ಆ್ಯಪ್ನಗರ

ಜ್ಯೂಸ್‌ ಮೇಲಿನ ಅವಲಂಬನೆ ಅಪಾಯ

ಬೇಸಿಗೆಯಲ್ಲಿ ಜ್ಯೂಸ್‌ ಕುಡಿಯಬೇಕು ಅನ್ಸತ್ತಾ? ಹಾಗಂತ ಸಿಕ್ಕಾಪಟ್ಟೆ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.

Vijaya Karnataka Web 12 Apr 2017, 8:26 pm

ಬೇಸಿಗೆಯಲ್ಲಿ ಜ್ಯೂಸ್‌ ಕುಡಿಯಬೇಕು ಅನ್ಸತ್ತಾ? ಹಾಗಂತ ಸಿಕ್ಕಾಪಟ್ಟೆ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಯಾಕೆ ಗೊತ್ತಾ? ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಹಣ್ಣಿನ ಜ್ಯೂಸ್‌ ಆರು ವರ್ಷದ ಮಕ್ಕಳಲ್ಲಿ ತೂಕ ಹೆಚ್ಚುವ ಸಾಧ್ಯತೆ ಇದೆಯಂತೆ. ಮಗು ದಪ್ಪವಾಗಲಿ ಅಥವಾ ಜ್ಯೂಸ್‌ ಕುಡಿದು ಆರೋಗ್ಯವಂತವಾಗಿರಲಿ ಎನ್ನುವ ಕಾರಣಕ್ಕೆ ದಿನಪೂರ್ತಿ ಜ್ಯೂಸ್‌ ಕೊಡಬೇಡಿ. ಅದರಲ್ಲಿರುವ ಸಕ್ಕರೆ ಅಂಶ ಮಕ್ಕಳ ದೈಹಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನೀರನ್ನು ಕೊಡಿ. ಸಕ್ಕರೆ ಮಿಶ್ರಿತ ಜ್ಯೂಸ್‌ ಬದಲು ಹಣ್ಣನ್ನು ತಿನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ