ಆ್ಯಪ್ನಗರ

ಪನ್ನೀರ್‌ ಪ್ರಿಯರಿಗಾಗಿ ಪನ್ನೀರ್ ಫಿಂಗರ್ಸ್

ಇವತ್ತಿನ ಸ್ಪೆಷಲ್ ರೆಸಿಪಿ ಪನ್ನೀರ್‌ ಪ್ರಿಯರಿಗಾಗಿ ಪನ್ನೀರ್ ಫಿಂಗರ್ಸ್.

Vijaya Karnataka Web 23 Jul 2017, 5:56 pm
ಇವತ್ತಿನ ಸ್ಪೆಷಲ್ ರೆಸಿಪಿ ಪನ್ನೀರ್‌ ಪ್ರಿಯರಿಗಾಗಿ ಪನ್ನೀರ್ ಫಿಂಗರ್ಸ್. ಫ್ಯಾಮಲಿ, ಫ್ರೆಂಡ್ಸ್‌ ಗೆಟ್‌ ಟುಗೆದರ್‌ ಆದಾಗ ನಿಮ್ಮ ಕೈಚಳಕ ತೋರಿಸಬಹುದು.
Vijaya Karnataka Web paneer finger recipe
ಪನ್ನೀರ್‌ ಪ್ರಿಯರಿಗಾಗಿ ಪನ್ನೀರ್ ಫಿಂಗರ್ಸ್


ಬೇಕಾಗುವ ಸಾಮಾಗ್ರಿಗಳು
ಪನ್ನೀರ್‌
ಅರಿಶಿಣ ಪುಡಿ 1/4 ಚಮಚ
ಉಪ್ಪು
ಖಾರದ ಪುಡಿ ಅರ್ಧ ಚಮಚ
ಮೈದಾ 4 ಚಮಚ
ಜೋಳದ ಹಿಟ್ಟು 2 ಚಮಚ
ನೀರು
ಬ್ರೆಡ್‌ ಚೂರುಗಳು

ಮಾಡುವ ವಿಧಾನ:

1. ಪನ್ನೀರ್‌ ಅನ್ನು ಉದ್ದುದ್ದವಾಗಿ ಕತ್ತರಿಸಿ.

2. ಅದಕ್ಕೆ ಅರಿಶಿಣ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ.

3. ಈಗ ಒಂದು ಪಾತ್ರೆಗೆ ಮೈದಾ ಹಾಗೂ ಜೋಳದ ಹಿಟ್ಟು, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ.

4. ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ.

5. ಈಗ ಪನ್ನೀರ್‌ ಅನ್ನು ಹಿಟ್ಟಿನಲ್ಲಿ ಅದ್ದಿ ನಂತರ ಅದನ್ನು ಬ್ರೆಡ್‌ನ ಚೂರುಗಳಲ್ಲಿ ಹೊರಳಾಡಿಸಿ, ಕಾದ ಎಣ್ಣೆಗೆ ಹಾಕಿ ಫ್ರೈ ಮಾಡಿ ಕಂದು ಬಣ್ಣಕ್ಕೆ ತಿರುಗುವಾಗ ತೆಗೆಯಿರಿ.
ಈಗ ಪನ್ನೀರ್‌ ಫಿಂಗರ್ಸ್‌ ಬಿಸಿ ಬಿಸಿ ಇರುವಾಗ ಟೊಮೆಟೊ ಸಾಸ್‌ ಜತೆ ಸವಿಯಲು ನೀಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ