ಆ್ಯಪ್ನಗರ

ತೂಕ ಇಳಿಕೆಗೆ ಆಲೂ ಡಯಟ್

ಅಲ್ಪ ಅವಧಿಯ ಡಯಟ್‌ ಪ್ಲ್ಯಾನ್‌ ಆಗಿರುವ ಇದರಲ್ಲಿ ಮೂರರಿಂದ ಐದು ದಿನಗಳವರೆಗೆ ಆಲೂಗೆಡ್ಡೆಯನ್ನು ಬಿಟ್ಟು ಬೇರೆ ಏನನ್ನೂ ತಿನ್ನಬಾರದು.

Vijaya Karnataka Web 7 Apr 2019, 3:51 pm
ದೇಹದ ತೂಕ ಇಳಿಸಲು ಐದು ದಿನಗಳ ಕಾಲ ಆಲೂಗಡ್ಡೆ ಡಯಟ್‌ ಮಾಡುವ ಟ್ರೆಂಡೊಂದು ಇತ್ತೀಚೆಗೆ ಜನಪ್ರಿಯವಾಗಿದೆ. ಕಾರ್ಬೊಹೈಡ್ರೇಟ್ಸ್‌ನ ಆಗರವಾಗಿರುವ ಆಲೂಗೆಡ್ಡೆಯ ಡಯಟ್‌ ಮಾಡಿರುವುದರಿಂದ ತಮ್ಮ ದೇಹ ತೂಕದಲ್ಲಾದ ಗಮನಾರ್ಹ ಬದಲಾವಣೆಗಳನ್ನು ಅನೇಕ ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Vijaya Karnataka Web aloo


ಅಲ್ಪ ಅವಧಿಯ ಡಯಟ್‌ ಪ್ಲ್ಯಾನ್‌ ಆಗಿರುವ ಇದರಲ್ಲಿ ಮೂರರಿಂದ ಐದು ದಿನಗಳವರೆಗೆ ಆಲೂಗೆಡ್ಡೆಯನ್ನು ಬಿಟ್ಟು ಬೇರೆ ಏನನ್ನೂ ತಿನ್ನಬಾರದು. ಈ ಡಯಟ್‌ ಮಾಡುವವರು ದಿನವೊಂದಕ್ಕೆ ಕೇವಲ 1ರಿಂದ 2 ಕೆ.ಜಿಯವರೆಗೆ ಆಲೂಗೆಡ್ಡೆಯನ್ನು ಮಾತ್ರ ತಿನ್ನಬೇಕು. ಅದಕ್ಕೆ ಪುಡಿ ಉಪ್ಪಿಗಿಂತ ಕಲ್ಲುಪ್ಪು ಉದುರಿಸಿ ತಿಂದರೆ ಇನ್ನೂ ಉತ್ತಮ ಫಲಿತಾಂಶ ಪಡೆಯಬಹುದು.

ದ್ರವ ಆಹಾರಗಳಿಗೆ ಹಾಲು ಮತ್ತು ಸಕ್ಕರೆ ಹಾಕದ ಬ್ಲ್ಯಾಕ್‌ ಟೀ ಅಥವಾ ಹರ್ಬಲ್‌ ಟೀ ಕುಡಿಯಬಹುದು. ಆಲೂಗೆಡ್ಡೆ ತಿಂದರೆ ತುಂಬಾ ಸಮಯದವರೆಗೆ ಹೊಟ್ಟೆ ತುಂಬಿರುತ್ತದೆ. ಇದರಿಂದ ಆಗಾಗ ಹಸಿವಾಗದೆ ನೀವು ತಿನ್ನುವ ಪ್ರಮಾಣವೂ ಕಡಿಮೆಯಾಗುತ್ತದೆ. ಅವಧಿಯಲ್ಲಿ ಆಲೂಗೆಡ್ಡೆಯನ್ನು ಬೇಯಿಸಿ ಮೃದುಗೊಳಿಸಿ ತಿನ್ನಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ