ಆ್ಯಪ್ನಗರ

ವಿಸ್ಕಿ ಪ್ರಿಯ ಭಾರತೀಯರು

ಅಮೆರಿಕದ ಹೊಸ ಸಮೀಕ್ಷಾ ವರದಿಯೊಂದು ಭಾರತದಲ್ಲಿ ವಿಸ್ಕಿ ಸೇವನೆಯ ಪ್ರಮಾಣದ ಇಡೀ ಜಗತ್ತಿನಲ್ಲೇ ಹೆಚ್ಚಂತೆ...

Vijaya Karnataka 6 Jul 2019, 5:00 am
ಅಮೆರಿಕದ ಹೊಸ ಸಮೀಕ್ಷಾ ವರದಿಯೊಂದು ಭಾರತದಲ್ಲಿ ವಿಸ್ಕಿ ಸೇವನೆಯ ಪ್ರಮಾಣದ ಇಡೀ ಜಗತ್ತಿನಲ್ಲೇ ಹೆಚ್ಚಂತೆ. ಜಗತ್ತಿನ ಒಟ್ಟು ವಿಸ್ಕಿ ಉತ್ಪಾದನೆಯ ಅರ್ಧದಷ್ಟು ಪ್ರಮಾಣವನ್ನು ಭಾರತೀಯರೇ ಕುಡಿಯುತ್ತಾರಂತೆ. ಬ್ಯಾಂಕ್‌ ಆಫ್‌ ಅಮೆರಿಕ ಮೆರ್ರಿಲ್‌ ಲಿಂಚ್‌ ನಡೆಸಿರುವ ಈ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಪ್ರತಿವರ್ಷ ವಿಸ್ಕಿ ಸೇವನೆಯ ಪ್ರಮಾಣ 15 ಶತಕೋಟಿ ಲೀಟರ್‌! ಹೆಚ್ಚು ವಿಸ್ಕಿ ಸೇವಿಸುವ ಜನರಿರುವ ದೇಶಗಳ ಪೈಕಿ ಭಾರತ ಟಾಪ್‌ನಲ್ಲಿದ್ದರೆ, ಅದರ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ, ಫ್ರಾನ್ಸ್‌ ಮತ್ತು ಜಪಾನ್‌ ಇವೆ. ವಿಸ್ಕಿ ಸೇವನೆಯ ಪ್ರಮಾಣ ಅಮೆರಿಕದಲ್ಲಿ 462 ದಶಲಕ್ಷ ಲೀಟರ್‌, ಫ್ರಾನ್ಸ್‌ನಲ್ಲಿ 140 ದಶಲಕ್ಷ ಲೀಟರ್‌, ಜಪಾನ್‌ನಲ್ಲಿ 109 ದಶಲಕ್ಷ ಲೀಟರ್‌ ಇದೆ. ಕೆಲವು ಆರೋಗ್ಯ ತಜ್ಞರ ಪ್ರಕಾರ, ವಿಸ್ಕಿಯನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ದೇಹದಲ್ಲಿ ಶಕ್ತಿ ಸಂಚಯವಾಗಿ ಸಕ್ಕರೆಭರಿತ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆ ಕಡಿಮೆಯಾಗುತ್ತದೆ. ನೆಗಡಿ ಕೂಡಾ ಇದರಿಂದ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
Vijaya Karnataka Web whiskey-2

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ