ಆ್ಯಪ್ನಗರ

ಯಾವಾಗ ನೀರು ಕುಡಿಯುವುದು ಒಳ್ಳೆಯದಲ್ಲ?

ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಬೇಕು. ಆದರೆ ಅತಿಯಾಗಿ ನೀರು ಕುಡಿಯುವುದು ಕೂಡ ಆರೋಗ್ಯಕರವಲ್ಲ.

Vijaya Karnataka Web 10 Apr 2017, 11:08 am
ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಬೇಕು. ಆದರೆ ಅತಿಯಾಗಿ ನೀರು ಕುಡಿಯುವುದು ಕೂಡ ಆರೋಗ್ಯಕರವಲ್ಲ. ಅದರಲ್ಲೂ ಈ ಕೆಳಗಿನ ಸಂದರ್ಭದಲ್ಲಿ ನೀರು ಕುಡಿಯದಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
Vijaya Karnataka Web when drinking water may be bad for you
ಯಾವಾಗ ನೀರು ಕುಡಿಯುವುದು ಒಳ್ಳೆಯದಲ್ಲ?


1. ತುಂಬಾ ನೀರು ಕುಡಿಯುವುದು ಒಳ್ಳೆಯದಲ್ಲ
ಸಾಕಷ್ಟು ನೀರಿನಂಶ ನಮ್ಮ ದೇಹದಲ್ಲಿರುವಾಗ ಮತ್ತೆ ನೀರು ಕುಡಿಯುವುದರಿಂದ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗುವುದು. ಇದರಿಂದ ಹೈಪೊನೇಟ್ರಿಮಿಯಾದಂತಹ ಸಮಸ್ಯೆಯೂ ಕಂಡು ಬರುವುದು. ಇದರಿಂದ ಮೈ ಊದಿಕೊಳ್ಳುವುದು, ತಲೆಸುತ್ತು ವಾಂತಿ ಈ ರೀತಿಯ ಸಮಸ್ಯೆಗಳು ಕಂಡು ಬರುವುದು.

2. ದೇಹದಲ್ಲಿ ಸಾಕಷ್ಟು ನೀರಿನಂಶ ಇದೆ ಎಂದು ಹೇಗೆ ಕಂಡು ಹಿಡಿಯುವುದು:
ನಮ್ಮ ದೇಹಕ್ಕೆ ನೀರಿನಂಶ ಬೇಕಾಗಿದೆಯೇ ಇಲ್ಲವೇ ಎಂಬುದನ್ನು ಮೂತ್ರದ ಬಣ್ಣದಲ್ಲಿ ಕಂಡು ಹಿಡಿಯಬಹುದು. ತುಂಬಾ ಜನರು ಅದರತ್ತ ಗಮನ ಕೊಡುವುದೇ ಇಲ್ಲ. ಮೂತ್ರದಲ್ಲಿ ಯಾವುದೇ ಬಣ್ಣ ವ್ಯತ್ಯಾಸ ಕಂಡು ಬರದಿದ್ದಲ್ಲಿ ನೀರು ಕುಡಿಯುವ ಅಗತ್ಯವಿಲ್ಲ. ಸ್ವಲ್ಪ ಹಳದಿ ಬಣ್ಣ ಗೋಚರಿಸಿದರೆ 2-3 ಲೋಟ ನೀರು ಕುಡಿಯಿರಿ.

3. ಈ ತಪ್ಪುಗಳ ಮಾಡದಿರಿ

* ವಾಟರ್ ಡಯಟ್‌: ಕೆಲವರು ತೆಳ್ಳಗಾಗಲು ವಾಟರ್‌ ಡಯಟ್‌ ಮಾಡುತ್ತಾರೆ. ಆದರೆ ಈ ಡಯಟ್ ಕ್ರಮ ಆರೋಗ್ಯಕರವರಲ್ಲ. ಈ ಡಯಟ್‌ ಮಾಡಿದರೆ ಪೋಷ್ಟಿಕಾಂಶದ ಕೊರತೆ ಉಂಟಾಗುತ್ತದೆ.

*ವ್ಯಾಯಾಮ ಬಳಿಕ: ವ್ಯಾಯಾಮದ ಬಳಿಕ ಬರೀ ನೀರು ಕುಡಿಯುವ ಬದಲು ಹಣ್ಣುಗಳ ಜ್ಯೂಸ್‌ ಕುಡಿಯುವುದು ಒಳ್ಳೆಯದು.

* ಊಟವಾದ ತಕ್ಷಣ ನೀರು ಕುಡಿಯಬೇಡಿ: ಊಟ ಮಾಡಿದ ತಕ್ಷಣ ನೀರು ಕುಡಿಯುವ ಬದಲು ಅರ್ಧ ಗಂಟೆ ಬಿಟ್ಟು ಕುಡಿದರೆ ದೇಹವು ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಲು ಸಹಾಯವಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ