ಆ್ಯಪ್ನಗರ

ಡೆಂಗ್ಯೂ ರೋಗ ಲಕ್ಷಣಗಳು? ತಡೆಯೋದು ಹೇಗೆ?

ಅಕಾಲಿಕ ಮಳೆ, ಬಿಸಿಲು. ಇದರದ್ದೇ ಆಟ. ಹವಾಮಾನದಲ್ಲಾಗುವ ಇಂಥ ವೈಪರಿತ್ಯಗಳಿಂದಲೇ ಸೃಷ್ಟಿಯಾಗುತ್ತೆ ಸೊಳ್ಳೆ. ಇದರಿಂದಲೇ ಡೆಂಗ್ಯೂನಂಥ ರೋಗಗಳೂ ನಮ್ಮನ್ನು ಕಾಡುತ್ತೆ. ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಇದೂ ಒಂದು.

Vijaya Karnataka Web 29 Aug 2017, 11:41 am
ಅಕಾಲಿಕ ಮಳೆ, ಬಿಸಿಲು. ಇದರದ್ದೇ ಆಟ. ಹವಾಮಾನದಲ್ಲಾಗುವ ಇಂಥ ವೈಪರಿತ್ಯಗಳಿಂದಲೇ ಸೃಷ್ಟಿಯಾಗುತ್ತೆ ಸೊಳ್ಳೆ. ಇದರಿಂದಲೇ ಡೆಂಗ್ಯೂನಂಥ ರೋಗಗಳೂ ನಮ್ಮನ್ನು ಕಾಡುತ್ತೆ. ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಇದೂ ಒಂದು.
Vijaya Karnataka Web dengue causes symptoms and prevention
ಡೆಂಗ್ಯೂ ರೋಗ ಲಕ್ಷಣಗಳು? ತಡೆಯೋದು ಹೇಗೆ?


ನಾನಾ ತರಹದ ಸೊಳ್ಳೆಗಳು ಕಚ್ಚುವುದರಿಂದ ಹರಡುವ ಈ ಡೆಂಗ್ಯೂಗೆ ಇಂಥದ್ದೇ ರೋಗ ಲಕ್ಷಣವೆಂಬುವುದು ಇಲ್ಲ. ಸುಮಾರು ಮೂರು ದಿನಗಳಿಂದ ವಾರದವರೆಗೆ ಕಾಡುವ ಈ ವೈರಲ್ ಸೋಂಕು, ಗುಣವಾಗಲು ಮತ್ತೊಂದು ವಾರ ತೆಗೆದುಕೊಳ್ಳುತ್ತದೆ. ಅಕಸ್ಮಾತ್ ಉಲ್ಬಣಗೊಂಡರೆ, ಮಾರಾಣಾಂತಿಕವೂ ಹೌದು.

ರೋಗ ಲಕ್ಷಣಗಳೇನು?

- ವಿಪರೀತ ಜ್ವರ

- ನಿರಂತರ ಬೆವರೋದು

- ತಲೆಸುತ್ತು, ವಾಂತಿ

- ಜೀರ್ಣ ಶಕ್ತಿ ಕುಂದುವುದು

- ಚರ್ಮದ ಮೇಲೆ ಗುಳ್ಳೆಗಳು

- ರಕ್ತದೊತ್ತಡದಲ್ಲಿ ಏರುಪೇರು

- ಕೈ ಹಾಗೂ ಕಾಲಿನ ಹಿಮ್ಮಡಿ ಊತ

- ಜ್ವರ ಮುಂದುವರಿದರೆ, ರಕ್ತದ ಪ್ಲೇಟ್‌ಲೆಟ್, ಪ್ಲಾಸ್ಮಾ ಕಣಗಳು ಕಡಿಮೆಯಾಗುವ ಸಾಧ್ಯತೆಯೂ ಇದೆ. ಇದರಿಂದ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದು ಬಿಡಬಹುದು.

ತಡೆಯೋದು ಹೇಗೆ?

ಸಾಮಾನ್ಯವಾಗಿ ಮುಂಜಾನೆ ಹಾಗೂ ಸಂಜೆ ಕಚ್ಚುವ ಸೊಳ್ಳೆಯಿಂದ ಈ ರೋಗ ಹರರಡೋದು ಜಾಸ್ತಿ. ಸೊಳ್ಳೆಯಿಂದ ದೂರವಿದ್ದರೆ ಒಳಿತು. ಉಷ್ಣ ವಲಯದಲ್ಲಿ ಈ ರೋಗ ಹರಡುವ ಸಾಧ್ಯತೆ ಹೆಚ್ಚಿದ್ದು, ಇಂಥ ಪ್ರದೇಶಗಳಿಗೆ ಹೋಗುವುದನ್ನೇ ನಿಲ್ಲಿಸಿದರೊಳಿತು. ಸೊಳ್ಳೆ ಉತ್ಪನ್ನವಾಗದ ಹಾಗೆ ಎಚ್ಚರ ವಹಿಸಿ.

ಇನ್ನೇನು ಮಾಡಬಹುದು?

- ತ್ಯಾಜ್ಯ ವಿಲೇವಾರಿ ಸುಸೂತ್ರವಾಗಿರಲಿ.

- ನೀರು ಮನೆ ಸುತ್ತಮುತ್ತ ಎಲ್ಲಿಯೂ ನಿಲ್ಲದಂತೆ ನೋಡಿಕೊಳ್ಳಿ.

- ಸೊಳ್ಳೆ ಕಚ್ಚದ ಹಾಗೆ ಏನೇನು ಮಾಡಬಹುದೋ ಎಲ್ಲವನ್ನೂ ಮಾಡಿ. ಕೆಲವು ರಾಸಾಯನಿಕಗಳನ್ನು ಬಳಸುವಾಗ ಅದರ ಮೇಲಿರುವ ವಾರ್ನಿಂಗ್ ಓದಲು ಮರೆಯದಿರಿ.

- ಸೊಳ್ಳೆ ಕಚ್ಚದಂತೆ ತಿಳಿ ಬಣ್ಣದ ಹಾಗೂ ಪೂರ್ತಿ ತೋಳಿರುವ ಬಟ್ಟೆಗಳನ್ನು ಧರಿಸಿ.

- ನೈಸರ್ಗಿಕ ಸೊಳ್ಳೆ ಔಷಧಿಗಳನ್ನು ಬಳಸಿದರೆ ಒಳ್ಳೆಯದು. ಸಂಜೆ ವೇಳೆ ಮನೆಯಲ್ಲಿ ಬೇವಿನ ಹೊಗೆ ಹಾಕಿದರೆ ಸೊಳ್ಳೆ ಓಡಿಸೋದು ಸುಲಭ.

ಇನ್ಫೋಗ್ರಾಫಿಕ್ಸ್: ಡೆಂಗ್ಯೂ Vs ಚಿಕುನ್‌ಗುನ್ಯಾ ಈ ಲೇಖನವನ್ನು ಇಂಗ್ಲಿಷ್‌ನಲ್ಲಿ ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ