ಆ್ಯಪ್ನಗರ

ಕಲ್ಲಂಗಡಿ ಹಣ್ಣಿನಲ್ಲಷ್ಟೇ ಅಲ್ಲ, ಬೀಜದಲ್ಲೂ ಇದೆ ಆರೋಗ್ಯ

ಯಥೇಚ್ಛ ನೀರಿನಂಶದ ಆಗರವಾಗಿರುವ ಕಲ್ಲಂಗಡಿ ಹಣ್ಣಿನ ಕೆಂಪು ತಿರುಳು ಮಾತ್ರವಲ್ಲದೆ, ಅದರ ಕಪ್ಪು ಬೀಜವೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

Agencies 12 May 2019, 2:48 pm
ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ತಿಂದ ಬಳಿಕ ಅದರ ಬೀಜಗಳನ್ನು ಬೀಸಾಡಲಾಗುತ್ತದೆ. ಆದರೆ ಈ ಪುಟ್ಟ ಕಪ್ಪು ಬೀಜವೂ ಪೌಷ್ಟಿಕಾಂಶಗಳ ಆಗರವಾಗಿದೆ ಎಂದು ಬಹುತೇಕ
Vijaya Karnataka Web Water Melon

ಜನರಿಗೆ ಗೊತ್ತಿಲ್ಲ. ಅತ್ಯಂತ ಕಡಿಮೆ ಕ್ಯಾಲೊರಿ ಇರುವ ಕಲ್ಲಂಗಡಿ ಬೀಜದಲ್ಲಿ ಸತು, ತಾಮ್ರ, ಪೊಟಾಷಿಯಂ, ಮೆಗ್ನೀಷಿಯಂ, ಕಬ್ಬಿಣ, ಫಾರೆಲ್‌ ಮುಂತಾದ ಪೋಷಕಾಂಶಗಳಿವೆ. ಈ ಬೀಜವನ್ನು ಸೂಕ್ತ ರೀತಿಯಲ್ಲಿ ಸೇವಿಸಿದರೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಹೃದಯದ ಆರೋಗ್ಯಕ್ಕೆ ಬೆಸ್ಟ್‌: ಕಲ್ಲಂಗಡಿ ಬೀಜದಲ್ಲಿ ಮೆಗ್ನೇಷಿಯಂ ಪ್ರಮಾಣ ಅಧಿಕವಾಗಿರುವುದರಿಂದ ಈ ಬೀಜದ ಸೇವನೆಯಿಂದ ಹೈಪರ್‌ಟೈನ್ಷನ್‌ ದೂರವಾಗಿ ಹೃದಯ ಆರೋಗ್ಯವಾಗಿರುತ್ತದೆ. ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಈ ಬೀಜ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಮೂಳೆ ಸದೃಢವಾಗುತ್ತದೆ: ಈ ಬೀಜದಲ್ಲಿ ತಾಮ್ರ, ಮ್ಯಾಂಗನೀಸ್‌ ಮತ್ತು ಪೊಟಾಷಿಯಂ ಇದ್ದು, ಇವು ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಮೂಳೆಯ ಸಾಂದ್ರತೆಯನ್ನು ವರ್ಧಿಸುತ್ತದೆ.

ಚಯಾಪಚಯ ಕ್ರಿಯೆ ಹೆಚ್ಚಳ: ಫಾಲೆಟ್‌, ಕಬ್ಬಿಣ, ಸತು, ತಾಮ್ರ, ಮೆಗ್ನೀಷಿಯಂ, ಪೊಟಾಷಿಯಂಗಳ ಪವರ್‌ಹೌಸ್‌ ಆಗಿರುವ ಕಲ್ಲಂಗಡಿ ಬೀಜದಲ್ಲಿ ಅಮಿನೊ ಆಮ್ಲ, ಪ್ರೊಟೀನ್‌ ಮತ್ತು ವಿಟಮಿನ್‌ ಬಿ ಕೂಡಾ ಹೆಚ್ಚಿದ್ದು ಇವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಆರೋಗ್ಯಕರ ಕೊಬ್ಬು: ಈ ಬೀಜದಲ್ಲಿ ದೇಹಕ್ಕೆ ಉತ್ತಮವಾಗಿ ಪರಿಣಮಿಸುವ ಕೊಬ್ಬಿದೆ. ಒಲೈಕ್‌ ಆಮ್ಲ, ಲಿನೊಲಿಯಂ ಆಮ್ಲ ಮುಂತಾದ ಹೆಲ್ದಿ ಕೊಬ್ಬುಗಳ ಮೂಲವಾಗಿರುವ ಕಲ್ಲಂಗಡಿ ಬೀಜ ದೇಹದ ಕಾರ್ಯಕ್ಷಮತೆಯನ್ನು ಜಾಸ್ತಿ ಮಾಡುತ್ತದೆ.

ಮಧುಮೇಹಿಗಳಿಗೆ ಬೆಸ್ಟ್‌:
ರಕ್ತದಲ್ಲಿ ಹೆಚ್ಚಿದ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವ ಗುಣವಿರುವ ಕಲ್ಲಂಗಡಿ ಬೀದ ಸೇವನೆ ಮಧುಮೇಹವನ್ನು ನಿಯಂತ್ರಿಸಲು ತುಂಬಾ ಸಹಕಾರಿಯಾಗಿದೆ. ಮಧುಮೇಹಿಗಳು ಇದು ಉತ್ತಮ ಸ್ನ್ಯಾಕ್ಸ್‌ ಕೂಡಾ ಹೌದು.

ತ್ವಚೆಯ ಕಾಂತಿ ಹೆಚ್ಚಿಸುತ್ತದೆ
: ಕಾಸ್ಮೆಟಿಕ್‌ ಉತ್ಪನ್ನಗಳಿಗೆ ಕಲ್ಲಂಗಡಿ ಬೀಜದ ಎಣ್ಣೆಯನ್ನು ಹೆಚ್ಚು ಬಳಸುತ್ತಾರೆ. ಈ ಎಣ್ಣೆಯಲ್ಲಿ ಮೊಡವೆ ಮತ್ತು ಅಕಾಲಿಕವಾಗಿ ವಯಸ್ಸಾಗುವ ಲಕ್ಷ ಣಗಳನ್ನು ಕಡಿಮೆ ಮಾಡುವ ಗುಣವಿದೆ.

ಕೂದಲಿನ ಆರೋಗ್ಯಕ್ಕೆ ಉತ್ತಮ:
ಈ ಬೀಜದಲ್ಲಿ ಪ್ರೊಟೀನ್‌ ಮತ್ತು ಕಬ್ಬಿಣ ಹೆಚ್ಚಿರುವುದರಿಂದ ಇದರ ಸೇವನೆಯಿಂದ ಕೂದಲಿನ ಆರೋಗ್ಯ ಹೆಚ್ಚಿ ದಟ್ಟವಾಗಿ ಬೆಳೆಯುತ್ತದೆ. ಇದು ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ. ಇದರಲ್ಲಿ ಮೆಗ್ನೇಷಿಯಂ ಅಧಿಕವಾಗಿರುವುದರಿಂದ ಇದು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.

ಬೀಜದ ಬಳಕೆ ಹೀಗಿರಲಿ


ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ನಂತರ ಹುರಿದು ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಡಿ. ಹಸಿವಾದಾಗ ಇದನ್ನು ಸ್ನ್ಯಾಕ್ಸ್‌ನಂತೆ ತಿನ್ನಬಹುದು ಅಥವಾ ಸಲಾಡ್‌, ಐಸ್‌ಕ್ರೀಮ್‌ಗಳ ಮೇಲೆ ಉದುರಿಸಿಕೊಂಡು ಮತ್ತು ಇತರ ಡ್ರೈನಟ್ಸ್‌ ಜತೆ ಸೇರಿಸಿ ತಿನ್ನಬಹುದು. ಬೀಜ ತಿನ್ನಲು ಇಷ್ಟವಿಲ್ಲದಿದ್ದರೆ ಅದನ್ನು ಪುಡಿ ಮಾಡಿ ಸೇವಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ