ಆ್ಯಪ್ನಗರ

ವಾಯುವಿಹಾರ ಅತ್ಯುತ್ತಮ

ಸುಂದರ ಜೀವನಶೈಲಿಗಾಗಿ ಹುಡುಕಾಡಿದೆ. ಕೊನೆಗೆ ಹೊಳೆದಿದ್ದು ವಾಕಿಂಗ್‌. ನಮ್ಮ ಮನೆಯ ಪಕ್ಕದ ಬೀದಿಗಳಲ್ಲಿ ವಾಕ್‌ ಮಾಡಲು ಆರಂಭಿಸಿದೆ.

Vijaya Karnataka Web 18 Sep 2016, 4:51 am
ನಾನು ಮೊದಮೊದಲು ಜಿಮ್‌ಗೆ ಹೋಗುತ್ತಿದ್ದೆ. ಆದರೆ ಅದು ನನಗೆ ಯಾಕೋ ಇದೆಲ್ಲ ಸರಿ ಹೊಂದುತ್ತಿಲ್ಲ ಎಂದೆನಿಸಲಾರಂಭಿಸಿತು. ಸಹಜವಾಗಿ ಏನಾದರೂ ಮಾಡಬೇಕು ದೇಹದ ಫಿಟ್ನೆಸ್‌ ಕಾಪಾಡಿಕೊಳ್ಳಲು ಎಂಬುದನ್ನು ನಿರ್ಧರಿಸಿಯೇ ಸುಂದರ ಜೀವನಶೈಲಿಗಾಗಿ ಹುಡುಕಾಡಿದೆ. ಕೊನೆಗೆ ಹೊಳೆದಿದ್ದು ವಾಕಿಂಗ್‌. ನಮ್ಮ ಮನೆಯ ಪಕ್ಕದ ಬೀದಿಗಳಲ್ಲಿ ವಾಕ್‌ ಮಾಡಲು ಆರಂಭಿಸಿದೆ.
Vijaya Karnataka Web walking is best
ವಾಯುವಿಹಾರ ಅತ್ಯುತ್ತಮ


ಹೀಗೆ ತಾಸುಗೆಟ್ಟಲೆ ವಾಕ್‌ ಮಾಡುವುದು ಯಾವತ್ತೂ ಆಯಾಸ ಎನಿಸುವುದಿಲ್ಲ. ಅದರಿಂದ ನನಗೆ ಖುಷಿ ಸಿಗುತ್ತೆ. ಇದು ಆರೋಗ್ಯಕ್ಕೆ ಒಳ್ಳೆಯದು. ಯಾವುದೇ ಖರ್ಚಿಲ್ಲದೇ ಸುಲಭ ಮಾರ್ಗದಲ್ಲಿ ಫಿಟ್ನೆಸ್‌ ಕಾಪಾಡಿಕೊಳ್ಳುವ ವಿಧಾನ ಇದು.

ನಮ್ಮ ಮನಸ್ಸಿಗೆ ಇಷ್ಟವಾಗುವಂಥ ವರ್ಕೌಟ್‌ ಮಾಡಬೇಕು. ನಮ್ಮ ದೇಹದ ಸ್ಥಿತಿಗೆ ಹೊಂದಿಕೊಳ್ಳಬೇಕು. ಅದು ಬಿಟ್ಟು ಕಷ್ಟ ಪಟ್ಟು ಏನೇ ಮಾಡಿದರೂ ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಊಟದ ವಿಷಯದಲ್ಲಿ ಎಚ್ಚರಿಕೆ ವಹಿಸುತ್ತೇನೆ. ಆದರೆ ಊಟವೆಲ್ಲ ಬಿಟ್ಟು ಡಯಟ್‌ ಮಾಡುವುದಿಲ್ಲ. ಪ್ರತಿನಿತ್ಯ ಯಥೇಚ್ಚವಾಗಿ ನೀರು ಕುಡಿಯುತ್ತೇನೆ. ಏಕೆಂದರೆ ಅದು ದೇಹವನ್ನು ಆರೋಗ್ಯಯುತವಾಗಷ್ಟೆ ಕಾಪಾಡುವುದಿಲ್ಲ. ಸದಾ ಉಲ್ಲಸಿತವಾಗಿಡುತ್ತದೆ.

ಊಟದ ಶೈಲಿಯು ಕೂಡ ನನ್ನದು ವಿಭಿನ್ನ. ಊಟವನ್ನು ಹೇಗೆ ಖುಷಿಯಿಂದ ತಿನ್ನುತ್ತೇನೊ ಹಾಗೆ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತೇನೆ. ಅದು ಕೂಡ ನನ್ನ ಸೌಂದರ್ಯವನ್ನು ದುಪ್ಪಟ್ಟುಗೊಳಿಸಲು ಸಹಕಾರಿಯಾಗಿದೆ. ದಿನಪೂರ್ತಿ ಉಲ್ಲಾಸಯುತವಾಗಿರಲು ನಿರಂತರವಾಗಿ ವಾಕ್‌ ಮಾಡುವುದು ಕಾರಣ. ಸದಾ ಮನಸ್ಸಿಗೆ ಖುಷಿ ನೀಡುವ ಲೈಫ್‌ಸ್ಟೈಲ್‌ ರೂಪಿಸಿಕೊಂಡಿದ್ದೇನೆ.
-ಶೋಭಿತಾ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ