯಲ್ಲಾಪುರ ಸೇರಿದಂತೆ ಮಲೆನಾಡಿನ ಒಂದಷ್ಟು ಮನೆಗಳಲ್ಲಿಕೈಯಲ್ಲಿಯೇ ಚಕ್ಕುಲಿ ತಯಾರಿಕೆ ಆರಂಭವಾಗುತ್ತದೆ. ನೆರೆಹೊರೆಯವರು, ಊರಿನವರೆಲ್ಲಸೇರಿ ಕೈಯಲ್ಲಿಸುತ್ತಿ ತಯಾರಿಸುವ ಚಕ್ಕುಲಿ ಕಂಬಳ ಮಾಡುತ್ತಾರೆ. ಈ ರೀತಿ ತಯಾರಿಸಿದ ಚಕ್ಕುಲಿಯನ್ನು ಡಬ್ಬದಲ್ಲಿಹಾಕಿಟ್ಟು ತಿಂಗಳುಗಟ್ಟಲೆ ಸವಿಯುತ್ತಾರೆ.

ಏನಿದು ಕೈ ಚಕ್ಕುಲಿ?

ಸಾಮಾನ್ಯವಾಗಿ ಹಿಟ್ಟನ್ನು ಹದಗೊಳಿಸಿ ಮಟ್ಟಿನಲ್ಲಿಸುತ್ತಿದಾಗ ಚಕ್ಕುಲಿ ಸಿದ್ದವಾಗುತ್ತದೆ. ಆದರೆ ಇಲ್ಲಿಯಾವುದೇ ಸಾಧನವಿಲ್ಲದಯೇ ಚಕ್ಕುಲಿ ತಯಾರಾಗುತ್ತದೆ. ಕೈ ಬೆರಳುಗಳೇ ಇದಕ್ಕೆ ಮೂಲಾಧಾರ. ಹದವಾಗಿ ಸಿದ್ಧಪಡಿಸಿದ ಹಿಟ್ಟನ್ನು ಕೈ ಬೆರಳಲ್ಲೇ ಸುತ್ತಿ ಕೈ ಚಕ್ಕುಲಿ ತಯಾರಿಸಲಾಗುತ್ತದೆ. ಇದೊಂದು ಕಲೆಯಾಗಿದ್ದು ಬೆರಳಲ್ಲೇ ಚಕ್ಕುಲಿ ಸುತ್ತುವುದಕ್ಕೆ ಚಾಕಚಕ್ಯತೆ ಬೇಕಾಗುತ್ತದೆ. ಈ ಚಕ್ಕುಲಿ ತಿನ್ನಲು ಸ್ವಲ್ಪ ಗಟ್ಟಿಯಾದರೂ ಬಾಯಲ್ಲಿನೀರೂರಿಸುವ ರುಚಿ ಹೊಂದಿರುತ್ತದೆ.

ಪ್ರಾದೇಶಿಕ ಸೊಗಡು

ಗಣಪತಿಗೆ ಚಕ್ಕುಲಿ ಪ್ರಿಯವಾದ ನೈವೇದ್ಯ. ಮಲೆನಾಡಿನಲ್ಲಿಬಹುತೇಕ ಜನರು ಗಣೇಶ ಚೌತಿಗೆ ಈ ಕೈಚಕ್ಕುಲಿಯನ್ನು ನೈವೇದ್ಯಕ್ಕೆ ಇಡುತ್ತಾರೆ. ಕಳೆದ ಹಲವು ವರ್ಷಗಳಿಂದ ಕೈ ಚಕ್ಕುಲಿಯ ಬದಲು ಮಲೆನಾಡಿಗರು ಸುಲಭವಾದ ಮಟ್ಟಿನ ಚಕ್ಕುಲಿ ತಯಾರಿಕೆಯತ್ತ ಮುಖ ಮಾಡಿದ್ದಾರೆ. ಇದರಿಂದ ಸಾಂಪ್ರದಾಯಿಕ ಕೈ ಚಕ್ಕುಲಿ ಕಾಣಸಿಗುವುದು ಕಡಿಮೆಯಾಗಿದೆ.

ಕೈ ಚಕ್ಕುಲಿ ಕಂಬಳ

ಸಿಟಿಜನರಿಗೆ ಹೊಸದಾದ ಈ ಚಕ್ಕುಲಿ ರುಚಿಗೆ ಇತ್ತೀಚೆಗೆ ಬೇಡಿಕೆ ವ್ಯಕ್ತವಾಗುತ್ತದೆ. ಆದರೆ ಅದರ ತಯಾರಿಕೆ ಮರೆಯಾಗುತ್ತಿರುವ ಕಾರಣ ಈ ತಿನಿಸಿನ ಮಹತ್ವ ಸಾರುವ ಕೆಲಸವನ್ನು ಶಿರಸಿಯ ಸಹಕಾರಿ ಸಂಸ್ಥೆಯೊಂದು ಮಾಡಿದೆ. ಕೈ ಚಕ್ಕುಲಿ ತಯಾರಿಕೆಗೆ ಇನ್ನಷ್ಟು ಪ್ರೇರಣೆ ನೀಡಲು ಇತ್ತೀಚೆಗೆ ರೈತರ ಸಹಕಾರಿ ಸಂಸ್ಥೆ ತೋಟಗಾರ್ಸ್‌ ಕೋ ಆಪರೇಟಿವ್‌ ಸೇಲ್‌ ಸೊಸೈಟಿ ಕೈ ಚಕ್ಕುಲಿ ಕಂಬಳ ಆಯೋಜಿಸಿತ್ತು. ಕೈ ಚಕ್ಕುಲಿ ತಯಾರಿಕೆಯಲ್ಲಿಪ್ರಾವೀಣ್ಯತೆ ಹೊಂದಿದ ನೂರಾರು ಮಂದಿ ಇಲ್ಲಿಕೈ ಚಕ್ಕುಲಿ ತಯಾರಿಸಿ ಗಮನ ಸೆಳೆದರು.

ವಿಶೇಷ ಕೈ ಚಳಕ

ಕೈ ಚಕ್ಕುಲಿ ಕಂಬಳದಲ್ಲಿಚಕ್ಕುಲಿ ಮಾಡುವವರ ಕೈ ಚಳಕ ಅತ್ಯಂತ ವಿಶೇಷವಾದದ್ದು. ಸರತಿಯಲ್ಲಿಕುಳಿತ ಮಹಿಳೆಯರು, ಪುರುಷರು ಎದುರಿಗೆ ಮಣೆ ಇಟ್ಟುಕೊಂಡು ಕೈ ಚಕ್ಕುಲಿ ಸುತ್ತಿ ತಮ್ಮ ಕೈ ಚಳಕ ತೋರಿದರು. ಒಮ್ಮೆಲೆ ನೂರಾರು ಮಂದಿ ಚಕ್ಕುಲಿ ಸುತ್ತಿದರು. ಇದು ಈ ತಿನಿಸಿನ ಬಗ್ಗೆ ಕುತೂಹಲ ಹೆಚ್ಚಿಸಿ ಇನ್ನಷ್ಟು ಮಂದಿಗೆ ಪ್ರೇರಣೆಯಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ