ಆ್ಯಪ್ನಗರ

ಸಂಕ್ರಾಂತಿಯಲ್ಲಿ ಎಳ್ಳು , ಸಕ್ಕರೆ ಅಚ್ಚು

ಸಂಕ್ರಾಂತಿ ಹಬ್ಬದಲ್ಲಿ ಎಳ್ಳಿನ ಬಳಕೆ ಹೆಚ್ಚಿರುತ್ತದೆ ಈ ಎಳ್ಳು ಹಲವು ಪೌಷ್ಟಿಕಾಂಶಗಳ ಆಗರವಾಗಿದೆ ಇದರ ಕೆಲವು ಪ್ರಯೋಜನಗಳು ಇಂತಿವೆ...

Vijaya Karnataka Web 13 Jan 2017, 5:00 am

* ಎಳ್ಳೆಣ್ಣೆಗೆ ಚೂರು ಅರಶಿಣ ಹಾಕಿ ಚೆನ್ನಾಗಿ ಬಿಸಿ ಮಾಡಿ ನೆತ್ತಿಗೆ ಉಜ್ಜಿ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

* ಕರಿ ಎಳ್ಳು ಉಪಯೋಗಿಸಿ ಉಂಡೆ ಮಾಡಿದರೆ ತಿನ್ನಲು ಹೆಚ್ಚು ರುಚಿ.

* ಟೇಸ್ಟಿ ಎಳ್ಳಿನ ಬಿಸ್ಕತ್‌ ಕೇಕ್‌ ತಿನ್ನಲು ಬಹಳ ರುಚಿ. ಇದು ಮಕ್ಕಳಿಗೆ ಹೆಚ್ಚು ಪ್ರಿಯ.

* ಸ್ವಾದಿಷ್ಟ ಎಳ್ಳಿನ ಬಾಸುಂದಿಗೆ ಸಕ್ಕರೆ ಬದಲು ಬೆಲ್ಲ ಹಾಕಬಹುದು. ಆದರೆ ಕಲರ್‌ ಸ್ವಲ್ಪ ಚೇಂಜ್‌ ಆಗುತ್ತದೆ.

* ಎಳ್ಳು ಬೆಲ್ಲದ ಸ್ಪೆಷಲ್‌ ಡೇಟ್ಸ್‌ ಬಾಲ್‌ಗಳನ್ನು ಒಂದು ವಾರ ಇಟ್ಟು ಉಪಯೋಗಿಸಬಹುದು.

Vijaya Karnataka Web sankranthi ellu special
ಸಂಕ್ರಾಂತಿಯಲ್ಲಿ ಎಳ್ಳು , ಸಕ್ಕರೆ ಅಚ್ಚು


ಪಾಕ ರಹಿತ ಸಕ್ಕರೆ ಅಚ್ಚು

ಸಂಕ್ರಾತಿ ಹಬ್ಬಕ್ಕೆ ಬೆರಕೆ ಎಳ್ಳು, ಸಕ್ಕರೆ ಅಚ್ಚು ಮಾಡುವ ಸಂಭ್ರಮ ಎಲ್ಲೆಡೆ ಮನೆ ಮಾಡಿರುತ್ತದೆ. ಈ ಸಕ್ಕರೆ ಅಚ್ಚು ಮಾಡಲು ಹದವಾಗಿ ಪಾಕ ಮಾಡಬೇಕು. ಇಲ್ಲವಾದರೆ ಅದು ಮುರಿಯುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲಿ ನಿಮಗೆ ಒಲೆ ಹಚ್ಚದೆ, ಸಕ್ಕರೆ ಪಾಕ ಮಾಡದೆ ಸರಾಗವಾಗಿ ಅತಿ ಕಡಿಮೆ ಸಮಯದಲ್ಲಿ ವಿವಿಧ ರೀತಿಯ ಅಚ್ಚು ಮಾಡುವ ವಿಧಾನ ತಿಳಿಸಲಾಗಿದೆ.

ಸಾಮಗ್ರಿ: ಸಕ್ಕರೆ ಪುಡಿ, ಮರದ ಅಚ್ಚು, ಸ್ವಲ್ಪ ತುಪ್ಪ, ಸ್ವಲ್ಪ ಹಾಲು.

ವಿಧಾನ: ಸಕ್ಕರೆ ಪುಡಿಯನ್ನು ಒಂದು ಬೌಲ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಬೆಚ್ಚನೆಯ ಹಾಲು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಬಳಿಕ ಮರದ ಅಚ್ಚುಗಳಿಗೆ ಸ್ವಲ್ಪ ತುಪ್ಪ ಸವರಿ, ಕೈಗೂ ಸ್ವಲ್ಪ ತುಪ್ಪ ಸವರಿಕೊಂಡು ಸಕ್ಕರೆ ಮಿಕ್ಸನ್ನು ಅಚ್ಚುಗಳಿಗೆ ಹಾಕಿ ಚೆನ್ನಾಗಿ ಪ್ರೆಸ್‌ ಮಾಡಿ ಸ್ವಲ್ಪ ಸಮಯದ ನಂತರ ಸೂಜಿ ಅಥವಾ ಪಿನ್‌ನ ಸಹಾಯದಿಂದ ಸುತ್ತಲೂ ನಿಧಾನವಾಗಿ ತೆಗೆದು ತಟ್ಟೆಯಲ್ಲಿ ಆರಲು ಬಿಡಿ. ನಂತರ ಡಬ್ಬದಲ್ಲಿ ಹಾಕಿ.
* ಎಳ್ಳು ಬೆಲ್ಲದ ಡೇಟ್ಸ್‌ ಬಾಲ್ಸ್‌ಗೆ ಗೋಡಂಬಿ ಬಾದಾಮಿ ಪೀಸ್‌ ಮಾಡಿ ಸೇರಿಸಬಹುದು.

-ಉಮಾ ಸರ್ವೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ