ಆ್ಯಪ್ನಗರ

ಸನ್ನಿ ಡೇಗೆ ಸಿಂಪಲ್ ಟಿಪ್ಸ್

ಬಿಸಿಲ ಬೇಗೆ ಇದು. ತಡೆಯಲಿಕ್ಕಾಗದಷ್ಟು. ಪದೇಪದೆ ಗಂಟಲ ಪಸೆ ಆರುತ್ತದೆ. ದೇಹ ದಣಿದಷ್ಟು ಬಾರಿ ನಿತ್ರಾಣವಾಗುತ್ತದೆ. ಹಾಗಂತ ಮನಸ್ಸಿಗೆ ಅನಿಸಿದ್ದೆಲ್ಲ ಮಾಡಬೇಡಿ. ಏಕೆಂದರೆ ಅದು ದೇಹಕ್ಕೆ ಒಗ್ಗುವುದಿಲ್ಲ.

Vijaya Karnataka Web 20 Mar 2016, 4:25 am
ಬಿಸಿಲ ಬೇಗೆ ಇದು. ತಡೆಯಲಿಕ್ಕಾಗದಷ್ಟು. ಪದೇಪದೆ ಗಂಟಲ ಪಸೆ ಆರುತ್ತದೆ. ದೇಹ ದಣಿದಷ್ಟು ಬಾರಿ ನಿತ್ರಾಣವಾಗುತ್ತದೆ. ಹಾಗಂತ ಮನಸ್ಸಿಗೆ ಅನಿಸಿದ್ದೆಲ್ಲ ಮಾಡಬೇಡಿ. ಏಕೆಂದರೆ ಅದು ದೇಹಕ್ಕೆ ಒಗ್ಗುವುದಿಲ್ಲ. ಬೇಸಿಗೆಗೆ ಜೀವನಶೈಲಿ ಬದಲಾಗಬೇಕು. ಧರಿಸುವ ಬಟ್ಟೆಯಿಂದ ಹಿಡಿದು ಸೇವಿಸುವ ಪಾನೀಯತನಕ. ಬದಲಾದ ಜೀವನಶೈಲಿ ಉರಿ ಬಿಸಿಲಿಂದ ನಿಮ್ಮನ್ನು ಬಚಾವ್ ಮಾಡಬೇಕು. ಮನಸ್ಸು ಹಾಗೂ ದೇಹವನ್ನು ಆಹ್ಲಾದಗೊಳಿಸಬೇಕು.
Vijaya Karnataka Web simple tips for sunny day
ಸನ್ನಿ ಡೇಗೆ ಸಿಂಪಲ್ ಟಿಪ್ಸ್


ಬೇಸಿಗೆಗೆ ಸನ್‌ಗ್ಲಾಸ್ ಅನ್ನೋದು ಕೆಲವರಿಗೆ ಅನಿವಾರ‌್ಯ. ಇನ್ನೂ ಹಲವರಿಗೆ ಅದೇ ಫ್ಯಾಷನ್. ಆದ್ರೆ ಅದು ಸೂರ್ಯನ ಅತಿನೇರಳೆಯ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುವಂತಿರಬೇಕು. ಸನ್‌ಗ್ಲಾಸ್‌ಗಳನ್ನು ಆಯ್ಕೆ ಮಾಡುವಾಗ ಅದು ಅಗಲವಾಗಿ, ಕಣ್ಣಿನ ಎರಡೂ ಬದಿ ಮುಚ್ಚುವಂತಿದ್ದು, ಕಣ್ಣಿಗೆ ಹತ್ತಿರವಿರಬೇಕು.

ಬೀದಿ ಬದಿಯ ಆಹಾರ ಸೇವನೆ ಬೇಡ. ಕಂಡಕಂಡಲ್ಲಿ ನೀರು ಕುಡಿಯದೆ ಮನೆಯಲ್ಲೇ ಕಾಯಿಸಿ ಆರಿಸಿದ ನೀರು ಕುಡಿಯಿರಿ.

ಹೊರಗಡೆ ಹೋದಾಗ ಇತರೇ ಪಾನೀಯ ಬದಲು ಎಳನೀರು ಕುಡಿಯಿರಿ.

ಫ್ರಿಜ್‌ನಲ್ಲಿಟ್ಟ ಪದಾರ್ಥಗಳನ್ನು ಊಟಕ್ಕೆ ಮುಂಚೆ ಪುನಃ ಬಿಸಿ ಮಾಡುವುದನ್ನು ಮರೆಯಬೇಡಿ.

ಬೇಸಿಗೆಗೆ ಸಾಧ್ಯವಾದಷ್ಟು ಕಾಟನ್ ಬಟ್ಟೆ ಧರಿಸಿ. ತಿಳಿ ಬಣ್ಣಗಳ ಬಟ್ಟೆ ಒಳ್ಳೆಯದು.

ಬೆವರಿಗೆ ಬಣ್ಣ ಬಿಡುವ ಬಟ್ಟೆ ಅಥವಾ ಆಭರಣ ಧರಿಸಬೇಡಿ.

ಬೇಸಿಗೆ ಫ್ಯಾಷನ್ ಗಮನಿಸುತ್ತಿರಿ. ನಿಮಗೆ ಕಂಫರ್ಟ್ ಎನಿಸುವ ಹಲವಾರು ಆ್ಯಕ್ಸೆಸರೀಸ್ ಮಾರುಕಟ್ಟೆಯಲ್ಲಿ ಸಿಗುತ್ತವೆ.

ಬಿಗಿಯಾದ ಚಪ್ಪಲಿ ಕೂಡ ಬೇಸಿಗೆಗೆ ಒಳ್ಳೆಯದಲ್ಲ. ಸಾಧ್ಯವಾದಷ್ಟು ಗಾಳಿ ಆಡಲು ಅವಕಾಶವಿರುವ ಚಪ್ಪಲಿ ಧರಿಸಿ.

ಬಿಸಿಲಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಬೇಡಿ. ಸನ್‌ಸ್ಟ್ರೋಕ್‌ನಂಥ ಸಮಸ್ಯೆ ಕಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ