ಆ್ಯಪ್ನಗರ

ಅಂತಾರಾಷ್ಟ್ರೀಯ ಮಕ್ಕಳ ದಿನಾಚರಣೆ

ಮುದ್ದು ಮುದ್ದಾದ ಮಕ್ಕಳನ್ನು ಕಂಡರೆ ಎಲ್ಲರಿಗೂ ಇಷ್ಟ. ಬಾಲ್ಯಾವಸ್ಥೆಯಲ್ಲಿರುವ ಎಲ್ಲಾ ಮಕ್ಕಳ ಆಟ, ಪಾಠ, ನೋಟ ಎಲ್ಲವೂ ಚೆಂದವೆ. ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳಿರಲವ್ವ ಮನೆ ತುಂಬಾ ಎಂದು ಹೇಳಿದ್ದಾರೆ.

Vijaya Karnataka Web 20 Nov 2016, 4:39 am
ಮುದ್ದು ಮುದ್ದಾದ ಮಕ್ಕಳನ್ನು ಕಂಡರೆ ಎಲ್ಲರಿಗೂ ಇಷ್ಟ. ಬಾಲ್ಯಾವಸ್ಥೆಯಲ್ಲಿರುವ ಎಲ್ಲಾ ಮಕ್ಕಳ ಆಟ, ಪಾಠ, ನೋಟ ಎಲ್ಲವೂ ಚೆಂದವೆ. ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳಿರಲವ್ವ ಮನೆ ತುಂಬಾ ಎಂದು ಹೇಳಿದ್ದಾರೆ.
Vijaya Karnataka Web international childrens day
ಅಂತಾರಾಷ್ಟ್ರೀಯ ಮಕ್ಕಳ ದಿನಾಚರಣೆ


ಮಕ್ಕಳು ಮನೆ ತುಂಬಾ ಓಡುತ್ತಿದ್ದಾರೆ ಅದುವೇ ಕಣ್ಣಿಗೆ ತಂಪು. ಆದರೆ ಎಲ್ಲಾ ಮಕ್ಕಳ ಬಾಲ್ಯ ಒಂದೇ ತೆರನಾಗಿರುವುದಿಲ್ಲ. ಕೆಲವರು ಸುಖದ ಸುಪ್ಪತ್ತಿಗೆಯಲ್ಲಿದ್ದರೆ ಇನ್ನು ಕೆಲವು ಮಕ್ಕಳ ಬಾಲ್ಯದಲ್ಲಿಯೇ ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಈ ಭರದಲ್ಲಿ ತಮಗೂ ಒಂದು ಬಾಲ್ಯವಿದೆ, ತಮಗೂ ಭಾವನೆಗಳಿವೆ ಮತ್ತು ಕೆಲವು ಮೂಲಭೂತ ಹಕ್ಕುಗಳಿವೆ ಎಂಬುದನ್ನು ಮರೆತು ಬಿಟ್ಟಿರುತ್ತಾರೆ. ಈ ಸಮಸ್ಯೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ, ವಿಶ್ವದ ಎಲ್ಲಾ ರಾಷ್ಟ್ರಗಳ ಮಕ್ಕಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವು ಮಕ್ಕಳಂತೂ ವಿವಿಧ ಕಡೆಗಳಿಂದ ನಾನಾ ದೌರ್ಜನ್ಯಗಳಿಗೆ ತುತ್ತಾಗುತ್ತಲೇ ಬರುತ್ತಿದ್ದಾರೆ. ಮಕ್ಕಳ ಮೇಲೆ ಈ ದೌರ್ಜನ್ಯ ತಡೆಯಲು ಮತ್ತು ಅವರಿಗೂ ಒಂದು ಬದುಕಿದೆ, ಕೆಲವು ಮೂಲಭೂತ ಹಕ್ಕುಗಳಿವೆ ಎಂಬುದನ್ನು ತಿಳಿಸುವ ಉದ್ದೇಶದಿಂದ ಪ್ರತಿ ನವೆಂಬರ್‌ 20 ರಂದು ಅಂತಾರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ.

ಯುನಿವರ್ಸಲ್‌ ಚಿಲ್ಡ್ರನ್ಸ್‌ ಡೇಯನ್ನು ಆರಂಭಿಸುವಂತೆ ಶಿಫಾರಸ್ಸು ಮಾಡಿದ್ದು ವಿಶ್ವಸಂಸ್ಥೆ. 20 ನವೆಂಬರ್‌ 1959 ರಂದು ಅಂದು ಮಕ್ಕಳ ಹಕ್ಕುಗಳ ಘೋಷಣೆಯನ್ನು ಅನುಮೋದಿಸಿತು. ಇದಕ್ಕಿಂತ ಮೊದಲು ಅಂದರೆ 1954 ರಿಂದ ಬ್ರಿಟನ್‌ನಲ್ಲಿ ಮಕ್ಕಳ ದಿನಾಚರಣೆ ಆಚರಣೆಯಲ್ಲಿದ್ದರೂ ಅದಕ್ಕೆ ಜಾಗತಿಕ ಮನ್ನಣೆ ಇರಲಿಲ್ಲ. ವಿಶ್ವಸಂಸ್ಥೆ ಈ ದಿನವನ್ನು ಶಿಫಾರಸು ಮಾಡಿದ ಬಳಿಕ ಅದು ಸಾರ್ವತ್ರಿಕ ಆಚರಣೆಯಾಯಿತು. ಮಕ್ಕಳ ಮೂಲಭೂತ ಹಕ್ಕುಗಳ ರಕ್ಷ ಣೆ, ಅವರಿಗೆ ಸೂಕ್ತ ಲಸಿಕೆ ನೀಡುವುದು, ಆರೋಗ್ಯ ಕಾಳಜಿ, ಬಾಲ ಕಾರ್ಮಿಕರನ್ನು ತಡೆಯುವುದು, ಶಿಕ್ಷ ಣ ನೀಡುವುದು ಮುಂತಾದ ಕಾರ್ಯಕ್ರಮಗಳನ್ನು ಈ ದಿನಾಚರಣೆಯಡಿ ಹಮ್ಮಿಕೊಳ್ಳಲಾಗುತ್ತದೆ. ಭಾರತದಲ್ಲಿ ನವೆಂಬರ್‌ 14 ರಂದು ರಾಷ್ಟ್ರೀಯ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ