ಆ್ಯಪ್ನಗರ

ಯಮ್ಮೀ.... ಆಲೂ ಪಾಲಕ್ ಪೈ

ಆಲೂ ಪಾಲಾಕ್‌ ಪೈ ಯಮ್ಮೀ ... ಫುಡ್ ಆಗಿದ್ದು ಇದರ ಸರಳ ರೆಸಿಪಿ ನೋಡಿ ಇಲ್ಲಿದೆ.

Vijaya Karnataka Web 18 Jun 2018, 2:33 pm
ಆಲೂ ಪಾಲಾಕ್‌ ಪೈ ಯಮ್ಮೀ ... ಫುಡ್ ಆಗಿದ್ದು ಇದರ ಸರಳ ರೆಸಿಪಿ ನೋಡಿ ಇಲ್ಲಿದೆ.
Vijaya Karnataka Web palak


ಬೇಕಾಗುವ ಸಾಮಗ್ರಿ

ಅರ್ಧ ಕೆಜಿ ಆಲೂಗಡ್ಡೆ
60 ಗ್ರಾಂ ಚೀಸ್
2 ಮೊಟ್ಟೆ
ಒಂದು ಚಿಕ್ಕ ಕಟ್ಟು ಪಾಲಕ್
ಅರ್ಧ ಚಮಚ ಬೆಣ್ಣೆ
100ml ಫ್ರೆಶ್‌ ಕ್ರೀಮ್
ಅರ್ಧ ಚಮಚ ಕಾಳು ಮೆಣಸಿನ ಪುಡಿ

ಮಾಡುವ ವಿಧಾನ:

ಸ್ಟೆಪ್ 1
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆ ಸುಲಿದು ವೃತ್ತಾಕಾರವಾಗಿ ಮೂರು ಭಾಗಗಳಾಗಿ ಕತ್ತರಿಸಿ.

ಸ್ಟೆಪ್‌ 2
ಪಾಲಕ್‌ ಅನ್ನು ಉಪ್ಪು ನೀರಿನಲ್ಲಿ 30 ನಿಮಿಷ ನೆನೆ ಹಾಕಿ ನಂತರ ತೊಳೆದು, ತಣ್ಣನೆಯ ನೀರಿನಲ್ಲಿ ಹಾಕಿ ಇಡಿ. ನಂತರ ನೀರು ಸೋಸಿ ಅದನ್ನು ಎರಡು ಭಾಗ ಮಾಡಿ.

ಸ್ಟೆಪ್‌ 3
ಈಗ ಚೀಸ್ ತುರಿದು ಮೂರು ಭಾಗ ಮಾಡಿ. ಒಂದು ಬೌಲ್‌ನಲ್ಲಿ ಮೊಟ್ಟೆ ಹಾಕಿ ಚೆನ್ನಾಗಿ ಕದಡಿ. ಈಗ ಕ್ರೀಮ್‌ ಹಾಕಿ, ಚಿಟಿಕೆಯಷ್ಟು ನಟ್‌ಮಗ್‌ ಪುಡಿ, ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕದಡಿ ಆ ಮಿಶ್ರಣವನ್ನು ಮೂರು ಭಾಗ ಮಾಡಿ ಇಡಿ.

ಸ್ಟೆಪ್‌ 4
ಈಗ ಮೈಕ್ರೋವೇವ್ ಅನ್ನು 300 ಡಿಗ್ರಿF ಉಷ್ಣತೆಗೆ ಪ್ರೀಹೀಟ್ ಮಾಡಿ. ಈಗ ಪೈ ಮೌಲ್ಡ್‌ಗೆ ಬೆಣ್ಣೆ ಸವರಿ ಅದರಲ್ಲಿ ಆಲೂಗಡ್ಡೆ ಪೀಸ್‌ಗಳನ್ನು ಇಟ್ಟು, ಅದರ ಮೇಲೆ ಪಾಲಕ್‌ ಸೊಪ್ಪು ಇಟ್ಟು, ಅದರ ಮೇಲೆ ಮೊಟ್ಟೆಯ ಮಿಶ್ರಣವನ್ನು ಹಾಕಿ, ಮೊಟ್ಟೆ ಮಿಶ್ರಣದ ಮೇಲೆ ಚೀಸ್‌ ಉದುರಿಸಿ, ಆಲೂಗಡ್ಡೆ ಬೇಯುವವರೆಗೆ ಬೇಯಿಸಿದರೆ ಆಲೂ ಪಾಲಕ್‌ ಪೈ ರೆಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ