ಆ್ಯಪ್ನಗರ

ಗುಲಾಬಿ ಗಿಡದ ನಿರ್ವಹಣೆ

ಕೈದೋಟದಲ್ಲಿರುವ ಎಲ್ಲಾ ಗಿಡಗಳ ಪೈಕಿ ಗುಲಾಬಿ ಹೂವಿನ ಗಿಡಗಳಿಗೆ ಹೆಚ್ಚಿನ ಆರೈಕೆ ಮತ್ತು ರಕ್ಷಣೆ ಬೇಕಾಗುತ್ತದೆ...

Vijaya Karnataka Web 25 Mar 2017, 5:30 am

-ಕೈದೋಟದಲ್ಲಿರುವ ಎಲ್ಲಾ ಗಿಡಗಳ ಪೈಕಿ ಗುಲಾಬಿ ಹೂವಿನ ಗಿಡಗಳಿಗೆ ಹೆಚ್ಚಿನ ಆರೈಕೆ ಮತ್ತು ರಕ್ಷಣೆ ಬೇಕಾಗುತ್ತದೆ.

-ತೋಟದಲ್ಲಿ ತುಂಬಾ ಒಣಗಿದ ಎಲೆಗಳು, ಮರದ ಕಾಂಡಗಳು ಬಿದ್ದಿದ್ದರೆ ಅದರಿಂದ ಗುಲಾಬಿ ಗಿಡಗಳಿಗೆ ಬೇಗ ಸೋಂಕು ಉಂಟಾಗುತ್ತದೆ. ಆದ್ದರಿಂದ ಗಿಡದ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ.

-ಗುಲಾಬಿ ಗಿಡಗಳನ್ನು ತಾಜಾ ಮತ್ತು ತೇವಾಂಶಭರಿತವಾಗಿಡಲು ನಿಯಮಿತವಾಗಿ ನೀರು ಹಾಕಿ. ಇದರಿಂದ ಬೇರುಗಳಿಗೆ ತಂಪು ಸಿಗುತ್ತದೆ. ಗುಲಾಬಿ ಗಿಡಗಳು ಬೆಳೆಯಲು ಮತ್ತು ಹೂ ಬಿಡಲು ಹೆಚ್ಚಿನ ನೀರು ಬೇಕಾಗುತ್ತದೆ.

-ಈ ಗಿಡಕ್ಕೆ ಕೆಂಪು ಮಣ್ಣು ಮತ್ತು ಗೊಬ್ಬರವನ್ನು ಹದಿನೈದು ದಿನಕ್ಕೊಮ್ಮೆ ನೀಡಿದರೆ ಉತ್ತಮ. ಇದು ಕಾಂಡದ ಆರಂಭಿಕ ಭಾಗವನ್ನು ರಕ್ಷಿಸುತ್ತದೆ.

-ಪ್ರತಿ ಎರಡು ತಿಂಗಳಿಗೊಮ್ಮೆ ಗುಲಾಬಿ ಗಿಡದ ಕಾಂಡಗಳನ್ನು ಕತ್ತರಿಸಿದರೆ ಹೊಸ ರೆಂಬೆಗಳು ಕವಲೊಡೆಯುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ