ಆ್ಯಪ್ನಗರ

ಶಾಂಘೈ ನಗರದಲ್ಲಿ ನಗುವ ಕಲ್ಲಂಗಡಿ

ಚೀನಾದ ಶಾಂಘೈ ನಗರದಲ್ಲಿರುವ ಹಣ್ಣಿನ ಮಾರುಕಟ್ಟೆಗೆ ಹೋದರೆ ಅಲ್ಲಿ ನಗು ಬೀರುವ ಕಲ್ಲಂಗಡಿ ಹಣ್ಣು, ಕರ್ಬೂಜ ಹಣ್ಣುಗಳು ನಿಮ್ಮನ್ನು ...

Vijaya Karnataka 18 May 2019, 5:00 am
ಚೀನಾದ ಶಾಂಘೈ ನಗರದಲ್ಲಿರುವ ಹಣ್ಣಿನ ಮಾರುಕಟ್ಟೆಗೆ ಹೋದರೆ ಅಲ್ಲಿ ನಗು ಬೀರುವ ಕಲ್ಲಂಗಡಿ ಹಣ್ಣು, ಕರ್ಬೂಜ ಹಣ್ಣುಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅದನ್ನು ನೋಡಿದ ತಕ್ಷ ಣ ಕೊಂಡು ತಿನ್ನಬೇಕು ಎಂದು ಅನಿಸುತ್ತದೆ. ಕಲ್ಲಂಗಡಿ ಹಣ್ಣನ್ನು ಗ್ರಾಹಕರಿಗೆ ಇನ್ನಷ್ಟು ಹತ್ತಿರವನ್ನಾಗಿಸಲು ಮತ್ತು ಅದು ಆಕರ್ಷಕವಾಗಿ ಕಾಣುವಂತೆ ಮಾಡಲು ಅಲ್ಲಿನ ಹಣ್ಣಿನ ವ್ಯಾಪಾರಿಗಳು ಕಂಡುಕೊಂಡಿರುವ ಹೊಸ ವಿಧಾನವಿದು. ಅವರು ಕಲ್ಲಂಗಡಿ, ಕರ್ಬೂಜ ಮುಂತಾದ ಹಣ್ಣುಗಳನ್ನು ಅರ್ಧಕ್ಕೆ ಕತ್ತರಿಸಿ ಅದಕ್ಕೆ ಸ್ಮೈಲಿ ಮತ್ತು ಕಣ್ಣುಗಳ ಸ್ಟಿಕ್ಕರ್‌ಗಳಿರುವ ತೆಳು ಪಾರದರ್ಶಕ ಹಾಳೆಯನ್ನು ಮುಚ್ಚಿ ಹಣ್ಣಿನ ಸ್ಟಾಲ್‌ಗಳಲ್ಲಿ ಇಡುತ್ತಾರೆ. ತಕ್ಷ ಣ ನೋಡುವಾಗ ಇದು ನಗುವ ಹಣ್ಣುಗಳಂತೆ ಭಾಸವಾಗುತ್ತದೆ. ಈ ಸ್ಮೈಲಿಂಗ್‌ ಫೇಸ್‌ ಕಲ್ಲಂಗಡಿ ಹಣ್ಣುಗಳು ಶಾಂಘೈ ನಗರದಲ್ಲಿ ತುಂಬಾ ಪ್ರಸಿದ್ಧವಾಗಿವೆ. ಇದರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.
Vijaya Karnataka Web water melon-1

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ