ಆ್ಯಪ್ನಗರ

ಒಡಲಿನಾಚೆ ಜೀವಾಂಕುರ

ಐವಿಎಫ್ ಇವತ್ತಿನದ್ದಲ್ಲ. ಹಲವಾರು ದಶಕಗಳಿಂದ ಕೃತಕ ಗರ್ಭಧಾರಣೆಗೆ ಪೂರಕವಾಗಿರುವ ಇಂಥದ್ದೊಂದು ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ಏರಿಸುತ್ತಿದೆ ಮುಂದುವರಿದ ತಂತ್ರಜ್ಞಾನ.

Vijaya Karnataka Web 23 Jul 2016, 4:00 am
ಐವಿಎಫ್ ಇವತ್ತಿನದ್ದಲ್ಲ. ಹಲವಾರು ದಶಕಗಳಿಂದ ಕೃತಕ ಗರ್ಭಧಾರಣೆಗೆ ಪೂರಕವಾಗಿರುವ ಇಂಥದ್ದೊಂದು ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ಏರಿಸುತ್ತಿದೆ ಮುಂದುವರಿದ ತಂತ್ರಜ್ಞಾನ.
Vijaya Karnataka Web ivf a boon for couples
ಒಡಲಿನಾಚೆ ಜೀವಾಂಕುರ


ದಂಪತಿ ಸತತವಾಗಿ ಲೈಂಗಿಕ ಸಂಪರ್ಕದಲ್ಲಿದ್ದು ವರ್ಷ ಕಳೆದರೂ ಗರ್ಭ ಧರಿಸದೆ ಹೋದಾಗ ಸಂತಾನಹೀನತೆಯ ಸಂಶಯ ಕಾಡಲಾರಂಭಿಸುತ್ತದೆ. ವೈದ್ಯರ ಬಳಿ ತಪಾಸಣೆ ಮಾಡಿಸಿ, ಸಣ್ಣ ಪುಟ್ಟ

ಚಿಕಿತ್ಸೆ ನಡುವೆಯೂ ಗರ್ಭ ಧರಿಸಲು ಶಕ್ತರಾಗದೆ ಹೋದಾಗ ಐವಿಎಫ್ ನೆರವಿಗೆ ಬರುತ್ತದೆ.

ಐವಿಎಫ್ ಯಾವಾಗ?

ಇನ್ ವಿಟ್ರೋಫರ್ಟಿಲೈಸೇಷನ್ ಅಥವಾ ಐವಿಎಫ್ ಎಂದರೆ ಬಾಹ್ಯ ಫಲವತ್ತತೆಯ ಪ್ರಕ್ರಿಯೆ. ಪುರುಷನ ವೀರ್ಯಾಣು, ಮಹಿಳೆಯ ಅಂಡಾಣು ಪ್ರಯೋಗಾಲಯದಲ್ಲಿ ಫಲಿತಗೊಂಡು ರೂಪುಗೊಂಡ ಭ್ರೂಣವನ್ನು ಸ್ತ್ರೀ ಗರ್ಭಾಶಯಕ್ಕೆ ವರ್ಗಾಯಿಸುವ ಪ್ರಕ್ರಿಯೆ ಇದು. ನೈಸರ್ಗಿಕವಾಗಿ ಸಾಧ್ಯವಾಗದ್ದನ್ನು ಪ್ರಯೋಗಾಲಯದಲ್ಲಿ ನಡೆಸಲಾಗುತ್ತದೆ.

ಬಂಜೆತನ ತೀವ್ರವಾಗಿದ್ದಾಗ ಐವಿಎಫ್ ಸಹಕಾರಿ ಅನ್ನುತ್ತೇವೆ. ಆದರೆ ಈ ನಂಬಿಕೆ ತಪ್ಪು. ಕೆಲವರಿಗೆ ಇದೇ ಮೊದಲ ಅಥವಾ ಕೊನೆಯ ಚಿಕಿತ್ಸೆ ಇರಬಹುದು. ಹಲವಾರು ಚಿಕಿತ್ಸೆ ಪಡೆದ ನಂತರ ಐವಿಎಫ್‌ಗೆ ಹೋಗಬಹುದು ಅನ್ನುವುದು ಸತ್ಯವಾದರೂ ಮಹಿಳೆಯರಲ್ಲಿ ನಳಿಕೆಗಳ ದ್ವಿಪಕ್ಷೀಯ ನಿಲುಗಡೆ, ಪುರುಷರಲ್ಲಿ ಬಂಜೆತನ ಮತ್ತು ವಯಸ್ಸಾಗಿರುವಂತಹ ಸಂದರ್ಭಗಳಲ್ಲಿ ಐವಿಎಫ್ ಮೊದಲ ಚಿಕಿತ್ಸೆಯ ಆಯ್ಕೆ. ಯಾವುದೇ ಸಮಸ್ಯೆಇಲ್ಲವೆಂದರೆ ಮದುವೆಯಾಗಿ ಸುಮಾರು 5ವರ್ಷ

ಐವಿಎಫ್‌ಗೆ ಒಳಗಾಗುವುದು ಒಳ್ಳೆಯದಲ್ಲ. ತಡ ಮದುವೆ ಅಂದರೆ ಮದುವೆಯಾದಾಗಲೇ 40 ವರ್ಷವಾದಾಗ ಸಹಜವಾಗಿ ಮಗು ಆಗದಿದ್ದಾಗ ಈ ವಿಧಾನ ಆರಿಸಿಕೊಳ್ಳಬಹುದು. ಪುರುಷನ ವೀರ್ಯ ಸಂಖ್ಯೆ ತೀರ ಕಮ್ಮಿ ಇದ್ದಾಗ, ಮಹಿಳೆಯ ಗರ್ಭನಾಳ ಕೆಲಸ ಕಾರ್ಯ ನಿರ್ವಹಿಸಲು ವಿಫಲವಾದಾಗ ಐವಿಎಫ್‌ಗೆ ಹೋಗಬಹುದು ಎನ್ನುತ್ತಾರೆ ಐವಿಎಫ್ ತಜ್ಞರು.

ಯಶಸ್ಸು

ಐವಿಎಫ್ ಚಿಕಿತ್ಸೆಯ ಇತ್ತೀಚೆಗೆ ಯಶಸ್ಸಿನ ಪ್ರಮಾಣ ಹೆಚ್ಚಿಸುವ ತಂತ್ರಜ್ಞಾನ ಅಭಿವದ್ಧಿಯಾಗಿರುವುದರಿಂದ ಐವಿಎಫ್ ಫಲಿತಾಂಶದ ಬಗ್ಗೆ ಅಂಜುವ ಅಗತ್ಯವಿಲ್ಲ.

ಫಲವತ್ತತೆಯ ಚಿಕಿತ್ಸೆ ಪಡೆದರೆ ಅವಳಿ ಅಥವಾ ತ್ರಿವಳಿಗಳಾಗುವ ಸಂಭವವಿದೆ ಅನ್ನುವ ಭಯ ಹಲವರಲ್ಲಿದೆ. ಆದರೆ ಏಕೈಕ ಗರ್ಭ ವರ್ಗಾವಣೆ ಜತೆ ಐವಿಎಫ್‌ನಿಂದಾದರೆ ಅವಳಿ ಮಕ್ಕಳಾಗುವ ಸಂಭವ ಶೇ.1ರಷ್ಟು ಕಮ್ಮಿ ಆಗುತ್ತದೆ. ಐವಿಎಫ್ ಫಲ ಕೊಡುತ್ತಿಲ್ಲ ಅಂತಾದರೆ ಬೇರೆ ಚಿಕಿತ್ಸೆ ಪಡೆಯಬಹುದು. ಆದರೆ ಇದರ ಯಶಸ್ಸು ರೋಗಿಯ ವಯಸ್ಸು ಮತ್ತು ವೈಯಕ್ತಿಕ ಆರೋಗ್ಯದ ಸ್ಥಿತಿಗತಿ ಆಧರಿಸಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ