ಆ್ಯಪ್ನಗರ

ಮೂಲವ್ಯಾಧಿ ನಿವಾರಣೆಗೆ ಬೆಸ್ಟ್‌ ಈ ಚಪಾತಿ

ಮೂಲವ್ಯಾಧಿ ಕಾಯಿಲೆಗೆ ರಾಮಬಾಣ ಮೂಲಂಗಿ, ಮೂಲಂಗಿ ರಕ್ತ ಶುದ್ಧೀಕರಿಸಲು ಸಹಾಯ ಮಾಡುತ್ತದೆ

ಟೈಮ್ಸ್ ಆಫ್ ಇಂಡಿಯಾ 25 Jul 2017, 1:23 pm
ಮೂಲವ್ಯಾಧಿ ಕಾಯಿಲೆಗೆ ರಾಮಬಾಣ ಮೂಲಂಗಿ, ಮೂಲಂಗಿ ರಕ್ತ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಅದರ ವಾಸನೆ ಇಷ್ಟವಾಗುವುದಿಲ್ಲ. ಅಂಥವರು ಮೂಲಂಗಿ ಚಪಾತಿ ಮಾಡಿ ತಿಂದರೆ ಮೂಲಂಗಿ ವಾಸನೆಯೂ ಇರುವುದಿಲ್ಲ, ಅದರ ಗುಣವನ್ನೂ ಪಡೆಯಬಹುದು.
Vijaya Karnataka Web mooli paratha recipe
ಮೂಲವ್ಯಾಧಿ ನಿವಾರಣೆಗೆ ಬೆಸ್ಟ್‌ ಈ ಚಪಾತಿ


ಬೇಕಾಗುವ ಸಾಮಾಗ್ರಿಗಳು
ಗೋಧಿ ಹಿಟ್ಟು
2-3 ಸಾಧಾರಣ ಗಾತ್ರದ ಮೂಲಂಗಿ(ತುರಿಯಿರಿ)
3 ಚಮಚ ತುಪ್ಪ
ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ
1/4 ಚಮಚ ಅರಿಶಿಣ
ಸ್ವಲ್ಪ ಕರಿಬೇವು (ಚಿಕ್ಕದಾಗಿ ಕತ್ತರಿಸಿದ್ದು)
ಸ್ವಲ್ಪ ಕೊತ್ತಂಬರಿ ಸೊಪ್ಪು (ಚಿಕ್ಕದಾಗಿ ಕತ್ತರಿಸಿದ್ದು)
1 ಈರುಳ್ಳಿ(ಚಿಕ್ಕದಾಗಿ ಕತ್ತರಿಸಿದ್ದು)
ರುಚಿಗೆ ತಕ್ಕ ಉಪ್ಪು
ನೀರು

ಮಾಡುವ ವಿಧಾನ:
* ಗೋಧಿ ಹಿಟ್ಟನ್ನು ಸ್ವಲ್ಪ ದೊಡ್ಡ ಬೌಲ್‌ಗೆ ಹಾಕಿ ಅದರಲ್ಲಿ ಉಳಿದ ಸಾಮಾಗ್ರಿಗಳನ್ನು ಹಾಕಿ ಚಪಾತಿ ಹದಕ್ಕೆ ಕಲಿಸಿ.
* ನಂತರ ಚಪಾತಿಗೆ ಲಟ್ಟಿಸಿ.
*ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ ಚಪಾತಿ ಮಾಡುವಂತೆಯೇ ಎರಡೂ ಬದಿ ಬೇಯಿಸಿ. ಹೀಗೆ ಬೇಯಿಸುವಾಗ ಚಪಾತಿ ಮೇಲೆ ಎಣ್ಣೆ ಸವರಿ.
ರೆಡಿಯಾದ ಚಪಾತಿ ಬಿಸಿ-ಬಿಸಿ ಇರುವಾಗಲೇ ಮೊಸರು ಬಜ್ಜಿ/ಖಾರ ಚಟ್ನಿ/ಉಪ್ಪಿನಕಾಯಿ ಜತೆ ಸವಿಯಿರಿ.

Delicious and mouth-watering, you can enjoy this paratha recipe with curd, pickle or even ghee in breakfast and lunches.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ