ಆ್ಯಪ್ನಗರ

ಮನೆಯಲ್ಲಿ ಇಲ್ಲದಾಗ ಗಿಡಗಳ ಆರೈಕೆ

ನಿಮ್ಮ ಮನೆಯಲ್ಲಿರುವ ಗಿಡಗಳಿಗೆ ತುಂಬಾ ದಿನಗಳವರೆಗೆ ನೀರು ಹಾಕಲು ಸಾಧ್ಯವಾಗದಿದ್ದರೆ ಆದಷ್ಟು ತೇವಾಂಶವನ್ನು ಉಳಿಸಿಕೊಳ್ಳುವ ಪಾಲಿಮರ್‌ ...

Vijaya Karnataka Web 6 May 2017, 5:30 am

-ನಿಮ್ಮ ಮನೆಯಲ್ಲಿರುವ ಗಿಡಗಳಿಗೆ ತುಂಬಾ ದಿನಗಳವರೆಗೆ ನೀರು ಹಾಕಲು ಸಾಧ್ಯವಾಗದಿದ್ದರೆ ಆದಷ್ಟು ತೇವಾಂಶವನ್ನು ಉಳಿಸಿಕೊಳ್ಳುವ ಪಾಲಿಮರ್‌ ಕುಂಡಗಳನ್ನು ಕೊಳ್ಳುವುದು ಒಳ್ಳೆಯದು. ಪಾಲಿಮರ್‌ಗಳು ನೀರನ್ನು ತುಂಬಾ ದಿನಗಳ ಕಾಲ ಹಿಡಿದಿಟ್ಟುಕೊಳ್ಳುತ್ತವೆ.

-ನೀವು ದೀರ್ಘಾವಧಿಗೆ ಹೊರಗಡೆ ಹೋಗುತ್ತಿದ್ದರೆ ನಿಮ್ಮ ಗಿಡಗಳನ್ನು ಸ್ವಲ್ಪ ಸುರಕ್ಷಿತವಾದ ಸ್ಥಳದಲ್ಲಿ ಇರಿಸಿ. ದೀರ್ಘ ಕಾಲದವರೆಗೆ ಸೂರ್ಯನ ಕಿರಣಗಳು ನೇರವಾಗಿ ಇದಕ್ಕೆ ಬೀಳದಂತೆ ನೋಡಿಕೊಳ್ಳಿ.

Vijaya Karnataka Web garden care when going to outing
ಮನೆಯಲ್ಲಿ ಇಲ್ಲದಾಗ ಗಿಡಗಳ ಆರೈಕೆ

-ಆದರೆ ಈ ಗಿಡಗಳಿಗೆ ಅಗತ್ಯವಾದ ಸೂರ್ಯನ ಕಿರಣಗಳು ದೊರೆಯುತ್ತದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಇದಕ್ಕಾಗಿ ನೀವು ಗಿಡಗಳನ್ನು ತೆಳುವಾದ ಪರದೆಗಳು ಹಾಕಿರುವ ಕಿಟಕಿಯ ಪಕ್ಕದಲ್ಲಿ ಇಟ್ಟು ಹೋಗಬಹುದು.

-ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ಗಿಡಗಳನ್ನು ಮನೆಯ ಒಳಗೆ ಇಟ್ಟು ತುಂಬಾ ದಿನ ಮನೆಯಿಂದ ಹೊರಗೆ ಹೋಗಬೇಡಿ. ಋುತುಗಳಿಗೆ ತಕ್ಕಂತೆ ಗಿಡಗಳು ಬೆಳೆಯಲು ಅವಕಾಶ ಮಾಡಿಕೊಡಿ.

-ಗಿಡಗಳನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ನೆರೆ-ಹೊರೆಯವರ ಸಹಾಯವನ್ನು ಪಡೆಯಲು ಹಿಂದೆ ಮುಂದೆ ನೋಡಬೇಡಿ. ಅವರು ಬಂದು ನಿಮ್ಮ ಗಿಡಗಳಿಗೆ ನೀರು ಹಾಕಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿ.

-ಅವರು ಒಪ್ಪಿದರೆ ನಿಮ್ಮ ಮನೆಯ ಗಿಡಗಳನ್ನು ತಾತ್ಕಾಲಿಕವಾಗಿ ಅವರ ಮನೆಗೆ ವರ್ಗಾಯಿಸಲು ಸಂಕೋಚ ಪಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಪ್ರೀತಿ ಪಾತ್ರ ಗಿಡಗಳಿಗೆ ನೀವು ರಕ್ಷ ಣೆಯನ್ನು ಒದಗಿಸಿದಂತಾಗುತ್ತದೆ.

-ಇದರಿಂದ ನೀವು ಕೂಡಾ ನಿಮ್ಮ ಪ್ರವಾಸವನ್ನು ನೆಮ್ಮದಿಯಾಗಿ ಮುಗಿಸಿಕೊಂಡು ಬರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ